»   » 'ಕಾಲೇಜ್ ಕುಮಾರ'ನ ಬಗ್ಗೆ ಶಿವರಾಜ್ ಕುಮಾರ್ ಮಾತು

'ಕಾಲೇಜ್ ಕುಮಾರ'ನ ಬಗ್ಗೆ ಶಿವರಾಜ್ ಕುಮಾರ್ ಮಾತು

Posted By:
Subscribe to Filmibeat Kannada

'ಅಲೆಮಾರಿ' ಸಂತು ನಿರ್ದೇಶನದ 'ಕಾಲೇಜ್ ಕುಮಾರ' ಸಿನಿಮಾ 25 ದಿನಗಳನ್ನ ಪೂರೈಸಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಈಗಾಗಲೇ ಪ್ರೇಕ್ಷಕರ ಜೊತೆ ಸ್ಯಾಂಡಲ್ ವುಡ್ ತಾರೆಯರು ಕೂಡ ಈ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ.

ಇದೀಗ, 'ಕಾಲೇಜ್ ಕುಮಾರ' ಚಿತ್ರದ ಬಗ್ಗೆ ನಟ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರವನ್ನ ನೋಡದೆ ಶಿವಣ್ಣ ಮಾತನಾಡಿದ್ದಾರೆ.

shiva rajkumar speak about college kumara

''ಕಾಲೇಜ್ ಕುಮಾರ ಎಂದಾಕ್ಷಣ 'ಕಾಲೇಜ್ ಕುಮಾರ ಕಿಸ್ಸಿಗೆ ಡಮಾರ.....' ಹಾಡು ನೆನಪಾಗುತ್ತೆ. ಟೈಟಲ್ ಚೆನ್ನಾಗಿದೆ. 'ಕಡ್ಡಿಪುಡಿ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ವಿಕ್ಕಿ. 'ಕೆಂಡಸಂಪಿಗೆ' ಸಿನಿಮಾ ಥಿಯೇಟರ್ ನಲ್ಲಿ ನೋಡಿದ್ದೆ. ಈಗ 'ಕಾಲೇಜ್ ಕುಮಾರ' ಅಂತಹ ಡಿಫ್ರೆಂಟ್ ಕಾನ್ಸೆಪ್ಟ್ ಸಿನಿಮಾದ ಮೂಲಕ ಮತ್ತೆ ಬಂದಿದ್ದಾರೆ'' - ಶಿವರಾಜ್ ಕುಮಾರ್, ನಟ

''ಶ್ರುತಿ, ರವಿಶಂಕರ್, ಸಂತು ಇವರೆಲ್ಲಾ ಇದ್ದಾರೆ ಅಂದ್ರೆ ಅಲ್ಲೊಂದು ಒಳ್ಳೆ ಸಿನಿಮಾ ಬರುತ್ತೆ ಅಂತ ಅಂದುಕೊಂಡಿದ್ದೆ. ಈಗ 25ನೇ ಸಿನಿಮಾ ಪ್ರದರ್ಶನವಾಗ್ತಿದೆ ಅಂದ್ರು ತುಂಬ ಖುಷಿ ಆಗ್ತಿದೆ. ನನ್ನ ಫ್ರೆಂಡ್ಸ್ ಕೂಡ ಹೇಳಿದ್ರು ಸಿನಿಮಾ ಚೆನ್ನಾಗಿದೆ ಅಂತ. ಕನ್ನಡ ಸಿನಿಮಾಗೆ ಒಳ್ಳೆದಾಗಲಿ. ಎಲ್ಲರೂ ಈ ಸಿನಿಮಾ ನೋಡಿ'' ಎಂದು ಶಿವಣ್ಣ ಶುಭಕೋರಿದರು.

shiva rajkumar speak about college kumara

ಸಂತು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿಕ್ಕಿ, ಸಂಯುಕ್ತ ಹೆಗಡೆ, ಶ್ರುತಿ, ರವಿಶಂಕರ್, ಸಾಧುಕೋಕಿಲಾ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

English summary
Kannada Actor, Hatric Hero shiva rajkumar speak about Kannada Super hit Movie college kumara.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada