»   » ಹೊಸ ಪ್ರಯೋಗಕ್ಕೆ ಮುಂದಾದ ಶಿವರಾಜ್ ಕುಮಾರ್!

ಹೊಸ ಪ್ರಯೋಗಕ್ಕೆ ಮುಂದಾದ ಶಿವರಾಜ್ ಕುಮಾರ್!

Posted By:
Subscribe to Filmibeat Kannada
Shivarajkumar to act in a Remake Cinema | FIlmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಲ್ಲ ರೀತಿಯ ಚಿತ್ರಗಳಿಗೂ ಸೈ ಎನ್ನುವ ಏಕೈಕ ನಟ ಅಂದ್ರೆ ತಪ್ಪಾಗಲಾರದು. ಆದ್ರೆ, ಇತ್ತೀಚಿನ ದಿನಗಳಲ್ಲಿ ಶಿವಣ್ಣ ಪಕ್ಕಾ ಮಾಸ್ ಎಂಟರ್ ಟೈನ್ ಮೆಂಟ್ ಸಿನಿಮಾಗಳನ್ನ ಮಾಡ್ತಿದ್ದಾರೆ.

'ಶ್ರೀಕಂಠ', 'ಮಾಸ್ ಲೀಡರ್', 'ಟಗರು', 'ದಿ ವಿಲನ್' ಹೀಗೆ ಒಂದರ ಹಿಂದೆ ಮತ್ತೊಂದರಂತೆ ಮಾಸ್ ಮನರಂಜನೆ ನೀಡುತ್ತಿದ್ದಾರೆ. ಹೀಗಿರುವಾಗ, ಶಿವಣ್ಣ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಸುಮಾರು 15 ವರ್ಷದ ನಂತರ ರೀಮೇಕ್ ಸಿನಿಮಾ ಶಿವಣ್ಣ ಅಭಿನಯಿಸುತ್ತಿದ್ದಾರೆ ಎನ್ನುವುದು ವಿಶೇಷವಾಗಿದ್ದರೇ, ಈ ಚಿತ್ರದಲ್ಲಿ ಅವರ ಪಾತ್ರವೇ ಹೊಸ ಸಂಚಲನ ಸೃಷ್ಟಿಸಲಿದೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಏನಿದು ಶಿವಣ್ಣನ ಹೊಸ ಪ್ರಯೋಗ ಅಂತ ಮುಂದೆ ಓದಿ.....

15 ವರ್ಷದ ನಂತರ ರೀಮೇಕ್ ಸಿನಿಮಾ

ಶಿವರಾಜ್ ಕುಮಾರ್ ಅವರು ಇನ್ನು ಮುಂದೆ ರೀಮೆಕ್ ಸಿನಿಮಾ ಮಾಡುವುದಿಲ್ಲ ಎಂದು ಘೋಷಿಸಿಕೊಂಡಿದ್ದರು. ಅದರಂತೆ ಕಳೆದ ಹದಿನೈದು ವರ್ಷಗಳಿಂದ ಯಾವ ರೀಮೇಕ್ ಚಿತ್ರವೂ ಮಾಡಿಲ್ಲ. ಈಗ ಚಿತ್ರದ ಕಥೆ ತುಂಬ ಇಷ್ಟವಾಗಿರವುದರಿಂದ ರೀಮೇಕ್ ಮಾಡಲು ಸೆಂಚುರಿ ಸ್ಟಾರ್ ಒಪ್ಪಿಕೊಂಡಿದ್ದಾರೆ.

14 ವರ್ಷದ ನಂತರ ರೀಮೇಕ್ ಚಿತ್ರದಲ್ಲಿ ಶಿವಣ್ಣ!

ಮಲಯಾಳಂ ಚಿತ್ರ 'ಒಪ್ಪಂ'

ಮೋಹನ್ ಲಾಲ್ ನಟಿಸಿದ್ದ 'ಒಪ್ಪಂ' ಭಾವನಾತ್ಮಕ ಕಥಾಹಂದರವನ್ನ ಹೊಂದಿತ್ತು. ಪ್ರಿಯದರ್ಶನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮೋಹನ್ ಲಾಲ್ ಅಭಿನಯಕ್ಕೆ ಪ್ರಶಂಸೆಗಳ ಸುರಿಮಳೆ ಬಂದಿತ್ತು. 'ಇದಕ್ಕೆ ಭಾಷೆಯ ಮಿತಿಯಿಲ್ಲ. ಎಲ್ಲರೂ ನೊಡಲೇಬೇಕಾದ ಸಿನಿಮಾ' ಅಂತ ವಿಮರ್ಶಕರಿಂದ ಶಬ್ಬಾಶ್ ಎನಿಸಿಕೊಂಡಿತ್ತು. ಮೋಹನ್ ಲಾಲ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಸಮುದ್ರಕಣಿ, ವಿಮಲ ರಾಮನ್, ಪುಟಾಣಿ ಮೀನಾಕ್ಷಿ ಸೇರಿದಂತೆ ಹಲವರು ಅಭಿನಯಿಸಿದ್ದರು.

ಕುರುಡನ ಪಾತ್ರದಲ್ಲಿ ಶಿವಣ್ಣ!

ಚಿತ್ರದಲ್ಲಿ ನಾಯಕ ಅಂಧನಾಗಿರುತ್ತಾನೆ. ಆದರೆ, ತನ್ನ ಶ್ರವಣ, ತೀಕ್ಷ್ಣತೆ, ಹಾಗೂ ಗ್ರಹಣ ಶಕ್ತಿಯಿಂದ ಎಲ್ಲವನ್ನೂ ಗುರುತಿಸುವ ವಿಶೇಷ ಶಕ್ತಿ ಹೊಂದಿರುತ್ತಾನೆ. ತಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ನಲ್ಲೊಂದು ಕೊಲೆಯಾಗುತ್ತೆ. ಆ ಕೊಲೆಯನ್ನ ಈ ಕುರುಡು ವ್ಯಕ್ತಿ ಭೇದಿಸುತ್ತಾನೆ. ಇದರ ಜೊತೆಗೆ ಮಗಳ ಜೊತೆಗಿನ ಬಾಂಧವ್ಯ ಚಿತ್ರದ ಪ್ರಮುಖ ಆಕರ್ಷಣೆ. ಹೀಗಾಗಿ, ಶಿವರಾಜ್ ಕುಮಾರ್ ಈ ಪಾತ್ರ ನಿರ್ವಹಿಸಲು ಮನಸ್ಸು ಮಾಡಿದ್ದಾರೆ.

ಮೋಹನ್ ಲಾಲ್ 'ಒಪ್ಪಂ' ಕನ್ನಡಕ್ಕೆ ರಿಮೇಕ್: ಹೀರೋ ಯಾರು ಗೊತ್ತಾ ?

'ಹಯಗ್ರೀವ' ಸಂಸ್ಥೆಯಡಿ ನಿರ್ಮಾಣ

'ಒಪ್ಪಂ' ಚಿತ್ರದ ರಿಮೇಕ್ ಹಕ್ಕನ್ನ 'ಹಯಗ್ರೀವ ಸಂಸ್ಥೆ' ಕೊಂಡುಕೊಂಡಿದ್ದು, ಎಂವಿವಿ ಸತ್ಯನಾರಾಯಣ ಜತೆಗೂಡಿ ಸಂಪತ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ. 'ಹಯಗ್ರೀವ' ಕನ್ನಡದಲ್ಲಿ ಸಿನಿಮಾ ಮಾಡುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಕನ್ನಡದ ಚಿತ್ರವೊಂದಕ್ಕೆ ಬಂಡವಾಳ ಹೂಡಿದ್ದು, ತೆಲುಗಿನ 'ಕುಮಾರಿ21F' ಚಿತ್ರವನ್ನ ಕನ್ನಡದಲ್ಲಿ ನಿರ್ಮಾಣ ಮಾಡುತಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್ ಅವರ ಎರಡನೇ ಪುತ್ರ ಪ್ರಣಾಮ್ ನಾಯಕನಾಗಿದ್ದಾರೆ.

ಅಕ್ಟೋಬರ್ ನಲ್ಲಿ ಸೆಟ್ಟೇರುವ ಸಾಧ್ಯತೆ

ರಾಮ್ ಗೋಪಾಲ್ ವರ್ಮಾರ ಬಳಿ ಕೆಲಸ ಮಾಡಿದ್ದ ಜಿವಿಆರ್ ವಾಸು ಅವರು ಕನ್ನಡದ ಒಪ್ಪಂ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಶಿವಮೊಗ್ಗ, ಊಟಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆ. ಮಲಯಾಳಂ ಚಿತ್ರದಲ್ಲಿ ನಟಿಸಿದ್ದ ಬಾಲನಟಿಯನ್ನೇ ಈ ಚಿತ್ರಕ್ಕೂ ಕರೆತರುವ ಪ್ರಯತ್ನ ನಡೆದಿದ್ದು, ನಟ ಅನಂತ್ ನಾಗ್ ಅವರನ್ನ ಕೂಡ ವಿಶೇಷ ಪಾತ್ರಕ್ಕಾಗಿ ಆಹ್ವಾನ ನೀಡಲಾಗಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಅಕ್ಟೋಬರ್ ವೇಳೆ ಈ ಸಿನಿಮಾ ಸೆಟ್ಟೇರಲಿದೆ.

English summary
Actor Shivarajkumar, who had decided not to act in remake movies, has shown interest to act in Kannada version of Malayalam film Oppam, which has Mohanlal, Samuthirakani and Anushree in the lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada