For Quick Alerts
  ALLOW NOTIFICATIONS  
  For Daily Alerts

  ಮುತ್ತುಲಕ್ಷ್ಮಿಯೊಂದಿಗೆ ಸಂಧಾನ: ಡಿ.11 ಕ್ಕೆ 'ಕಿಲ್ಲಿಂಗ್ ವೀರಪ್ಪನ್' ತೆರೆಗೆ?

  By Suneetha
  |

  ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಉಂಟಾಗಿರುವ ಆಡಚಣೆಗಳು ಕೊನೆಗೂ ನಿವಾರಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

  ಕುಖ್ಯಾತ ಕಾಡುಗಳ್ಳ ವೀರಪ್ಪನ್ ಅವರ ಪತ್ನಿ ಮುತ್ತುಲಕ್ಷ್ಮಿ ಚಿತ್ರದ ನಿರ್ಮಾಪಕರೊಂದಿಗೆ ಸಂಧಾನ ಮಾಡಿಕೊಂಡು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದು, ನಿರ್ಮಾಪಕರು ವೀರಪ್ಪನ್ ಪತ್ನಿಗೆ ಹಣ ನೀಡಿದ್ದಾರೆ ಎಂದು ಬಲ್ಲ ಮೂಲಗಳು ವರದಿ ಮಾಡಿವೆ.[ಮುತ್ತುಲಕ್ಷ್ಮಿ ಹೊಸ ವರಸೆ, ಮತ್ತೆ ವರ್ಮಾ, ವೀರಪ್ಪನ್ ಗೆ ಕಂಟಕ.!]

  ಹಣ ನೀಡಿರುವುದರಿಂದ ಮುತ್ತುಲಕ್ಷ್ಮಿ ಅವರು ಸಿನಿಮಾ ಬಿಡುಗಡೆ ಮಾಡಲು ಹಸಿರು ನಿಶಾನೆ ತೋರಿದ್ದಾರೆ. ಆದ್ದರಿಂದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಾಣಲಿದೆ.

  ಈ ಮೊದಲು ನಿರ್ದೇಶಕ ರಾಮ್ ಗೋಪಾಲ್ ಅವರು ಮುತ್ತುಲಕ್ಷ್ಮಿ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ, ಸಿನಿಮಾ ಹಿಂದಿಯಲ್ಲಿ ನಿರ್ಮಾಣಗೊಂಡು ತಮಿಳಿನಲ್ಲಿ ಡಬ್ ಆಗಲಿದೆ ಎಂದಿತ್ತಂತೆ.[ಅಷ್ಟಕ್ಕೂ 'ಕಿಲ್ಲಿಂಗ್ ವೀರಪ್ಪನ್' ಬೇಟೆಗೆ ಪಾರುಲ್ ಬಂದಿದ್ದಾದರೂ ಹೇಗೆ?]

  ಆದರೆ ಈಗ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಿರುವುದರಿಂದ ಮುತ್ತುಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿ ಸಿನಿಮಾ ಬಿಡುಗಡೆಗೆ ತಡೆ ತಂದಿದ್ದರು.

  ಆದ್ರಿಂದ ದೀಪಾವಳಿ ಸಮಯಕ್ಕೆ ನಂತರ ಡಿಸೆಂಬರ್ ಮೊದಲ ವಾರದಲ್ಲಿ ದೀಪಾವಳಿ ಸಮಯಕ್ಕೆ ನಂತರ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾವನ್ನು ಮುಂದೂಡಲಾಗಿತ್ತು.['ಶಿವಲಿಂಗ'ಕ್ಕೆ ಪೂಜೆ ಸಲ್ಲಿಸಿದ ನಂತರ 'ವೀರಪ್ಪನ್' ಬೇಟೆ ಶುರು.!]

  ಇದೀಗ ಸೆನ್ಸಾರ್ ಮಂಡಳಿ ಶುಕ್ರವಾರ ಸಿನಿಮಾ ವೀಕ್ಷಿಸಲಿದ್ದು, ಎಲ್ಲವೂ ಸುಸೂತ್ರವಾಗಿ ಮುಂದುವರೆದರೆ ಡಿಸೆಂಬರ್ 11ಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲದೇ ಶಿವಣ್ಣ ಅವರ 'ಶಿವಲಿಂಗ' ಕೂಡ ಸೆನ್ಸಾರ್ ಮಂಡಳಿಯ ಸಮ್ಮತಿಗೆ ಕಾಯುತ್ತಿದ್ದು, ಅದು ಕೂಡ ಡಿಸೆಂಬರ್ 11ಕ್ಕೆ ಬಿಡುಗಡೆಗೆ ನಿಗದಿಯಾಗಿದೆ.

  ಒಟ್ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಡಿಸೆಂಬರ್ 11ಕ್ಕೆ ದೊಡ್ಡ ಪರೀಕ್ಷೆ ಇದೆ ಅಂತಾಯ್ತು.

  English summary
  Ram Gopal Verma has announced that he has settled the dispute with Veerappan's wife Muthulakshmi and the film Killing Veerappan will release on December 11. Last week Muthulakshmi had announced that she had got a stay on the release of the film from a court in Bengaluru. This upset the release schedule of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X