»   » 'ಕುರುಕ್ಷೇತ್ರ' ಚಿತ್ರವನ್ನ ಶಿವಣ್ಣ ರಿಜೆಕ್ಟ್ ಮಾಡಲು ಅಸಲಿ ಕಾರಣ ಬಹಿರಂಗ.!

'ಕುರುಕ್ಷೇತ್ರ' ಚಿತ್ರವನ್ನ ಶಿವಣ್ಣ ರಿಜೆಕ್ಟ್ ಮಾಡಲು ಅಸಲಿ ಕಾರಣ ಬಹಿರಂಗ.!

Posted By:
Subscribe to Filmibeat Kannada

''ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸುವ ಅವಕಾಶ ಸಿಕ್ಕರೆ, ಖಂಡಿತ ಮಾಡುತ್ತೇನೆ'' ಎಂದು ಹೇಳಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ 'ಕುರುಕ್ಷೇತ್ರ' ಚಿತ್ರದಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ.!

'ಕುರುಕ್ಷೇತ್ರ' ಚಿತ್ರದಲ್ಲಿ 'ಅರ್ಜುನ' ಪಾತ್ರಧಾರಿ ಆಗಿ ಅಭಿನಯಿಸಲು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ ಆಫರ್ ಮಾಡಲಾಗಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು. ಆದ್ರೆ, ''ಕುರುಕ್ಷೇತ್ರ' ಚಿತ್ರಕ್ಕಾಗಿ ನನಗೆ ಬಂದಿದ್ದು ಅರ್ಜುನ ಪಾತ್ರ ಅಲ್ಲ, ಕರ್ಣನ ಪಾತ್ರ'' ಎಂದು ಸ್ವತಃ ಶಿವರಾಜ್ ಕುಮಾರ್ ಬಹಿರಂಗ ಪಡಿಸಿದ್ದಾರೆ.

'ಕುರುಕ್ಷೇತ್ರ'ಕ್ಕಾಗಿ ಶಿವಣ್ಣನಿಗೆ ಆಹ್ವಾನ ಬಂದಿದ್ದು ನಿಜ! ಯಾವ ಪಾತ್ರಕ್ಕೆ?

ಜೊತೆಗೆ ಕರ್ಣನ ಪಾತ್ರ ಮಾಡಲು ನಿರಾಕರಿಸಿದ್ದಕ್ಕೆ ಅಸಲಿ ಕಾರಣ ಏನು ಎಂಬುದನ್ನೂ 'ಅಣ್ಣಾವ್ರ ಮಗ' ಶಿವರಾಜ್ ಕುಮಾರ್ ಹೊರಹಾಕಿದ್ದಾರೆ. ಅದನ್ನೆಲ್ಲ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಶಿವಣ್ಣ 'ಕರ್ಣ' ಆಗಬೇಕಿತ್ತು.!

ಎಲ್ಲ ಕಡೆ ಸುದ್ದಿ ಆದಂತೆ, 'ಕುರುಕ್ಷೇತ್ರ' ಚಿತ್ರದಲ್ಲಿ ಶಿವಣ್ಣನಿಗೆ 'ಅರ್ಜುನ' ಪಾತ್ರದ ಆಫರ್ ನೀಡಲಾಗಿರಲಿಲ್ಲ. ಬದಲಾಗಿ, 'ಕರ್ಣ'ನ ಪಾತ್ರ ನಿಭಾಯಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಕೋರಲಾಗಿತ್ತು.

ಶಿವಣ್ಣನ ಆಸೆ ಈಡೇರುತ್ತಾ.? 'ಕುರುಕ್ಷೇತ್ರ'ದಲ್ಲಿ ಸೆಂಚುರಿ ಸ್ಟಾರ್ 'ಅರ್ಜುನ'.?

'ನೋ' ಅಂದುಬಿಟ್ಟರು ಶಿವಣ್ಣ.!

'ಕುರುಕ್ಷೇತ್ರ' ಚಿತ್ರವನ್ನ ಶಿವಣ್ಣ ನಿರಾಕರಿಸಲು ಕಾರಣ 'ಡೇಟ್ಸ್ ಪ್ರಾಬ್ಲಂ' ಅಷ್ಟೇ.

ಶಿವಣ್ಣ ಸಖತ್ ಬಿಜಿ

'ದಿ ವಿಲನ್' ಹಾಗೂ 'ಟಗರು' ಚಿತ್ರಗಳ ಚಿತ್ರೀಕರಣದಲ್ಲಿ ಸದ್ಯ ಶಿವರಾಜ್ ಕುಮಾರ್ ತೊಡಗಿಕೊಂಡಿದ್ದಾರೆ. ಹೀಗಾಗಿ, 'ಕುರುಕ್ಷೇತ್ರ' ಚಿತ್ರಕ್ಕಾಗಿ ಡೇಟ್ಸ್ ಹೊಂದಾಣಿಕೆ ಸ್ವಲ್ಪ ಕಷ್ಟವಾಗಿರುವುದರಿಂದ, ಶಿವಣ್ಣ 'ನೋ' ಎಂದಿದ್ದಾರೆ.

ಮತ್ತೊಂದು ಕಾರಣ ಇದೆ.!

'ಕರ್ಣ'ನ ಪಾತ್ರವನ್ನ ಶಿವಣ್ಣ ನಿಭಾಯಿಸಬೇಕು ಅಂದ್ರೆ, ಪೂರ್ವ ತಯಾರಿ ಅತ್ಯಾವಶ್ಯಕ. 'ಕರ್ಣ'ನ ಪಾತ್ರಕ್ಕಾಗಿ ಶಿವಣ್ಣ ಕನಿಷ್ಠ ಅಂದರೂ 5 ಕೆ.ಜಿ ತೂಕ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಕೊಂಚ ಸಮಯ ಬೇಕು. ಆದರೆ, 'ಕುರುಕ್ಷೇತ್ರ' ಚಿತ್ರ ಸದ್ಯದಲ್ಲಿಯೇ ಸೆಟ್ಟೇರುವುದರಿಂದ ಸಮಯಾವಕಾಶದ ಕೊರತೆ ಕಾಡುತ್ತಿದೆ.

ಛೇ... ಮಿಸ್ ಆಯ್ತಲ್ಲ.!

ಅಷ್ಟಕ್ಕೂ, 'ಕರ್ಣ'ನ ಪಾತ್ರ ನಿಭಾಯಿಸಬೇಕು ಎಂಬ ಆಸೆ ಶಿವಣ್ಣನಿಗೂ ಇತ್ತು. 'ಡೇಟ್ಸ್ ಪ್ರಾಬ್ಲಂ'ನಿಂದಾಗಿ ಅದು ಅಸಾಧ್ಯವಾಗಿರುವುದಕ್ಕೆ, ''ಕರ್ಣನ ಪಾತ್ರ ಮಾಡದಿರುವುದನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀನಿ'' ಎನ್ನುತ್ತಾರೆ ಶಿವರಾಜ್ ಕುಮಾರ್.

'ಡಿ' ಬಾಸ್ ದರ್ಶನ್ ಜೊತೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ ಶಿವಣ್ಣ.!

ಇದೇ ನಿಜವಾದ ಕಾರಣ.!

'ಕುರುಕ್ಷೇತ್ರ' ಚಿತ್ರವನ್ನ ಶಿವಣ್ಣ ಕೈಬಿಡಲು ಇದೇ ಅಸಲಿ ಕಾರಣ. ಇದು ಬಿಟ್ಟು ಇನ್ನೇನೂ ಇಲ್ಲ ಅಂತ ಶಿವಣ್ಣ ಸ್ಪಷ್ಟಪಡಿಸಿದ್ದಾರೆ.

'ಕೋಲ್ಡ್ ವಾರ್' ಇಲ್ಲ.!

'ಕುರುಕ್ಷೇತ್ರ' ಚಿತ್ರವನ್ನ ಶಿವಣ್ಣ ರಿಜೆಕ್ಟ್ ಮಾಡಲು ದರ್ಶನ್ ಜೊತೆಗಿನ ಕೋಲ್ಡ್ ವಾರ್ ಕಾರಣ ಎಂಬ ವದಂತಿಗಳು ಕೇಳಿ ಬಂದಿದ್ದವು. ಆದರೆ, 'ಅದೆಲ್ಲವೂ ಸುಳ್ಳು' ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ.

English summary
Kannada Actor Shiva Rajkumar reveals the real reason for rejecting Karna's role in Darshan starrer 'Kurukshetra'?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada