For Quick Alerts
  ALLOW NOTIFICATIONS  
  For Daily Alerts

  ಶೀಘ್ರದಲ್ಲಿಯೇ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಶಿವಣ್ಣ: ಯಾವ ಸಿನಿಮಾ?

  |

  ಕೋವಿಡ್ ಎರಡನೇ ಅಲೆಯಿಂದಾಗಿ ಚಿತ್ರಮಂದಿರ, ಚಿತ್ರೀಕರಣಗಳೆಲ್ಲ ಬಂದ್ ಆಗಿದ್ದರಿಂದ ನಟ-ನಟಿಯರೆಲ್ಲ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ನಟ ಶಿವರಾಜ್ ಕುಮಾರ್ ಸಹ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಕಾಲ ಕಳೆದಿದ್ದಾರೆ.

  ಆದರೆ ಇದೀಗ ರಾಜ್ಯದಲ್ಲಿ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದ್ದು ನಿಧಾನಕ್ಕೆ ಸಹಜ ಸ್ಥಿತಿಯತ್ತ ರಾಜ್ಯ ಮರಳುತ್ತಿದೆ. ಈ ನಡುವೆ ಹೊರಾಂಗಣ ಚಿತ್ರೀಕರಣಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ಹಲವು ಸಿನಿಮಾಗಳು ಚಿತ್ರೀಕರಣ ಪ್ರಾರಂಭ ಮಾಡಲು ಸಿದ್ಧತೆ ಆರಂಭಿಸಿದ್ದಾರೆ.

  ಇದೀಗ ನಟ ಶಿವರಾಜ್‌ ಕುಮಾರ್ ಸಹ ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ. ಜೂನ್ 28 ರಿಂದ ಅವರ ನಟನೆಯ 'ಶಿವಪ್ಪ' ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ದಿನದಿಂದಲೇ ಶಿವರಾಜ್ ಕುಮಾರ್ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  'ಶಿವಪ್ಪ' ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಕೆಲವು ಆಕ್ಷನ್ ದೃಶ್ಯಗಳು ಹಾಗೂ 20 ನಿಮಿಷದ ಕ್ಲೈಮ್ಯಾಕ್ಸ್‌ ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ.

  ನಿರ್ಮಾಪಕರು ಹೇಳಿದ್ದು ಹೀಗೆ

  ನಿರ್ಮಾಪಕರು ಹೇಳಿದ್ದು ಹೀಗೆ

  ಚಿತ್ರೀಕರಣ ಪ್ರಾರಂಭ ಮಾಡುವ ಬಗ್ಗೆ ಮಾತನಾಡಿರುವ ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್, ''ಸರ್ಕಾರವು ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿರುವ ಕಾರಣ ಹೊರಗೆ ಚಿತ್ರೀಕರಣ ಮಾಡುತ್ತಿದ್ದೇವೆ. ಆಕ್ಷನ್‌ ದೃಶ್ಯಗಳ ಚಿತ್ರೀಕರಣಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಕೊರೊನಾ ನಿಯಂತ್ರಣ ನಿಯಮಗಳನ್ನು ಸಹ ಪಾಲಿಸಲಿದ್ದೇವೆ'' ಎಂದಿದ್ದಾರೆ.

  ಸೆಟ್‌ನಲ್ಲಿರುವ ಎಲ್ಲರಿಗೂ ಲಸಿಕೆ

  ಸೆಟ್‌ನಲ್ಲಿರುವ ಎಲ್ಲರಿಗೂ ಲಸಿಕೆ

  ''ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ಸೆಟ್‌ಗೆ ಬರುವ ಎಲ್ಲರಿಗೂ ಲಸಿಕೆ ಹಾಕಿಸುವ ಯತ್ನ ಜಾರಿಯಲ್ಲಿದೆ. ಈಗಾಗಲೇ ಕೆಲವರಿಗೆ ಲಸಿಕೆ ಹಾಕಿಸಲಾಗಿದೆ. ಲಸಿಕೆ ಹಾಕಿಕೊಂಡವರಷ್ಟೆ ಸೆಟ್‌ನಲ್ಲಿ ಕೆಲಸ ಮಾಡಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ'' ಎಂದಿದ್ದಾರೆ ಕೃಷ್ಣ ಸಾರ್ಥಕ್.

  ಜುಲೈ 12 ಕ್ಕೆ ಟೀಸರ್ ಬಿಡುಗಡೆ

  ಜುಲೈ 12 ಕ್ಕೆ ಟೀಸರ್ ಬಿಡುಗಡೆ

  'ಶಿವಪ್ಪ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಡಾಲಿ ಧನಂಜಯ್ ಹಾಗೂ ಯುವ ನಟ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್‌ ಹಾಗೂ ಟೀಸರ್‌ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಜುಲೈ 12ಕ್ಕೆ ಬಿಡುಗಡೆ ಆಗಲಿದೆ.

  10 ಕೋಟಿ ಕೊಟ್ರು ಈ ಕೆಲಸ ಮಾಡಲ್ಲ ಎಂದ ಶಿಲ್ಪಾ ಶೆಟ್ಟಿ | Filmibeat Kannada
  ಹಲವು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ

  ಹಲವು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ

  ಶಿವರಾಜ್ ಕುಮಾರ್ ಕೈಯಲ್ಲಿ ಇನ್ನೂ ಹಲವು ಸಿನಿಮಾಗಳು ಇವೆ. ಶಿವಣ್ಣ ಈಗಾಗಲೇ ನಟಿಸಿರುವ 'ಭಜರಂಗಿ 2' ಬಿಡುಗಡೆಗೆ ಸಜ್ಜಾಗಿದೆ. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ಒಂದಕ್ಕೆ ಶಿವಣ್ಣ ಸಹಿ ಹಾಕಿದ್ದಾರೆ. ಆ ಸಿನಿಮಾದಲ್ಲಿ ಪ್ರಭುದೇವ ಸಹ ಇರಲಿದ್ದಾರೆ. ತೆಲುಗಿನ ರವಿ ಗೊಲುಪುಡಿ ನಿರ್ದೇಶನದ ಸಿನಿಮಾದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ. ತರುಣ್ ಸುಧೀರ್ ನಟನೆಯ ನಿಖಿಲ್ ಕುಮಾರಸ್ವಾಮಿ ಸಹ ಜೊತೆಯಾಗಿರುವ ಮತ್ತೊಂದು ಸಿನಿಮಾದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ.

  English summary
  Actor Shiva Rajkumar Resuming shooting for his movie Shivappa from June 28. Vijay Milton directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X