»   » ಶಿವಣ್ಣನ 'ವಿಲನ್ ಹೇರ್ ಸ್ಟೈಲ್'ಗೆ ಕ್ರೇಜ್ ನೋಡ್ರಪ್ಪಾ!

ಶಿವಣ್ಣನ 'ವಿಲನ್ ಹೇರ್ ಸ್ಟೈಲ್'ಗೆ ಕ್ರೇಜ್ ನೋಡ್ರಪ್ಪಾ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಡಿಫ್ರೆಂಟ್ ಆಗಿ ಏನೇ ಮಾಡಿದ್ರು ಅಲ್ಲೊಂದು ಟ್ರೆಂಡ್ ಕ್ರಿಯೇಟ್ ಆಗುತ್ತೆ. ಈಗ ಅಂತಹದ್ದೇ ಹೊಸದೊಂದು ಟ್ರೆಂಡ್ ಗೆ ಸಾಕ್ಷಿಯಾಗಿದೆ 'ದಿ ವಿಲನ್'.['ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು?]

ಹೌದು, 'ದಿ ವಿಲನ್' ಫಸ್ಟ್ ಲುಕ್ ನಿಂದನೇ ಸಿನಿ ದುನಿಯಾದಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇಬ್ಬರ ಗೆಟಪ್ ಮತ್ತು ಹೇರ್ ಸ್ಟೈಲ್ ಈಗ ಎಲ್ಲೆಡೆ ವೈರಲ್ ಆಗಿದೆ. ಈಗಾಗಲೇ ಕಿಚ್ಚನ ಅಭಿಮಾನಿಗಳು ಕಿಚ್ಚನ ಹೇರ್ ಸ್ಟೈಲ್ ಫಾಲೋ ಮಾಡ್ತಿದ್ದಾರೆ. ಹಾಗಾದ್ರೆ, ಶಿವಣ್ಣನ ಫ್ಯಾನ್ಸ್ ಹೇಗೆ ಫಾಲೋ ಮಾಡ್ತಿದ್ದಾರೆ ಅಂತ ಗೊತ್ತಾ? ಮುಂದೆ ನೋಡಿ....

ವೈರಲ್ ಆಯ್ತು 'ವಿಲನ್' ಹೇರ್ ಸ್ಟೈಲ್!

ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರ ಪ್ರತಿಯೊಂದು ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಾ ಬಂದಿದೆ. ಪೋಸ್ಟರ್ ರಿಲೀಸ್ ಮಾಡಿ ಸುದ್ದಿ ಮಾಡಿದ್ದ 'ದಿ ವಿಲನ್' ಈಗ ಹೇರ್ ಸ್ಟೈಲ್ ವಿಚಾರದಲ್ಲಿ ವೈರಲ್ ಆಗಿದೆ.['ದಿ ವಿಲನ್' ನಲ್ಲಿ ಶಿವಣ್ಣ ಮತ್ತು ಸುದೀಪ್ ಲುಕ್ ಹೇಗಿರಲಿದೆ ಗೊತ್ತಾ?]

ಶಿವಣ್ಣನ 'ಹೇರ್ ಸ್ಟೈಲ್'ಗೆ ಅಭಿಮಾನಿಗಳು ಫಿದಾ!

ಶಿವರಾಜ್ ಕುಮಾರ್ ಅವರ 'ವಿಲನ್' ಹೇರ್ ಸ್ಟೈಲ್ ಅಭಿಮಾನಿಗಳು ಫಿದಾ ಆಗಿದ್ದು, ಅವರಂತೆ ಹೇರ್ ಸ್ಟೈಲ್ ಮಾಡಿ ಫೋಸ್ ಕೊಟ್ಟಿದ್ದಾರೆ.

'ವಿಲನ್' ಗೆಟಪ್ ನಲ್ಲಿ ಹ್ಯಾಟ್ರಿಕ್ ಹೀರೋ ಫ್ಯಾನ್ಸ್

'ವಿಲನ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಉದ್ದನೆಯ ಕೂದಲು ಬಿಟ್ಟು, ಅದಕ್ಕೆ ಹಿಂದೆ ಜಡೆ ಕಟ್ಟಿ, ಕುರುಚಲು ಗಡ್ಡ ಬಿಟ್ಟು ರಗಡ್ ಲುಕ್ ನಲ್ಲಿ ಶಿವಣ್ಣ ಮಿಂಚುತ್ತಿದ್ದಾರೆ. ಈಗ ಅದೇ ರೀತಿಯಾಗಿ ಅವರ ಅಭಿಮಾನಿಗಳು ಕೂಡ ಫಾಲೋ ಮಾಡ್ತಿದ್ದಾರೆ.

ಕಿಚ್ಚನ ಹೇರ್ ಸ್ಟೈಲ್ ಗೆ ಕ್ರೇಜ್!

'ದಿ ವಿಲನ್' ಚಿತ್ರದಲ್ಲಿ ಸುದೀಪ್ ಅವರ ಹೇರ್ ಸ್ಟೈಲ್ ಗೆ ಎಲ್ರೂ ಬೋಲ್ಡ್ ಆಗಿದ್ದಾರೆ. Rat Tail (ಇಲಿ ಬಾಲ) ಸ್ಟೈಲ್ ಗೆ ಮೋಡಿಯಾಗಿರುವ ಅಭಿಮಾನಿಗಳು ಈಗ ವಿಲನ್ ಸ್ಟೈಲ್ ನ್ನ ಅನುಕರಿಸುತ್ತಿದ್ದಾರೆ.['ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.!]

ಅಂದು 'ಜೋಗಿ' ಹೇರ್ ಸ್ಟೈಲ್

ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಜೋಗಿ' ಚಿತ್ರದಲ್ಲಿ, ಶಿವರಾಜ್ ಕುಮಾರ್ ಅವರ ಗೆಟಪ್ ಮತ್ತು ಹೇರ್ ಸ್ಟೈಲ್ ಅಂದು ಟ್ರೆಂಡ್ ಹುಟ್ಟುಹಾಕಿತ್ತು. ಶಿವಣ್ಣನ ಅಭಿಮಾನಿಗಳು 'ಜೋಗಿ' ಮತ್ತು 'ಜೋಗಯ್ಯ' ರೀತಿಯಲ್ಲಿ ಕೂದಲು ಬಿಟ್ಟು, ಖುಷಿ ಪಟ್ಟಿದ್ದರು.

'ವಿಲನ್' ಚಿತ್ರೀಕರಣ ಶುರು

ಈಗಾಗಲೇ 'ದಿ ವಿಲನ್' ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಹದಿಮೂರು ದಿನಗಳ ಕಾಲ ಬೆಂಗಳೂರಿನಲ್ಲಿ 'ದಿ ವಿಲನ್' ಶೂಟಿಂಗ್ ನಡೆಯಲಿದೆ. ಅದಾದ ಬಳಿಕ ಲಂಡನ್, ಬ್ಯಾಂಕಾಕ್, ಕೇರಳ, ಚೀನಾ ಸೇರಿದಂತೆ ಕಣ್ಮನ ಸೆಳೆಯುವ ಸುಂದರ ತಾಣಗಳಲ್ಲಿ ನಡೆಯಲಿವೆ ಎನ್ನಲಾಗಿದೆ.['ದಿ ವಿಲನ್' ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್]

English summary
Dr Shivarajkumar Come With a New Style for Jogi Prem’s Directorial The Villain Which Marks the Mega Combination of Both Century Star Dr Shivarajkumar and Kiccha Sudeep on the Silver Screen.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada