For Quick Alerts
  ALLOW NOTIFICATIONS  
  For Daily Alerts

  'ಹೆದರುವ ಅವಶ್ಯಕತೆ ಇಲ್ಲ': ಇಂಡಸ್ಟ್ರಿ ಮೇಲಿನ ಡ್ರಗ್ಸ್ ಆರೋಪದ ಬಗ್ಗೆ ಶಿವಣ್ಣ ಹೇಳಿದ್ದೇನು?

  |

  ಸ್ಯಾಂಡಲ್‌ವುಡ್ ನಟ-ನಟಿಯರು ಹಾಗೂ ತಂತ್ರಜ್ಞರು ಡ್ರಗ್ಸ್ ಮಾಫಿಯಾದಲ್ಲಿದ್ದಾರೆ. ಡ್ರಗ್ಸ್ ಸೇವಿಸುತ್ತಾರೆ, ಡ್ರಗ್ಸ್ ಡೀಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ, ಅನುಮಾನಗಳು ಹುಟ್ಟಿಕೊಂಡಿದೆ.

  Shiva Rajkumar Reaction on Sandalwood Drug Mafia | ನನಗೆ 13 ವರ್ಷ ಇದ್ದಾಗ್ಲೇ ಇದರ ಬಗ್ಗೆ ಗೊತ್ತಿತ್ತು

  ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಇದೆ, ಡ್ರಗ್ಸ್ ಸೇವಿಸುವವರ ವಿವರ ಸಹ ನನ್ನ ಬಳಿ ಇದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದು ಸ್ಯಾಂಡಲ್‌ವುಡ್ ಇಂಡಸ್ಟ್ರಿಗೆ ಮತ್ತಷ್ಟು ಆಘಾತ ತಂದಿದೆ. ಇಂದ್ರಜಿತ್ ಲಂಕೇಶ್ ಅವರ ಆರೋಪಗಳಿಗೆ ಪರ-ವಿರೋಧದ ಚರ್ಚೆ ಆರಂಭವಾಗಿದ್ದು, ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

  ಯಾವುದು ವಿಪರೀತವಾಗಬಾರದು

  ಯಾವುದು ವಿಪರೀತವಾಗಬಾರದು

  ''ಒಳ್ಳೆಯದು ಇರುತ್ತೆ, ಕೆಟ್ಟದ್ದು ಇರುತ್ತೆ. ಯಾವುದನ್ನು ತೆಗೆದುಕೊಳ್ಳಬೇಕು ಎಂಬ ಅರಿವು ನಮಗಿರಬೇಕು. ಡ್ರಗ್ಸ್, ನಶೆ ಇನ್ನೊಂದು, ಮತ್ತೊಂದು ಎಲ್ಲವೂ ಇದೆ, ಇರುತ್ತೆ. ಆದರೆ ಆ ಬಗ್ಗೆ ನಾವು ಗಮನ ಕೊಡಬಾರದು. ಫನ್‌ಗೋಸ್ಕರ ತೆಗೆದುಕೊಂಡರೂ ಅದು ವಿಪರೀತವಾಗಬಾರದು. ಸಮಾಜಕ್ಕೆ ನಾವು ಮಾದರಿಯಾಗಬೇಕು'' - ಶಿವರಾಜ್ ಕುಮಾರ್

  ಡ್ರಗ್ಸ್ ಬಗ್ಗೆ ಕೇಳುತ್ತಿದ್ದಂತೆ ಉರಿದುಬಿದ್ದ ನಟಿ ರಚಿತಾ ರಾಮ್

  ನಮ್ಮ ಇಂಡಸ್ಟ್ರಿಯಲ್ಲಿ ಕಂಡಿಲ್ಲ

  ನಮ್ಮ ಇಂಡಸ್ಟ್ರಿಯಲ್ಲಿ ಕಂಡಿಲ್ಲ

  ''ಇಂಡಸ್ಟ್ರಿಯಲ್ಲಿ ಡ್ರಗ್ಸ್ ಇದೆ ಇಲ್ಲ ಅನ್ನೋದನ್ನು ನಾವು ಹೇಳುವುದಕ್ಕೆ ಆಗಲ್ಲ, ನಾನೇನು ಪೊಲೀಸ್ ಅಲ್ಲ. ಆದರೆ, ನಾನು ಶೂಟಿಂಗ್ ಮಾಡಿದ ಚಿತ್ರಗಳು, ಅಲ್ಲಿ ಕೆಲಸ ಮಾಡುವ ಎಲ್ಲರೂ ಕೆಲಸದ ಬಗ್ಗೆ ಮಾತ್ರ ಗಮನ ಕೊಟ್ಟಿದ್ದಾರೆ. ಇದುವರೆಗೂ ನಾನು ನೋಡಿದಂತೆ ನಮ್ಮ ಇಂಡಸ್ಟ್ರಿಯಲ್ಲಿ ಕಂಡಿಲ್ಲ. ಈ ಸುದ್ದಿಗಳು ನೋಡಿದ್ಮೇಲೆ ನನಗೆ ತಿಳಿಯುತ್ತಿದೆ'' - ಶಿವರಾಜ್ ಕುಮಾರ್

  ಯಾರಿಗೂ ಹೆದರುವ ಅವಶ್ಯಕತೆ ಇಲ್ಲ

  ಯಾರಿಗೂ ಹೆದರುವ ಅವಶ್ಯಕತೆ ಇಲ್ಲ

  'ಇಂಡಸ್ಟ್ರಿಯಲ್ಲಿ ಇದೆ ಅಂದ್ಮೇಲೆ ಹೆದರಿಕೊಳ್ಳುವುದರಲ್ಲಿ ಏನಿದೆ. ಸತ್ಯ ಹೊರಗೆ ಬರಬೇಕು. ಮಾಧ್ಯಮಗಳಲ್ಲಿ ಹೆಸರುಗಳನ್ನು ಹೇಳಬಹುದಾಗಿತ್ತು ಅಲ್ಲವೇ? ಎಂದು ಪರೋಕ್ಷವಾಗಿ ನಿರ್ದೇಶಕ ಇಂದ್ರಜಿತ್ ಲೋಕೇಶ್ ಗೆ ಹೇಳಿದ್ದಾರೆ.

  ತಲೇಲಿ ಕೂದಲಿಲ್ಲ, ಬುದ್ಧಿಯೂ ಇಲ್ಲ..ಸುಖಾಸುಮ್ಮನೆ ಆರೋಪ ಮಾಡ್ತಾರೆ: ರವಿ ಬೆಳಗೆರೆ

  ಸಲಹೆ ಕೊಡೋದಕ್ಕೆ ಏನಿದೆ

  ಸಲಹೆ ಕೊಡೋದಕ್ಕೆ ಏನಿದೆ

  'ಸಿನಿಮಾ ಇಂಡಸ್ಟ್ರಿಯಲ್ಲಿ ಹಿರಿಯರು ಅಥವಾ ನಾಯಕತ್ವ ಎಂದಾಕ್ಷಣ ಎಚ್ಚರಿಕೆ, ಸಲಹೆ ನೀಡುವುದಲ್ಲ. ಅದು ಪ್ರತಿಯೊಬ್ಬರಿಗೂ ಅವರ ಮನಸ್ಸಿಗೆ ಬರಬೇಕು. ನನ್ನ ಜೀವನವನ್ನು ನಾನು ಪ್ರೀತಿಸಬೇಕು, ಇದು ದೇವರ ಕೊಟ್ಟ ಉಡುಗೊರೆ. ಅದನ್ನು ಚೆನ್ನಾಗಿ ನೋಡಬೇಕು' ಎಂದು ಹ್ಯಾಟ್ರಿಕ್ ಹೀರೋ ಪ್ರತಿಕ್ರಿಯೆ ನೀಡಿದ್ದಾರೆ.

  English summary
  Drug mafia in sandalwood: Kannada actor Shivarajkumar react on Drugs allegations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X