For Quick Alerts
  ALLOW NOTIFICATIONS  
  For Daily Alerts

  ಶಿವ ರಾಜ್‌ಕುಮಾರ್ 125ನೇ ಚಿತ್ರ 'ವೇದ' ಮೊದಲ 3 ದಿನಗಳಲ್ಲಿ ಗಳಿಸಿದ ಹಣವೆಷ್ಟು?

  |

  ಶಿವ ರಾಜ್ ಕುಮಾರ್ ಹಾಗೂ ಎ ಹರ್ಷ ಕೊಂಬೊನ ನಾಲ್ಕನೇ ಚಿತ್ರ ವೇದ ಕಳೆದ ಶುಕ್ರವಾರ ( ಡಿಸೆಂಬರ್ 23 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆಯಾಗಿದೆ. ಇನ್ನು ವೇದ ಚಿತ್ರಕ್ಕೆ ಕನ್ನಡ ಸಿನಿ ಪ್ರೇಕ್ಷಕ ಫುಲ್ ಮಾರ್ಕ್ಸ್ ನೀಡಿದ್ದು, ಸ್ಟಾರ್ ನಟರು ಅದೇ ಹಳೆ ಮಸಾಲಾ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿ ಇಂಥ ಪ್ರಯತ್ನಗಳಿಗೆ ಕೈಹಾಕಬೇಕು ಎಂದು ದೊಡ್ಡ ‌ಮಟ್ಟದ ಅಭಿಪ್ರಾಯಗಳನ್ನು ‌ವ್ಯಕ್ತಪಡಿಸಿದ್ದಾರೆ.

  ತಮ್ಮ ಹಳೆಯ ಚಿತ್ರಗಳ ಪ್ಯಾಟರ್ನ್ ಬಿಟ್ಟು ಹೊರಬಂದಿರುವ ನಿರ್ದೇಶಕ ಎ ಹರ್ಷ ಈ ಬಾರಿ ಬೇರೆಯದ್ದೇ ಜಾನರ್ ಕಥೆಯನ್ನು ಹೆಣೆದು ಗೆದ್ದಿದ್ದಾರೆ‌. ವೇದ ಶಿವಣ್ಣನ 125ನೇ ಚಿತ್ರ ಎಂಬ ಅಂಕಿಯ ಮೈಲಿಗಲ್ಲು‌ ಮಾತ್ರವಲ್ಲದೇ ಕಥೆಯ ವಿಷಯದಲ್ಲೂ ಸಹ ಒಂದು ಮೈಲಿಗಲ್ಲಾಗಿ ಉಳಿಯಲಿದೆ. ವೇದನಾಗಿ ಶಿವ ರಾಜ್‌ಕುಮಾರ್ ಅಬ್ಬರಿಸಿದರೆ, ಶಿವಣ್ಣನ ಮಗಳಾಗಿ ಅದಿತಿ ಸಾಗರ್ ಮೈನವಿರೇಳಿಸುವಂತೆ ನಟಿಸಿದ್ದಾರೆ.

  ನರ್ತಕಿಯಲ್ಲಿ 'ವೇದ'ನ ಅಬ್ಬರ; ಡಿಸೆಂಬರ್ 24ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?ನರ್ತಕಿಯಲ್ಲಿ 'ವೇದ'ನ ಅಬ್ಬರ; ಡಿಸೆಂಬರ್ 24ರಂದು ಬೆಂಗಳೂರಿನ ಯಾವ ಚಿತ್ರಮಂದಿರದಲ್ಲಿ ಯಾವ ಚಿತ್ರ?

  ಇನ್ನುಳಿದಂತೆ ನಟಿ ಗಾನವಿ ಲಕ್ಷ್ಮಣ್, ಶ್ವೇತಾ ಚಂಗಪ್ಪ, ಉಮಾಶ್ರೀ, ವೀಣಾ ಪೊನ್ನಪ್ಪ ನಟನೆ ಬಗ್ಗೆ ವೀಕ್ಷಕರು ಚಿತ್ರ ಮುಗಿದ ನಂತರವೂ ಮತಾನಾಡದೇ ಇರಲಾರರು. ಹೀಗೆ ಎಲ್ಲಾ ವಿಭಾಗಗಳಲ್ಲೂ ಅಚ್ಚುಕಟ್ಟಾಗಿ ತಯಾರಾಗಿರುವ ವೇದ ಚಿತ್ರ ಕಲೆಕ್ಷನ್ ವಿಚಾರದಲ್ಲೂ ಸಹ ಸದ್ದು ಮಾಡುತ್ತಿದೆ. ಚಿತ್ರ ವೀಕ್ಷಿಸಿದ ಜನರು ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಹೆಚ್ಚು ಜನರು ಚಿತ್ರಮಂದಿರದತ್ತ ಬರುತ್ತಿದ್ದು, ವೇದ ಮೊದಲ ಮೂರು ದಿನಗಳಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡಿದೆ.

  ವೇದ ಮೊದಲ ಮೂರು ದಿನಗಳಲ್ಲಿ ಗಳಿಸಿದ್ದೆಷ್ಟು?

  ವೇದ ಮೊದಲ ಮೂರು ದಿನಗಳಲ್ಲಿ ಗಳಿಸಿದ್ದೆಷ್ಟು?

  ವೇದ ಚಿತ್ರದ ಗಳಿಕೆಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸದೇ ಇದ್ದರೂ ಸಹ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಚಿತ್ರ ಎಷ್ಟು ಗಳಿಸಿರಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವರದಿಗಳ ಪ್ರಕಾರ ವೇದ ಬಿಡುಗಡೆ ದಿನ 1.75 ಕೋಟಿ ರೂಪಾಯಿಗಳನ್ನು ಗಳಿಸಿತ್ತು, ಎರಡನೇ ದಿನ ಶನಿವಾರ 1.60 ಕೋಟಿ ರೂಪಾಯಿಗಳನ್ನು ಗಳಿಸಿತು ಹಾಗೂ ಮೂರನೇ ದಿನ 1.90 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ವೇದ ಚಿತ್ರ ಮೊದಲ 3 ದಿನಗಳಲ್ಲಿ 5.25 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

  ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳೆಡೆಗೆ

  ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳೆಡೆಗೆ

  ಇನ್ನು ವೇದ ಚಿತ್ರ ವೀಕ್ಷಿಸಲು ತಮ್ಮ ಕುಟುಂಬ ಸದಸ್ಯರ ಜತೆ ಸಿನಿರಸಿಕರು ಆಗಮಿಸುತ್ತಿರುವ ದೃಶ್ಯಗಳು ಶನಿವಾರ ಹಾಗೂ ಭಾನುವಾರ ಸಾಮಾನ್ಯವಾಗಿ ಕಂಡುಬಂದಿತ್ತು. ಚಿತ್ರವೊಂದರಲ್ಲಿ ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಕಥೆಯಿದ್ದರೆ, ಸಂದೇಶವಿದ್ದರೆ ಆ ಚಿತ್ರವನ್ನು ಫ್ಯಾಮಿಲಿ ಆಡಿಯನ್ಸ್ ಕೈಬಿಡುವುದಿಲ್ಲ ಎಂಬುದಕ್ಕೆ ವೇದ ಚಿತ್ರವೇ ಸದ್ಯಕ್ಕೆ ಉದಾಹರಣೆ.

  ಪರಭಾಷಾ ಪ್ರೇಕ್ಷಕರು ಫಿದಾ

  ಪರಭಾಷಾ ಪ್ರೇಕ್ಷಕರು ಫಿದಾ

  ವೇದ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿಯೂ ಸಹ ಡಬ್ ಆಗಿ ಬಿಡುಗಡೆಗೊಂಡಿದೆ. ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿಯೂ ಸಹ ಸಿನಿ ರಸಿಕರಿಂದ ವೇದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅದರಲ್ಲಿಯೂ ತಮಿಳಿನ ಸಿನಿ ರಸಿಕರು ಯುಟ್ಯೂಬ್ ಚಾನೆಲ್ ಒಂದು ನಡೆಸಿದ ಆಡಿಯನ್ಸ್ ರಿವ್ಯೂ ವಿಡಿಯೊದಲ್ಲಿ ಚಿತ್ರದ ಬಗ್ಗೆ ಹೇಳಿರುವ ಮಾತುಗಳು ಗಮನ ಸೆಳೆದಿವೆ. ವೇದ ವೀಕ್ಷಿಸಿದ ತಮಿಳು ಪ್ರೇಕ್ಷಕರು ಕಾಂತಾರ ಹಾಗೂ ಕೆಜಿಎಫ್ ಜತೆ ಚಿತ್ರವನ್ನು ಹೋಲಿಸಿ ಮಾತನಾಡುತ್ತಿದ್ದಾರೆ.

  English summary
  Shiva Rajkumar starrer Vedha movie first 3 days collection report. Take a look
  Monday, December 26, 2022, 12:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X