For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 'ಕಡಗ ಸ್ಟೈಲ್' ಗೆ ಚಿಕ್ಕವರು, ದೊಡ್ಡವರು, ಎಲ್ಲರೂ ಫಿದಾ

  By ಭರತ್ ಕುಮಾರ್
  |

  ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಏನೇ ಮಾಡಿದರೂ, ಅದು ಸ್ಯಾಂಡಲ್ ವುಡ್ ನಲ್ಲಿ ಹೊಸ ಟ್ರೆಂಡ್ ಆಗಿ ಕ್ರಿಯೇಟ್ ಆಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ 'ಶ್ರೀಕಂಠ'.

  ಇತ್ತೀಚೆಗಷ್ಟೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದಲ್ಲಿ ಮೂಡಿಬರುತ್ತಿರುವ 'ಶ್ರೀಕಂಠ' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. 1 ನಿಮಿಷದ ಈ ಟೀಸರ್ ನಲ್ಲಿ ಹ್ಯಾಟ್ರಿಕ್ ಹೀರೋ 'ಕಾಮನ್ ಮ್ಯಾನ್' ಆಗಿ ಆರ್ಭಟಿಸಿದ್ದರು.[ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.!]

  'ಶ್ರೀಕಂಠ' ಚಿತ್ರದ ಈ ಟೀಸರ್ ಹೆಚ್ಚು ಸದ್ದು ಮಾಡುವುದಕ್ಕೆ ಮತ್ತೊಂದು ಕಾರಣ ಸಾಹಸ ಸಿಂಹ ಡಾ.ವಿಷ್ಣುವರ್ಧನ್. ಹೌದು, 'ಶ್ರೀಕಂಠ' ಚಿತ್ರದ ಟೀಸರ್ ನಲ್ಲಿ ವಿಷ್ಣು ಅವರ ಎವರ್ ಗ್ರೀನ್ ಸಿನಿಮಾ 'ನಾಗರಹಾವು' ಚಿತ್ರದ ಸೂಪರ್ ಹಿಟ್ ಗೀತೆಯನ್ನ ಬಳಸಲಾಗಿದೆ. ಬರಿ ಹಾಡು ಮಾತ್ರವಲ್ಲ, ವಿಷ್ಣುದಾದನ ಸ್ಟೈಲ್ ನ್ನ ಕೂಡ ಶಿವಣ್ಣ ಅನುಕರಣೆ ಮಾಡಿದ್ದಾರೆ.

  ಸೆಂಚುರಿಸ್ಟಾರ್ ಮಾಡಿರುವ ವಿಷ್ಣುವರ್ಧನ್ ಅವರ ಸ್ಟೈಲ್ ಈಗ, ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಶಿವಣ್ಣನ ಅಭಿಮಾನಿಗಳು ಶ್ರೀಕಂಠನ ಸ್ಟೈಲ್ ನಲ್ಲಿ ಕಡಗ ತೊಟ್ಟು ಫೋಸ್ ಕೊಡುತ್ತಿದ್ದಾರೆ. ಮುಂದೆ ಓದಿ.....

  ವಿಷ್ಣು ಸ್ಟೈಲ್ ನಲ್ಲಿ 'ಹ್ಯಾಟ್ರಿಕ್ ಹೀರೋ'

  ವಿಷ್ಣು ಸ್ಟೈಲ್ ನಲ್ಲಿ 'ಹ್ಯಾಟ್ರಿಕ್ ಹೀರೋ'

  ಶ್ರೀಕಂಠ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ವಿಷ್ಣುವರ್ಧನ್ ಅವರ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಸಾಹಸ ಸಿಂಹರಂತೆ ಕೈಯಲ್ಲಿ ಕಡಗ ತೊಟ್ಟು, ಅಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಘರ್ಜಸಿದ್ದಾರೆ.

  ವೈರಲ್ ಆಗಿದೆ 'ಶ್ರೀಕಂಠನ ಸ್ಟೈಲ್'

  ವೈರಲ್ ಆಗಿದೆ 'ಶ್ರೀಕಂಠನ ಸ್ಟೈಲ್'

  ವಿಷ್ಣು ಸ್ಟೈಲ್ ನಲ್ಲಿ ಶಿವಣ್ಣ ಮಿಂಚಿದ್ದರೆ, ಇತ್ತ ಶ್ರೀಕಂಠನ ಸ್ಟೈಲ್ ನಲ್ಲಿ ಅಭಿಮಾನಿಗಳು ಮಿಂಚುತ್ತಿದ್ದಾರೆ.

  'ಕಡಗ' ತೊಟ್ಟ ಅಭಿಮಾನಿಗಳು

  'ಕಡಗ' ತೊಟ್ಟ ಅಭಿಮಾನಿಗಳು

  ಶ್ರೀಕಂಠ ಚಿತ್ರದಲ್ಲಿ ಮಾಸ್ ಲೀಡರ್ ಶಿವಣ್ಣ, ತನ್ನ ಬಲಗೈಗೆ ಕಡಗ ತೊಟ್ಟಿದ್ದಾರೆ. ಅದನ್ನ ಈಗ ಅವರ ಅಭಿಮಾನಿಗಳು ಕೂಡ ಅನುಕರಣೆ ಮಾಡುತ್ತಿದ್ದಾರೆ.

  'ಅಂಗ್ರಿ ಯಂಗ್ ಮ್ಯಾನ್' ಲುಕ್ ನಲ್ಲಿ ಶಿವಣ್ಣನ ಫ್ಯಾನ್ಸ್

  'ಅಂಗ್ರಿ ಯಂಗ್ ಮ್ಯಾನ್' ಲುಕ್ ನಲ್ಲಿ ಶಿವಣ್ಣನ ಫ್ಯಾನ್ಸ್

  'ನಾಗರಹಾವು' ಚಿತ್ರದಲ್ಲಿ 'ಅಂಗ್ರಿಯಂಗ್ ಮ್ಯಾನ್' ಆಗಿ ವಿಷ್ಣು ಹೇಗೆ ಕಾಣಿಸಿಕೊಂಡಿದ್ದರೋ, ಅದೇ ತರ ಶಿವಣ್ಣ ಕೂಡ 'ಶ್ರೀಕಂಠ' ಚಿತ್ರದಲ್ಲಿ ಅಂಗ್ರಿಯಂಗ್ ಮ್ಯಾನ್ ಅವತಾರವೆತ್ತಿದ್ದರು. ಈಗ ಆ ಗೆಟಪ್ ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದ್ದು, ಸೆಂಚುರಿಸ್ಟಾರ್ ಫ್ಯಾನ್ಸ್ ಕೂಡ ಅದೇ ಲುಕ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

  ಶಿವಣ್ಣನ 'ಕಾಸ್ಟ್ಯೂಮ್' ಟ್ರೆಂಡ್

  ಶಿವಣ್ಣನ 'ಕಾಸ್ಟ್ಯೂಮ್' ಟ್ರೆಂಡ್

  ಶ್ರೀಕಂಠ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಸಿರು ಬಣ್ಣದ ಶರ್ಟ್ ಧರಿಸಿದ್ದಾರೆ. ಈಗ ಆ ಶರ್ಟ್ ಕೂಡ ಹೊಸ ಟ್ರೆಂಡ್ ಆಗಿದೆ. ಸೆಂಚುರಿಸ್ಟಾರ್ ಫ್ಯಾನ್ಸ್ ಹಸಿರು ಬಣ್ಣದ ಶರ್ಟ್ ತೊಟ್ಟು, ಕರುನಾಡ ಚಕ್ರವರ್ತಿಯಂತೆ ಫೋಸ್ ಕೊಡುತ್ತಿದ್ದಾರೆ.

  'ಜೂನಿಯರ್ ಶ್ರೀಕಂಠ'

  'ಜೂನಿಯರ್ ಶ್ರೀಕಂಠ'

  ಶ್ರೀಕಂಠನ ಸ್ಟೈಲ್ ಗೆ ಕೇವಲ ಯುವಕರು ಮಾತ್ರ ಫಿದಾ ಆಗಿಲ್ಲ. ಚಿಕ್ಕ ಮಕ್ಕಳು ಕೂಡ ಕ್ರೇಜಿಯಾಗಿದ್ದಾರೆ. ಶಿವಣ್ಣನ ಕಡಗ ಸ್ಟೈಲ್ ನಲ್ಲಿ ಮಕ್ಕಳು ಕೂಡ ಫೋಸ್ ಕೊಟ್ಟು ಜೂನಿಯರ್ ಶ್ರೀಕಂಠನಾಗಿ ಮಿಂಚಿದ್ದಾರೆ.

  'ಕಿಲ್ಲಿಂಗ್ ಕಪ್'ನ ಫೀವರ್

  'ಕಿಲ್ಲಿಂಗ್ ಕಪ್'ನ ಫೀವರ್

  ಶಿವರಾಜ್ ಕುಮಾರ್ ಸ್ಟೈಲ್ ಗಳು ಟ್ರೆಂಡ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ, ಕಾಫಿ ಕಪ್ ಫೀವರ್ ಎಲ್ಲೆಡೆ ಸಖತ್ ವೈರಲ್ ಆಗಿತ್ತು.

  ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್

  ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್

  ಸ್ಯಾಂಡಲ್ ವುಡ್ ನ ಟ್ರೆಂಡ್ ಸೆಟ್ಟರ್ ಆಗಿರುವ ಶಿವಣ್ಣ, ಈಗ ಶ್ರೀಕಂಠ ಟೀಸರ್ ಮೂಲಕ ಮತ್ತೊಂದು ಟ್ರೆಂಡ್ ಸೆಟ್ ಮಾಡಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಶ್ರೀಕಂಠನ ಸ್ಟೈಲ್ ಫಾಲೋ ಮಾಡುತ್ತಿದ್ದಾರೆ.

  English summary
  Kannada Actor Shiva Rajkumar starrer Kannada Movie 'Srikanta' teaser is setting new trend in social media. shivaraj kumar fans following hatric hero style of 'Srikanta' Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X