Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳು ಸಿನಿಮಾದಲ್ಲಿ ನಟಿಸುವ ಅವಕಾಶ ಕೈಬಿಟ್ಟ ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಅವರು ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಡಿತ್ತು. ಶಿವಣ್ಣ ಸಹ, ತಾವು ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ಆ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಶಿವರಾಜ್ ಕುಮಾರ್.
ತಮಿಳಿನ ಖ್ಯಾತ ನಟ ವಿಕ್ರಂ ನಟನೆಯ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರಿಗೆ ಮುಖ್ಯ ಪಾತ್ರದ ಆಫರ್ ನೀಡಲಾಗಿತ್ತು. ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಲು ಶಿವಣ್ಣ ಸಹ ಉತ್ಸುಕರಾಗಿದ್ದರು.
ಆದರೆ ಶಿವರಾಜ್ ಕುಮಾರ್ ಅವರಿಗೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅನಿವಾರ್ಯವಾಗಿ ತಮಿಳು ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಶಿವರಾಜ್ ಕುಮಾರ್ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಅವನ್ನು ಬೇಗ ಮುಗಿಸುವ ಕಾರಣದಿಂದ ತಮಿಳು ಸಿನಿಮಾಕ್ಕೆ ಒಲ್ಲೆ ಎಂದಿದ್ದಾರೆ.

ನಟಿಸುವ ಆಸೆಯಿತ್ತು ಶಿವರಾಜ್ ಕುಮಾರ್ ಗೆ
ಈ ಹಿಂದೆ ಕಾರ್ತಿಕ್ ಸುಬ್ಬರಾಜು ಇಂದ ಕತೆ ಕೇಳಿದ್ದ ಶಿವರಾಜ್ ಕುಮಾರ್, 'ಕಾರ್ತಿಕ್ ಸುಬ್ಬರಾಜು ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದ್ದೇನೆ. ಈಗ ಅವರು ಹೇಳಿರುವ ಕತೆ ಸಹ ಅದ್ಭುತವಾಗಿದೆ. ಸಾಕಷ್ಟು ಭಾವನಾತ್ಮಕ ದೃಶ್ಯಗಳು ಸಿನಿಮಾದಲ್ಲಿವೆ, ನಾನು ಆ ಸಿನಿಮಾದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ' ಎಂದಿದ್ದರು.

ಡೇಟ್ಸ್ ಹೊಂದಾಣಿಕೆ ಆಗದ ಕಾರಣ ನಿರಾಕರಣೆ
ಆದರೆ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶಿವರಾಜ್ ಕುಮಾರ್ ಗೆ ತಮಿಳು ಸಿನಿಮಾದಲ್ಲಿ ನಟಿಸಲು ಡೇಟ್ಸ್ ಹೊಂದಿಕೆ ಆಗಿಲ್ಲ. ಈಗ ಕೈಲಿರುವ ಸಿನಿಮಾಗಳನ್ನು ಸಹ ಬೇಗನೇ ಮುಗಿಸುವ ಒತ್ತಡ ಇರುವ ಕಾರಣ ಸಿನಿಮಾದ ಅವಕಾಶವನ್ನು ಒಲ್ಲದ ಮನಸ್ಸಿನಿಂದ ನಿರಾಕರಿಸಿದ್ದಾರೆ ಶಿವಣ್ಣ.

ತೆಲುಗಿನ ಸಿನಿಮಾದಲ್ಲಿ ನಟಿಸಿರುವ ಶಿವರಾಜ್ ಕುಮಾರ್
ಈ ಹಿಂದೆ ಶಿವರಾಜ್ ಕುಮಾರ್ ಅವರು, ತೆಲುಗಿನ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾದಲ್ಲಿ ನಟ ಬಾಲಕೃಷ್ಣ ಜೊತೆಗೆ ನಟಿಸಿದ್ದರು. ಶಿವಣ್ಣ ನಟಿಸಿದ್ದ ರಾಮ್ ಗೋಪಾಲ್ ವರ್ಮಾರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಸಹ ತೆಲುಗಿನಲ್ಲಿ ಬಿಡುಗಡೆ ಆಗಿತ್ತು.

ಹಲವು ಸಿನಿಮಾಗಳು ಶಿವಣ್ಣ ಕೈಯಲ್ಲಿವೆ
ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ನಡುವೆ ಶಿವಪ್ಪ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ರವಿ ಗೊಲ್ಲಪುಡಿ ನಿರ್ದೇಶಿಸಲಿರುವ ಹೆಸರಿಡದ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ. ಇನ್ನೂ ಕೆಲವು ಹೆಸರಿಡದ ಸಿನಿಮಾಗಳು ಸರತಿ ಸಾಲಿನಲ್ಲಿ ಶಿವಣ್ಣಗಾಗಿ ಕಾಯುತ್ತಿವೆ.