»   » ಸೆನ್ಸಾರ್ ಮುಗಿಸಿದ 'ಟಗರು' ಚಿತ್ರಕ್ಕೆ 'ಎ' ಸರ್ಟಿಫಿಕೇಟ್

ಸೆನ್ಸಾರ್ ಮುಗಿಸಿದ 'ಟಗರು' ಚಿತ್ರಕ್ಕೆ 'ಎ' ಸರ್ಟಿಫಿಕೇಟ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಸೆನ್ಸಾರ್ ಮುಗಿಸಿದೆ. ಫೆಬ್ರವರಿ 23 ರಂದು 'ಟಗರು' ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಸೆನ್ಸಾರ್ ಮಂಡಳಿಯಿಂದ ಪಾಸ್ ಆಗಿರುವ ಟಗರು ಈಗ ಅದೇ ದಿನ ಬರಲಿದೆ ಎನ್ನುವುದು ಈಗ ಅಧಿಕೃತವಾಗಿದೆ.

ಶಿವಣ್ಣನ ಟಗರು ಚಿತ್ರಕ್ಕೆ 'ಎ' ಪ್ರಮಾಣಪತ್ರ ಸಿಕ್ಕಿದೆ. ಯಾವುದೇ ಕಟ್ ಇಲ್ಲದಿರುವುದು ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದೆ ಎಂದು ಆತಂಕ ಪಡುವಂತಿಲ್ಲ. ಇದರಿಂದ ಶಿವಣ್ಣನ ಫ್ಯಾನ್ಸ್ ಮತ್ತಷ್ಟು ರಗಡ್ ಆಗಿದ್ದಾರೆ. ಯಾಕಂದ್ರೆ, ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ ಅಂದ್ರೆ ಸಿನಿಮಾ ಎಷ್ಟು ಮಾಸ್ ಆಗಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಶಿವಣ್ಣನ ಫೇವರೆಟ್ ಚಿತ್ರಮಂದಿರದಲ್ಲಿ 'ಟಗರು' ಆಗಮನ

shiva rajkumar starrer tagaru movie get a certificate

ಈಗಾಗಲೇ ಟೀಸರ್ ಮತ್ತು ಆಡಿಯೋ ಮೂಲಕ ಅಬ್ಬರಿಸುತ್ತಿರುವ ಟಗರು, ಚಿತ್ರಮಂದಿರದಲ್ಲಿ ಧೂಳೆಬ್ಬಿಸಲು ಸಿದ್ದವಾಗಿದೆ. ಚಿತ್ರದಲ್ಲಿ ಶಿವಣ್ಣ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದು, ವಸಿಷ್ಠ ಸಿಂಹ ಮತ್ತು ಧನಂಜಯ್ ವಿಲನ್ ಗಳಾಗಿ ಅಭಿನಯಿಸಿರುವುದು ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

'ಟಗರು' ನೋಡಲು ದುಬೈನಿಂದ ಬರ್ತಿದ್ದಾರೆ 'ಶಿವ' ಭಕ್ತರು.!

ಸೆಂಚುರಿ ಸ್ಟಾರ್ ಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮಾನ್ವಿತ ಹರೀಶ್ ಮತ್ತು ಭಾವನಾ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ದುನಿಯಾ ಸೂರಿ ನಿರ್ದೇಶನ ಮಾಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಂದ್ಹಾಗೆ, ಟಗರು ಸಿನಿಮಾ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ದುನಿಯಾ ಸೂರಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ. ಇದಕ್ಕು ಮೊದಲು ಕಡ್ಡಿಪುಡಿ ಚಿತ್ರದಲ್ಲಿ ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಸೂಪರ್ ಹೊಟ್ ಬಾರಿಸಿತ್ತು. ಅದೇ ಭರವಸೆ ಈ ಚಿತ್ರದ ಮೇಲೂ ಇದೆ.

English summary
hatric hero shiva rajkumar starrer tagaru movie get a certificate from censor board. the movie will be releasing on febrauary 23rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada