»   » ಶಂಕರ್ ಗುರು ಅವತಾರದಲ್ಲಿ ಬರಲಿದ್ದಾರೆ ಶಿವರಾಜ್

ಶಂಕರ್ ಗುರು ಅವತಾರದಲ್ಲಿ ಬರಲಿದ್ದಾರೆ ಶಿವರಾಜ್

By: ಕುಸುಮ
Subscribe to Filmibeat Kannada

ಸ್ಯಾಂಡಲ್ವುಡ್ ಕಿಂಗ್ ಶಿವಣ್ಣ ಲಿಸ್ಟಲ್ಲಿ ಮತ್ತೊಂದು ಸಿನಿಮಾ ಸೇರಿಕೊಳ್ತಿದೆ. ಅದು 'ಶಂಕರ್ ಗುರು'. ಡಾ. ರಾಜ್ ಅಭಿನಯದ 1978ರಲ್ಲಿ ತೆರೆಕಂಡ ಅಮೋಘ ಚಿತ್ರ ಸಿನಿಮಾ ಶಂಕರ್ ಗುರು. ಡಾ.ರಾಜ್ಗೆ ಚಿತ್ರದಲ್ಲಿ ಕಾಂಚನಾ ಜಯಮಾಲಾ ಜೋಡಿಯಾಗಿದ್ದರು. ವಿಶೇಷ ಅಂದ್ರೆ ವರನಟ ರಾಜ್ಕುಮಾರ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡ ಅಪರೂಪದ ಚಿತ್ರ ಅದು.

ಈಗ 'ಶಂಕರ್ ಗುರು' ಚಿತ್ರವನ್ನು ನಿರ್ದೇಶನ ಮಾಡೋಕೆ ಕೈಗೆತ್ತಿಕೊಂಡಿರೋದು ಭಟ್ಟರ ಆತ್ಮೀಯ ಗೆಳೆಯ ಹರಿಪ್ರಸಾದ್ ಜಯಣ್ಣ. ಯೋಗರಾಜ ಭಟ್ಟರ ಪ್ರತಿಯೊಂದು ಸಿನಿಮಾ ವಿಚಾರದಲ್ಲೂ ಅವರ ಬಲಗೈಯಾಗಿ ನಿಲ್ಲುವ ಹರಿಪ್ರಸಾದ್ ಜಯಣ್ಣರಿಗೆ ಭಟ್ಟರೇ ಇಂತಹಾ ಅವಕಾಶ ಮಾಡಿಕೊಟ್ಟಿದ್ದಾರೆ ಅಂತ, ತಮ್ಮ ಗೆಳೆಯನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಟ್ಟರ ಬಳಗದಿಂದ ಹೊರಬರುತ್ತಿರುವ ಮತ್ತೊಬ್ಬ ನಿರ್ದೇಶಕ ಹೇಳಿಕೊಂಡಿದ್ದಾರೆ.


ಇನ್ನು, ಎರಡು ಕನಸು ನಂತರ ಡಾ. ರಾಜ್ ಸಿನಿಮಾಗಳ ಟೈಟಲ್ ಗಳು ಮತ್ತೆ ರಾರಾಜಿಸುತ್ತಿವೆ. ಈಗಾಗಲೇ ವಿಷ್ಣು ದಾದಾ ಮತ್ತು ರಾಜ್ ಟೈಟಲ್ಗಳನ್ನು ಮತ್ತೆ ಮತ್ತೆ ಇಡುವ ಮೂಲಕ ಸ್ಯಾಂಡಲ್ವುಡ್ ಈ ಇಬ್ಬರೂ ದಿಗ್ಗಜರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದೆ. ಇದಕ್ಕೆ ಶಂಕರ್ ಗುರು ಮತ್ತೊಂದು ಉದಾಹರಣೆ.

Shiva Rajkumar to star in Rajkumar's old movie Shankar Guru

ಇನ್ನು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವುದು ಸ್ಯಾಂಡಲ್ವುಡ್ನ ಖ್ಯಾತ ವಿತರಕ ಎನ್ ಕುಮಾರ್. ಇಡೀ ತಂಡವನ್ನು ಕಟ್ಟಿಕೊಂಡು ಯೋಗರಾಜ ಭಟ್ಟರು ಇತ್ತೀಚೆಗೆ ಶಿವಣ್ಣರನ್ನು ಭೇಟಿಯಾಗಿದ್ದಾರೆ. ಜೊತೆಗೆ ಟೈಟಲ್ ಡಿಸೈನ್ಕೂಡ ಹೊರಬರುವ ಮೂಲಕ ಡಾ.ರಾಜ್ ಮತ್ತು ಡಾ. ಶಿವಣ್ಣ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಕ್ಕಂತಾಗಿದೆ. ಚಿತ್ರಕ್ಕೆ ಯೋಗರಾಜ ಭಟ್ಟರ ಸಾಹಿತ್ಯ, ಸಂಭಾಷಣೆ ಕೂಡ ಇರಲಿದೆ.

ಅಪ್ಪ ಮಾಡಿದ ಚಿತ್ರಗಳನ್ನು ಶಿವರಾಜ್ ಕುಮಾರ್ ಮಾಡುತ್ತಿರುವುದು ಇದು ಹೊಸದೇನಲ್ಲ. ಹಿಂದೆ ಶಿವಮೆಚ್ಚಿದ ಕಣ್ಣಪ್ಪ, ಗಂಧದ ಗುಡಿ ಮುಂತಾದ ಚಿತ್ರಗಳಲ್ಲಿ ಶಿವರಾಜ್ ಮಿಂಚಿದ್ದರು. ಅವು ಅಂತಹ ಹೆಸರು ಮಾಡಿದ್ದಿಲ್ಲವಾದರೂ ಚಿತ್ರರಸಿಕರ ಗಮನ ಸೆಳೆದಿದ್ದವು. ಈಗ ಶಂಕರ್ ಗುರು ಹೊರಬರುತ್ತಿದೆ. ಇದು ಆ ಚಿತ್ರದ ರೀಮೇಕಾ? ಗೊತ್ತಿಲ್ಲ.


ಇನ್ನು ಈಗಿರುವ ಸಿನಿಮಾಗಳ ಪಟ್ಟಿನ ನೋಡಿದ್ರೆ ಹಳೆಯ ಶಂಕರ್ ಗುರು ಬಂದು ಸರಿಯಾಗಿ 40 ವರ್ಷಕ್ಕೆ ಹೊಸ ಶಂಕರ್ ಗುರು ಬರುವ ಸಾಧ್ಯತೆಯೇ ಹೆಚ್ಚು. ಅಂದರೆ 2018ಕ್ಕೆ. ಅಲ್ಲಿಯವರೆಗೆ ಹಳೆಯ ಶಂಕರ್ ಗುರು ಚಲನಚಿತ್ರ ಸಿಕ್ಕರೆ ನೋಡುತ್ತಿರಿ.


ಚಿತ್ರ ಬರುವವರೆಗೆ ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ... ನಾ ಬೆಂಕಿಯಂತೆ ನಾ ಗಾಳಿಯಂತೆ... ಲವ್ ಮಿ ಆರ್ ಹೇಟ್ ಮಿ ಕಿಸ್ ಮಿ ಆರ್ ಕಿಲ್ ಮಿ ಓ ಡಾರ್ಲಿಂಗ್ ಪ್ಲೀಸ್ ಡೂ ಸಂಥಿಂಗ್ ಟು ಮಿ ಡುರುರು ಡುರುರು... ಹಾಡುಗಳನ್ನು ಗುನುಗುನುಸಿತ್ತಿರಿ.

English summary
Hattrick hero Shiva Rajkumar is all set to star in triple role in Shankar Guru. Dr Rajkumar had played the roles in block buster Kannada movie Shankar Guru in 1978. The movie to be directed by Hariprasad Jayanna, friend of Yogaraj Bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada