»   » 'ಶ್ರೀಕಂಠ'ನ ರುದ್ರನರ್ತನಕ್ಕೆ ಬಾಕ್ಸ್ ಆಫೀಸ್ ಉಡೀಸ್!

'ಶ್ರೀಕಂಠ'ನ ರುದ್ರನರ್ತನಕ್ಕೆ ಬಾಕ್ಸ್ ಆಫೀಸ್ ಉಡೀಸ್!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಚಿತ್ರಗಳಿಗೀಗ ಒಳ್ಳೆಯ ದಿನಗಳು. ಯಾಕಂದ್ರೆ, ಒಂದಕ್ಕಿಂತ ಮತ್ತೊಂದು ಸಿನಿಮಾ ಅದ್ಭುತವಾಗಿ ಮೂಡಿಬರುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಎಲ್ಲರ ಹುಬ್ಬೇರುವಂತೆ ಮಾಡಿದೆ. ರಮೇಶ್ ಅರವಿಂದ್ ಅವರ 'ಪುಷ್ಪಕ ವಿಮಾನ' ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ.

ಇವೆರೆಡು ಚಿತ್ರಗಳ ಜೊತೆಯಲ್ಲಿ ಬಂದ 'ಶ್ರೀಕಂಠ' ಬಾಕ್ಸ್ ಆಫೀಸ್ ಮೇಲೆ ಸವಾರಿ ಮಾಡುತ್ತಿದೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶ್ರೀಕಂಠ' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಮೊದಲ ವಾರದಲ್ಲಿ ಅತ್ಯುತ್ತಮ ಗಳಿಕೆ ಕಂಡಿದೆ.[ವಿಮರ್ಶೆ: ಪ್ರೀತಿಗೆ ನೆಂಟ, ದುಷ್ಟರಿಗೆ ಒರಟ ಈ ಕಾಮನ್ ಮ್ಯಾನ್ 'ಶ್ರೀಕಂಠ']


ಅಷ್ಟೇ ಅಲ್ಲ, 'ಶ್ರೀಕಂಠ' ಚಿತ್ರದ ಸ್ಯಾಟ್ ಲೈಟ್ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಟವಾಗಿದೆ. ಹಾಗಾದ್ರೆ, ಶಿವಣ್ಣನ ಮೊದಲ ವಾರದ ಭೇಟೆ ಹೇಗಿತ್ತು ಅಂತ ಇಲ್ಲಿದೆ ನೋಡಿ....


ಬಾಕ್ಸ್ ಆಫೀಸ್ ನಲ್ಲಿ 'ಶ್ರೀಕಂಠ' ಸವಾರಿ

ಮಂಜು ಸ್ವಾರಾಜ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದ 'ಶ್ರೀಕಂಠ' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ, ಗಲ್ಲಾಪೆಟ್ಟಿಗೆಯಲ್ಲೂ 'ಶ್ರೀಕಂಠ' ರುದ್ರನರ್ತನ ಮಾಡಿದ್ದಾನೆ.[ಸೆಂಚುರಿ ಸ್ಟಾರ್ ಶಿವಣ್ಣ 'ಶ್ರೀಕಂಠ' ನಾಗಿ ಮಿಂಚಿಂಗ್]


ಮೊದಲ ವಾರಾಂತ್ಯಕ್ಕೆ ಗಳಿಸಿದ್ದೇಷ್ಟು?

ರಾಜ್ಯಾದ್ಯಂತ ಸುಮಾರು 220ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ 'ಶ್ರೀಕಂಠ' ಮೊದಲ ಮೂರು ದಿನಗಳಿಗೆ ಸುಮಾರು 7 ಕೋಟಿ ಗಳಿಸಿದ್ದಾನಂತೆ.[ಕಾಮನ್ ಮ್ಯಾನ್ 'ಶ್ರೀಕಂಠ'ನಿಗೆ ವಿಮರ್ಶಕರಿಂದ ಬಂದ ಕಾಮೆಂಟ್ ಗಳೇನು!]


ಭರ್ಜರಿ ಮೊತ್ತಕ್ಕೆ ಟಿವಿ ಹಕ್ಕು ಮಾರಾಟ!

ಇನ್ನೂ 'ಶ್ರೀಕಂಠ' ಚಿತ್ರದ ಟಿವಿ ರೈಟ್ಸ್ ಖರೀದಿಯಾಗಿದ್ದು, 2.2೦ ಕೋಟಿಗೆ ಖಾಸಗಿ ವಾಹಿನಿ ಪಡೆದುಕೊಂಡಿದೆಯಂತೆ.


ಗಾಂಧಿನಗದರಲ್ಲಿ 'ಕಾಮನ್ ಮ್ಯಾನ್' ಅಬ್ಬರ!

'ಕಾಮನ್ ಮ್ಯಾನ್' ಕಥೆಯುಳ್ಳ 'ಶ್ರೀಕಂಠ' ಸಾಮಾಜಿಕ ಸಂದೇಶದ ಜೊತೆಗೆ ಉತ್ತಮ ಮನರಂಜನೆ ಕೂಡ ನೀಡಿದೆ. ಮಂಜು ಸ್ವರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇನ್ನೂ ಸೆಂಚುರಿ ಸ್ಟಾರ್ ಗೆ ಚಾಂದಿನಿ ಶ್ರೀಧರನ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮನು ಗೌಡ ನಿರ್ಮಾಣ ಮಾಡಿದ್ದಾರೆ.[ಶಿವಣ್ಣನ 'ಶ್ರೀಕಂಠ' ಯಾಕೆ ನೋಡ್ಬೇಕು? ಇಲ್ಲಿದೆ 6 ಕಾರಣ!]


English summary
According to Soruce ShivrajKumar Starrer 'Srikanta' Movie has collect 7 crors in first 3 days on box office. The Movie Directed by Manju Swaraj.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada