»   » 'ಆಕೆ' ಸಿನಿಮಾ ನೋಡಲು ಕಾತರದಿಂದ ಕಾಯುತ್ತಿರುವ ಶಿವಣ್ಣ.!

'ಆಕೆ' ಸಿನಿಮಾ ನೋಡಲು ಕಾತರದಿಂದ ಕಾಯುತ್ತಿರುವ ಶಿವಣ್ಣ.!

Posted By:
Subscribe to Filmibeat Kannada

ಚಿರಂಜೀವಿ ಸರ್ಜಾ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯಿಸಿರುವ 'ಆಕೆ' ಸಿನಿಮಾ ನಾಳೆ (ಜೂನ್ 30) ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. 'ಆಕೆ' ಸಿನಿಮಾದ ಟೀಸರ್ ನೋಡಿರುವವರು 'ಆಕೆ'ಯನ್ನ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅಂಥವರ ಪೈಕಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಒಬ್ಬರು.!

ಹೌದು, 'ಅಕೆ' ಚಿತ್ರವನ್ನ ನೋಡಲು ಶಿವಣ್ಣ ತುದಿಗಾಲಿನಲ್ಲಿ ನಿಂತಿದ್ದಾರೆ. 'ಆಕೆ' ಟೀಸರ್ ನೋಡಿದ ಕೂಡಲೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಿವಣ್ಣ, ಸಿನಿಮಾ ನೋಡಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.

Shiva Rajkumar speaks about Kannada Movie 'Aake' trailer

'ಆಕೆ' ಟೀಸರ್ ನೋಡಿದ್ಮೇಲೆ, ''ಆಕೆ' ಟ್ರೈಲರ್ ನೋಡಿದೆ. ತುಂಬಾ ಇಂಟ್ರೆಸ್ಟಿಂಗ್ ಆಗಿದೆ ನೋಡೋಕೆ. ಲಂಡನ್ ನಲ್ಲಿ ಶೂಟಿಂಗ್ ಮಾಡಬೇಕಾದರೆ, ಬ್ರೈಟ್ ಲೊಕೇಷನ್ಸ್ ತೋರಿಸುತ್ತೇವೆ. ಆದರೆ ಇಲ್ಲಿ ಜಾಸ್ತಿ ನೈಟ್ ಎಫೆಕ್ಟ್ ನಲ್ಲೇ ಶೂಟ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನನಗೆ ಕ್ಲೋಸ್ ಫ್ರೆಂಡ್. 'ಆಕೆ' ಸಿನಿಮಾ ಯಶಸ್ವಿ ಆಗುತ್ತೆ ಎಂಬ ಭರವಸೆ ನನಗೆ ಇದೆ. ಇಡೀ ಸಿನಿಮಾ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ'' ಎಂದಿದ್ದಾರೆ ನಟ ಶಿವರಾಜ್ ಕುಮಾರ್.

ಟೀಸರ್ ಮೂಲಕ ಎಲ್ಲರಲ್ಲಿಯೂ ಕುತೂಹಲ ಕೆರಳಿಸಿರುವ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳಿರುವ 'ಆಕೆ' ಸಿನಿಮಾ ತೆರೆಕಾಣಲು ಕ್ಷಣಗಣನೆ ಶುರುವಾಗಿದೆ.

English summary
Kannada Actor Shiva Rajkumar speaks about Kannada Movie 'Aake' trailer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada