»   » 'ದಿ ವಿಲನ್' ಚಿತ್ರೀಕರಣದಲ್ಲಿ ಶಿವಣ್ಣನ ಆಕ್ಷನ್ ನೋಡಿ.!

'ದಿ ವಿಲನ್' ಚಿತ್ರೀಕರಣದಲ್ಲಿ ಶಿವಣ್ಣನ ಆಕ್ಷನ್ ನೋಡಿ.!

Posted By:
Subscribe to Filmibeat Kannada

ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ದಿ ವಿಲನ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಷ್ಟು ದಿನ ಸುದೀಪ್ ಅವರ ಭಾಗದ ಶೂಟಿಂಗ್ ಮಾಡುತ್ತಿದ್ದ ಚಿತ್ರತಂಡ ಈಗ ಶಿವಣ್ಣನ ಜೊತೆ ಅಡ್ಡಾಡುತ್ತಿದೆ.

ಬ್ಯಾಂಕಾಕ್ ನಲ್ಲಿ ಇತ್ತೀಚೆಗಷ್ಟೇ ಕಾರ್ ಚೇಸಿಂಗ್ ದೃಶ್ಯದ ಚಿತ್ರೀಕರಣ ಮುಗಿಸಿ ಬಂದಿದ್ದ ಶಿವಣ್ಣ ಈಗ ಕಂಪ್ಲೀಟ್ ಆಗಿ 'ವಿಲನ್' ಟೀಮ್ ಜೊತೆ ತೊಡಗಿಕೊಂಡಿದ್ದಾರೆ.

'ವಿಲನ್' ಆಗಿರುವ ಸುದೀಪ್ ಇಂಟ್ರೊಡಕ್ಷನ್ ಹಾಡಿಗೆ ಕೋಟಿ ಕೋಟಿ ಸುರಿದ ಪ್ರೇಮ್ !

Shiva rajkumar Shooting in The Villain

ರಸ್ತೆ ಮಧ್ಯೆ ಫೈಟ್ ದೃಶ್ಯ ಸೆರೆಹಿಡಿಯಿತ್ತಿರುವ ಚಿತ್ರತಂಡ ಶಿವಣ್ಣ ಅವರನ್ನ ಲಾರಿ ಮೇಲೆ, ಕಾರ್ ಮೇಲೆ ಜಂಪ್ ಮಾಡಿಸುತ್ತಿದೆ. ಈ ದೃಶ್ಯಗಳನ್ನ ನೋಡುತ್ತಿದ್ದರೇ 'ವಿಲನ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಸಾಹಸಗಳು ಅತ್ಯಂತ ರೋಚಕತೆ ಕೂಡಿರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇನ್ನು ಸಾಹಸ ನಿರ್ದೇಶಕ ರವಿವರ್ಮ ಅವರು ಈ ಫೈಟ್ ಗೆ ನಿರ್ದೇಶನ ಮಾಡುತ್ತಿದ್ದು, ಸೆಂಚುರಿ ಸ್ಟಾರ್ ಎನರ್ಜಿಗೆ ತಕ್ಕಂತೆ ಕೊರಿಯೋಗ್ರಫಿ ಮಾಡ್ತಿದ್ದಾರೆ.

ಅಪ್ಪನ 'ಕಾರ್ ಚೇಸಿಂಗ್ ಸೀನ್' ನೋಡಲು ಬ್ಯಾಂಕಾಕ್ ಗೆ ಹಾರಿದ ಶಿವಣ್ಣನ ಮಗಳು!

Shiva rajkumar Shooting in The Villain

'ದಿ ವಿಲನ್' ಚಿತ್ರದಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಾಗಿ ಅಭಿನಯಿಸುತ್ತಿದ್ದು, ಆಮಿ ಜಾಕ್ಸನ್ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿರುವ ಈ ಚಿತ್ರಕ್ಕೆ ಮನೋಹರ್ ಬಂಡವಾಳ ಹಾಕುತ್ತಿದ್ದಾರೆ.

English summary
Kannada Actor Shivarajkumar Starrer The Villain movie Shooting still released.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada