»   »  ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್

ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನವೆಂಬರ್ 2 ರಂದು ಭರ್ಜರಿಯಾಗಿ ನೆರವೇರಲಿದೆ.

ಈ ಮೊದಲು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಾಳೆ (ಅಕ್ಟೋಬರ್ 25) ರಂದು ನೆರವೇರಿಸಲು ಚಿತ್ರತಂಡ ನಿರ್ಧರಿಸಿತ್ತು, ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ಮುಂದೂಡಲಾಗಿದೆ. ಆದ್ದರಿಂದ ಚಿತ್ರದ ಆಡಿಯೋ ಲಾಂಚ್ ನವೆಂಬರ್ 2 ರಂದು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ನೆರವೇರಲಿದೆ.

ಈಗಾಗಲೇ ಚಿತ್ರದ 2 ಟ್ರೈಲರ್ ಗಳು ಬಿಡುಗಡೆಯಾಗಿದ್ದು, ಎಲ್ಲೆಡೆ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಜಜೀವನ ಚರಿತ್ರೆಯಾಧರಿತ ಕಥೆಯನ್ನೊಳಗೊಂಡ 'ಕಿಲ್ಲಿಂಗ್ ವೀರಪ್ಪನ್' ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಾ ಇದೆ.[ದೀಪಾವಳಿಗೆ ಸಖತ್ ಸದ್ದು ಮಾಡಲಿದೆ ಕಿಲ್ಲಿಂಗ್ ವೀರಪ್ಪನ್! ]

Shiva Rajkumar Starrer 'Killing Veerappan' Audio Launch on November 2nd

ವಿವಾದಿತ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷಲ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ.

ಗ್ಲಾಮರ್ ಬೆಡಗಿ ಪಾರುಲ್ ಯಾದವ್ ಅವರು ಈ ಚಿತ್ರದಲ್ಲಿ ಗ್ಲಾಮರ್ ಲೆಸ್ ಆಗಿ ಇದೇ ಮೊದಲ ಬಾರಿಗೆ ಸೂಪರ್ ಕಾಪ್ ಆಗಿ ಮಿಂಚಿದ್ದಾರೆ. ನಟಿ ಯಜ್ಞಾ ಶೆಟ್ಟಿ ಮುತ್ತುಲಕ್ಷ್ಮಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಇನ್ನುಳಿದಂತೆ ಸಂದೀಪ್ ಭಾರದ್ವಾಜ್ ವೀರಪ್ಪನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಂಚಾರಿ ವಿಜಯ್, ನಿರ್ದೇಶಕ ಗಡ್ಡಾ ವಿಜಿ, ರಾಜೇಶ್, ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.['ಕಿಲ್ಲಿಂಗ್ ವೀರಪ್ಪನ್', ಸೆಕೆಂಡ್ ಟ್ರೈಲರ್ ನ 10 ಕುತೂಹಲಕಾರಿ ಅಂಶಗಳು ]

ಅಂದಹಾಗೆ ಭಾರಿ ಕುತೂಹಲ ಮೂಡಿಸಿರುವ 'ಕಿಲ್ಲಿಂಗ್ ವೀರಪ್ಪನ್' ನವೆಂಬರ್ 12 ರಂದು ದೀಪಾವಳಿಯ ದಿನದಂದು 3 ಭಾಷೆಗಳಲ್ಲಿ ಎಲ್ಲೆಡೆ ಏಕಕಾಲದಲ್ಲಿ ಸುಮಾರು 3000 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

English summary
The audio launch of Shiva Rajkumar's "Killing Veerappa" is slated for 2nd November. 'Killing Veerappa' audio is composed by Sai Karthik and Ravi Shankar. The movie features Kannada Actor Shiva Rajkumar, Kannada Actress Parul Yadav, Actress Yagna Shetty in the lead role. The moive is directed by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada