For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ ಇಲ್ಲ!

  By Bhagya.s
  |

  ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹುಟ್ಟುಹಬ್ಬ ಅಂದರೆ ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಅದೊಂದು ದಿನ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಜೊತೆಗೆ ಕಾಲ ಕಳೆಯುತ್ತಾರೆ. ಹಾಗಾಗಿ ಪ್ರತಿ ವರ್ಷ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕಾಗಿ ಅಭಿಮಾನಿ ಬಳಗ ಕಾಯುತ್ತಿರುತ್ತೆ.

  ಇದೇ ಜುಲೈ 12ರಂದು ನಟ ಶಿವರಾಜ್ ಕುಮಾರ್ 60ನೇ ಹುಟ್ಟುಹಬ್ಬ. ಈ ದಿನವನ್ನು ಶಿವಣ್ಣನ ಅಭಿಮಾನಿಗಳು ವಿಶೇಷವಾಗಿ ಆಚರಿಸಲು ನೂರಾರು ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ಈ ಬಾರಿ ಶಿವರಾಜ್​ಕುಮಾರ್​ ತಮ್ಮ ಬರ್ತ್ ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

  ಕರುನಾಡ ಮುತ್ತು ಪುನೀತ್ ರಾಜ್​ಕುಮಾರ್, ನಮ್ಮನ್ನು ಅಗಲಿ ಅನೇಕ ದಿನಗಳೇ ಕಳೆದಿದೆ. ಆದರೆ ಇದರ ನೋವಿನಿಂದ ಅವರ ಅಭಿಮಾನಿಗಳಾಗಲಿ ಅಥವಾ ರಾಜ್​ ಕುಟುಂಬದವರಾಗಲಿ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ.

  ಅಪ್ಪು ಅಗಲಿಕೆ ನೋವು!

  ಅಪ್ಪು ಅಗಲಿಕೆ ನೋವು!

  ಜುಲೈ 12ರಂದು ಶಿವಣ್ಣನ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ತಯಾರಾಗಿದ್ದರೆ, ಅವರಿಗೊಂದು ಕಹಿ ಸುದ್ದಿ ಇದೆ. ಯಾಕೆಂದರೆ, ನಟ ಶಿವರಾಜ್ ಕುಮಾರ್ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ಅಭಿಮಾನಿಗಳಿಗೆ ಸಂಭ್ರಮದ ಆಚರಣೆ ಇರುವುದಿಲ್ಲ. ಮನೆಯ ಬಳಿ ಅದ್ಧೂರಿ ಸೆಲೆಬ್ರೇಷನ್ ಇರುವುದಿಲ್ಲ. ಅಪ್ಪು ಅಗಲಿಕೆಯ ನೋವಿನಿಂದಾಗಿ ಶಿವಣ್ಣ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

  ಶಿವಣ್ಣ ಹುಟ್ಟುಹಬ್ಬಕ್ಕೆ ಸರ್ಪ್ರೈಸ್!

  ಶಿವಣ್ಣ ಹುಟ್ಟುಹಬ್ಬಕ್ಕೆ ಸರ್ಪ್ರೈಸ್!

  ಈ ಬಾರಿ ಶಿವಣ್ಣ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ಆದರೆ ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಶಿವಣ್ಣ ಫ್ಯಾನ್ಸ್​ಗೆ ಸರ್ಪ್ರೈಸ್ ಗಿಫ್ಟ್ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹುಟ್ಟುಹಬ್ಬದ ಅಂಗವಾಗಿ ಶಿವಣ್ಣ ಹೊಸ ಸಿನಿಮಾದ ಘೋಷಣೆ ಮಾಡುವ ಸಾಧ್ಯತೆ ಇದೆ. ಶಿವರಾಜ್​ಕುಮಾರ್ ಅವರ ಹೊಸ ಚಿತ್ರಕ್ಕೆ ತಯಾರಿ ನಡೆಯುತ್ತಿದ್ದು, ಸಿನಿಮಾ ಲಾಂಚ್ ಆಗಲಿದೆಯಂತೆ.

  'ಬೈರಾಗಿ'ಯಾಗಿ ದರ್ಶನ ಕೊಟ್ಟ ಶಿವಣ್ಣ!

  'ಬೈರಾಗಿ'ಯಾಗಿ ದರ್ಶನ ಕೊಟ್ಟ ಶಿವಣ್ಣ!

  ಇನ್ನು ನಟ ಶಿವರಾಜ್ ಕುಮಾರ್ ಇತ್ತೀಚೆಗೆ 'ಬೈರಾಗಿ' ಆಗಿ ದರ್ಶನ ಕೊಟ್ಟಿದ್ದಾರೆ. 'ಬೈರಾಗಿ' ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾ. ಚಿತ್ರದಲ್ಲಿ ನಟ ಶಿವಣ್ಣನ ವಿಭಿನ್ನ ಅವತಾರಕ್ಕೆ ಭಾರಿ ಮೆಚ್ಚುಗೆ ಬಂದಿದೆ. ಈ ಚಿತ್ರದಲ್ಲೂ ಕೂಡ ಶಿವರಾಜ್ ಕುಮಾರ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

  'ವೇದ' ಚಿತ್ರದಲ್ಲಿ ಶಿವಣ್ಣ ಬ್ಯೂಸಿ!

  'ವೇದ' ಚಿತ್ರದಲ್ಲಿ ಶಿವಣ್ಣ ಬ್ಯೂಸಿ!

  ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ಶಿವಣ್ಣ ಹೊರ ಬಂದಿಲ್ಲ. ಆದರೆ ಅದೇ ನೋವಿನ ಜೊತೆಗೆ ತಮ್ಮ ಮುಂದಿನ ಕೆಲಸಗಳನ್ನು ಶುರು ಮಾಡಿದ್ದಾರೆ. ಸದ್ಯ 'ವೇದ' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇತ್ತ ಕಿರುತೆರೆ ಕಾರ್ಯಕ್ರಮದಲ್ಲೂ ಕೂಡ ಶಿವರಾಜ್ ಕುಮಾರ್ ಭಾಗಿ ಆಗುತ್ತಿದ್ದಾರೆ. ಜೊತೆಗೆ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಲಾಂಚ್ ಕೂಡ ಆಗಲಿದೆ.

  English summary
  Shiva Rajkumar Not Celebrate Birthday With Fans On July 12th
  Monday, July 11, 2022, 8:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X