For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರದಲ್ಲಿ ನಿಂತಾಯ್ತು 'ರುಸ್ತುಂ' ಕಟ್ ಔಟ್

  |

  'ರುಸ್ತುಂ' ಸಿನಿಮಾ ಇನ್ನು ನಾಲ್ಕು ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ನಿನ್ನೆಯೇ (ಭಾನುವಾರ) ಶಿವರಾಜ್ ಕುಮಾರ್ ಅಭಿಮಾನಿಗಳು ಮುಖ್ಯ ಚಿತ್ರಮಂದಿರದ ಮುಂದೆ ಕಟ್ ಔಟ್ ನಿಲ್ಲಿಸಿದ್ದಾರೆ.

  ಗಾಂಧಿನಗರದ ಪ್ರಮುಖ ಚಿತ್ರಮಂದಿರವಾದ ಸಂತೋಷ್ ನಲ್ಲಿ 'ರುಸ್ತುಂ' ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಮಂದಿರದ ಮುಂದೆ ಉದ್ದಾದ ಶಿವಣ್ಣನ ಕಟ್ ಔಟ್ ಹಾಕಲಾಗಿದೆ.

  'ರುಸ್ತುಂ' ನಲ್ಲಿ ಮರು ಬಳಕೆ ಆಯ್ತು 'ಡೈರೆಕ್ಟರ್ ಸ್ಪೆಷಲ್' ಹಾಡು

  ಇನ್ನು ಮಾಗಡಿ ರಸ್ತೆಯ ವಿರೇಶ್ ಚಿತ್ರಮಂದಿರದಲ್ಲಿಯೂ ಶಿವರಾಜ್ ಕುಮಾರ್ ಅಭಿಮಾನಿಗಳು ಹಬ್ಬದ ಆಚರಣೆ ಶುರು ಆಗಿದೆ. ಸಿನಿಮಾನ ಚಿತ್ರಕ್ಕೆ ಹೂವಿನ ಹಾರ ಹಾಕಿ ಸಂಭ್ರಮ ಪಟ್ಟಿದ್ದಾರೆ. ಐದು ದಿನಕ್ಕೆ ಮುಂಚೆಯೇ 'ರುಸ್ತುಂ' ಕ್ರೇಜ್ ಪ್ರಾರಂಭವಾಗಿದೆ.

  'ರುಸ್ತುಂ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಪಾತ್ರ ಮಾಡಿದ್ದಾರೆ. ರವಿವರ್ಮ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಶ್ರದ್ಧಾ ಶ್ರೀನಾಥ್, ಮುಯೂರಿ ಹಾಗೂ ರಚಿತಾ ರಾಮ್ ಸಿನಿಮಾದಲ್ಲಿ ನಟಿಸಿದ್ದಾರೆ.

  ಬಾಲಿವುಡ್ ನಟ, ನಿರ್ದೇಶಕ, ಡ್ಯಾನ್ಸರ್ ಪ್ರಭುದೇವ, ಜಾನ್ ಅಬ್ರಹಾಂ ಸೇರದಿಂತೆ ಕೆಲವರು ಸಿನಿಮಾಗೆ ಶುಭ ಕೋರಿದ್ದಾರೆ. ಜೂನ್ 28 ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಚಿತ್ರಮಂದಿರಗಳ ಪಟ್ಟಿ ಸಹ ಹೊರಬಂದಿದೆ. ಬುಕ್ ಮೈ ಶೋದಲ್ಲಿಯೂ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

  English summary
  Actor Shiva Rajkumar 'Rustum' kannada movie cutout in santhosh theatre. 'Rustum' is directed by Ravi Varma producing by Jayanna combines. The movie will be releaseing on june 28th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X