For Quick Alerts
  ALLOW NOTIFICATIONS  
  For Daily Alerts

  ಮಂಡ್ಯದಲ್ಲಿ ಸುಮಲತಾಗೆ ಸಪೋರ್ಟ್ ಮಾಡ್ತಾರ ಶಿವಣ್ಣ?

  |
  Lok Sabha Elections 2019 : ಶಿವಣ್ಣನ ಬೆಂಬಲ ಸುಮಲತಾಗೋ ಅಥವಾ ನಿಖಿಲ್‍ಗೋ? | FILMIBEAT KANNADA

  ಮಂಡ್ಯ ಜಿಲ್ಲೆ ಕನ್ನಡ ಚಿತ್ರರಂಗಕ್ಕೆ ಎಷ್ಟೋ ಕಲಾವಿದರನ್ನು ನೀಡಿದೆ. ಅದೇ ರೀತಿ ಮಂಡ್ಯ ಎಷ್ಟೋ ಕಲಾವಿದರನ್ನು ರಾಜಕೀಯ ವ್ಯಕ್ತಿಗಳನಾಗಿ ಬದಲು ಮಾಡಿದೆ. ಇದೀಗ ಮತ್ತೆ ಮಂಡ್ಯ ಸ್ಯಾಂಡಲ್ ವುಡ್ ಕಲಾವಿದರ ಸ್ಪರ್ಧೆಗೆ ವೇದಿಕೆ ನೀಡಿದೆ.

  ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರ್ ಜಿಡಿಎಸ್ ಪಕ್ಷದಿಂದ ಮಂಡ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅದೇ ಕ್ಷೇತ್ರದಲ್ಲಿ ನಟ ಅಂಬರೀಶ್ ಪತ್ನಿ ನಟಿ ಸುಮಲತಾ ಕೂಡ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ಹೀಗಿರುವಾಗ, ಸ್ಯಾಂಡಲ್ ವುಡ್ ನ ಯಾವ ಯಾವ ಕಲಾವಿದರು ಯಾರಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ.

  ''ಸುದೀಪ್ ಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ'' ಕಿಚ್ಚನ ಬಗ್ಗೆ ಸುಮಲತಾ ಹೇಳಿಕೆ

  ಅಂದಹಾಗೆ, ಇದೀಗ ನಟ ಶಿವರಾಜ್ ಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ಸುಮಲತಾ ಅವರ ಚುನಾವಣಾ ಸ್ಪರ್ಧೆ ಬಗ್ಗೆ ಶಿವಣ್ಣ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ...

  ಚುನಾವಣಾ ಸ್ಪರ್ಧೆ ಅವರ ನಿರ್ಧಾರ

  ಚುನಾವಣಾ ಸ್ಪರ್ಧೆ ಅವರ ನಿರ್ಧಾರ

  ಸುಮಲತಾ ಅವರ ರಾಜಕೀಯ ಪ್ರವೇಶದ ಬಗ್ಗೆ ನಟ ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ. ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದು ಅವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ. ಈ ಮೂಲಕ ಸುಮಲತಾ ರಾಜಕೀಯ ಎಂಟ್ರಿ ಬಗ್ಗೆ ಶಿವಣ್ಣ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ಒಳ್ಳೆಯದಾಗಲಿ ಎಂದು ಶುಭಕೋರಿದ ಶಿವಣ್ಣ

  ಒಳ್ಳೆಯದಾಗಲಿ ಎಂದು ಶುಭಕೋರಿದ ಶಿವಣ್ಣ

  ಅಂಬರೀಶ್ ಅವರ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ನನಗೆ ಬಹಳ ಪ್ರೀತಿ ಇದೆ. ಅಂಬರೀಶ್ ಅವರಿಗೆ ನಮ್ಮ ತಂದೆಗೆ ನೀಡುವ ರೀತಿ ಗೌರವ ನೀಡುತ್ತೇನೆ. ಸುಮಲತಾ ಅವರು ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶಿವರಾಜ್ ಕುಮಾರ್ ತಮ್ಮ ಕಡೆಯಿಂದ ಶುಭಾಶಯ ತಿಳಿಸಿದರು.

  ದರ್ಶನ್ ಬಳಿಕ ಸುಮಲತಾ ಸಿಕ್ತು ಮನೆ ಮಗ ಯಶ್ ಬೆಂಬಲ!

  ಚುನಾವಣಾ ಪ್ರಚಾರಕ್ಕೆ ಶಿವಣ್ಣ?

  ಚುನಾವಣಾ ಪ್ರಚಾರಕ್ಕೆ ಶಿವಣ್ಣ?

  ಸುಮಲತಾ ಪರ ಶಿವಣ್ಣ ಚುನಾವಣಾ ಪ್ರಚಾರ ಮಾಡುತ್ತಾರ..? ಇಲ್ವಾ..? ಎನ್ನುವ ಬಗ್ಗೆ ಶಿವಣ್ಣ ಏನು ಹೇಳಲಿಲ್ಲ. ಆದರೆ, ''ಕಲಾವಿದರಾಗಿ ನಮಗೆ ರಾಜ್ಯಾದಂತ್ಯ ಅಭಿಮಾನಿಗಳು ಇರುತ್ತಾರೆ.'' ಎಂದು ಹೇಳಿದ ಶಿವಣ್ಣನ ಮುಖಭಾವ ಅವರ ಮನಸಿನ ಅನಿಸಿಕೆ ಹೇಳುತ್ತಿತ್ತು. ಶಿವಣ್ಣನ ಮಾತುಗಳನ್ನು ಕೇಳಿದರೆ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆ ಬಹುತೇಕ ಕಡಿಮೆ.

  ದರ್ಶನ್ ಬೆಂಬಲ ನೀಡಿದ್ದಾರೆ

  ದರ್ಶನ್ ಬೆಂಬಲ ನೀಡಿದ್ದಾರೆ

  ಸ್ಯಾಂಡಲ್ ವುಡ್ ನಟರ ಪೈಕಿ ನಟ ದರ್ಶನ್ ನೇರವಾಗಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸುಮಲತಾ ಅವರ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ. ಅಂಬರೀಶ್ ಅವರು ಇದ್ದಾಗಲೂ ಅವರ ಪರ ಪ್ರಚಾರ ಮಾಡಿದ್ದೆ. ಈಗಲೂ ಆ ಕೆಲಸ ಮಾಡುತ್ತೇನೆ ಅದು ನನ್ನ ಕರ್ತವ್ಯ ಎಂದು ದರ್ಶನ್ ಹೇಳಿಕೆ ನೀಡಿದ್ದರು.

  ಸುಮಲತಾಗೆ ನಟ ಉಪೇಂದ್ರ ಸಾಥ್ ನೀಡ್ತಾರಾ?

  English summary
  Lok Sabha Election 2019: Kannada actor Shiva Rajkumar reaction about Actress Sumalatha election participation. Actress Sumalatha and actor Nikhil kumar likely to participate in Mandya constituency

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X