»   » ಶಿವಣ್ಣ ಕಡೆಯಿಂದ ದಿಢೀರ್ ನಿರ್ಣಯ.! ಇಡೀ ಸ್ಯಾಂಡಲ್ ವುಡ್ ಗೆ ಹೆಮ್ಮೆ.!

ಶಿವಣ್ಣ ಕಡೆಯಿಂದ ದಿಢೀರ್ ನಿರ್ಣಯ.! ಇಡೀ ಸ್ಯಾಂಡಲ್ ವುಡ್ ಗೆ ಹೆಮ್ಮೆ.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಗುಂಪುಗಾರಿಕೆ ಹೆಚ್ಚು. ಈ ಗುಂಪಿನವರನ್ನು ಕಂಡ್ರೆ, ಆ ಗುಂಪಿಗೆ ಆಗಲ್ಲ. ಆ ಗುಂಪಿನವರನ್ನು ಕಂಡ್ರೆ, ಈ ಗುಂಪಿನವರಿಗೆ ಹೊಟ್ಟೆ ಉರಿ ಅಂತ ಬೆಂಕಿ ಇಲ್ಲದೆ ಹೊಗೆ ಆಡಿಸುವವರು ಅದೆಷ್ಟೋ ಮಂದಿ ಇದ್ದಾರೆ.

ಇನ್ನೂ ಹೈಟೆಕ್ ಅಭಿಮಾನಿಗಳಂತೂ, ಕಾಲು ಕೆರೆದುಕೊಂಡು ಕಿಚ್ಚ ಸುದೀಪ್ ಹಾಗೂ ಶಿವಣ್ಣ ಹೆಸರಲ್ಲಿ ಫೇಸ್ ಬುಕ್ ನಲ್ಲಿ ಬೆರಣಿ ತಟ್ಟಿದ್ದು ವರ್ಲ್ಡ್ ಫೇಮಸ್ ನ್ಯೂಸ್.

'ರಣವಿಕ್ರಮ' ಚಿತ್ರ ಬಿಡುಗಡೆ ಆದ ದಿನ ಸುದೀಪ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಮೂರನೇ ಮಹಾ ಯುದ್ಧವೇ ನಡೆದುಹೋಯ್ತು.

ಇಷ್ಟೆಲ್ಲಾ ಆದರೂ, ಕನ್ನಡ ಚಿತ್ರರಂಗ 'ಒಂದು' ಅಂತ ನಮ್ಮ ಸ್ಟಾರ್ ನಟರು ಹೇಳುತ್ತಲೇ ಇದ್ದಾರೆ. ಆದ್ರೆ, ಈ ಬಾರಿ ಬರೀ ಬಾಯಿ ಮಾತಿಗೆ ಮಾತ್ರ ಸೀಮಿತವಾಗದೆ, ಖುದ್ದು ಮಾಡಿ ತೋರಿಸುವ ಸಲುವಾಗಿ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಒಂದು ನಿರ್ಣಯ ಕೈಗೊಂಡಿದ್ದಾರೆ. [ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇರುವ ಮಹಾದಾಸೆ ಏನು?]

ಅದೇನು ಅಂತ ಡೀಟೇಲ್ ಆಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

ಶಿವಣ್ಣ ತೆಗೆದುಕೊಂಡಿರುವ ಹೊಸ ನಿರ್ಣಯ ಏನು?

ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಆಯೋಜಿಸುತ್ತಿರುವ 'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್' ಕುರಿತಾಗಿ ಶಿವಣ್ಣ ಒಂದು ನಿರ್ಣಯ ಕೈಗೊಂಡಿದ್ದಾರೆ. ಆ ನಿರ್ಣಯವೇನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

ಶಿವಣ್ಣನ ನಿರ್ಧಾರ.!

''ಅಪ್ಪಾಜಿ ಹೆಸರಿನ ತಂಡಕ್ಕೆ ನಾನು ಕ್ಯಾಪ್ಟನ್ ಆದ್ರೆ, ಅದರಲ್ಲಿ ಏನಿದೆ ವಿಶೇಷ. ನಾನು ವಿಷ್ಣುವರ್ಧನ್ ತಂಡದ ಉಸ್ತುವಾರಿ ವಹಿಸಿಕೊಳ್ಳುತ್ತೇನೆ. ಚಿತ್ರರಂಗದಲ್ಲಿ ಎಲ್ಲರೂ ಒಂದೇ. ಪರಸ್ಪರ ಸೌಹಾರ್ದ ಇದೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ'' ಅಂತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಎಂ.ಎಸ್.ರಮೇಶ್ ಬಳಿ ಹೇಳಿದ್ದಾರೆ.

ಹಿನ್ನಲೆ....

'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್' ಪಂದ್ಯದ ತಂಡಗಳ ಕುರಿತಾಗಿ ಮಾತನಾಡಲು ನಿರ್ದೇಶಕ ಶೇಷಾದ್ರಿ ಹಾಗೂ ಎಂ.ಎಸ್.ರಮೇಶ್, ಶಿವರಾಜ್ ಕುಮಾರ್ ಮನೆಗೆ ಹೋಗಿದ್ದರು. ಆಗ ಶಿವಣ್ಣ ಈ ರೀತಿ ಹೇಳಿಕೆ ನೀಡಿದ್ದಾರೆ. [ಶುರುವಾಗುತ್ತಿದೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕ್ರಿಕೆಟ್ ಲೀಗ್]

ಸಾಹಸಸಿಂಹ ವಿಷ್ಣುವರ್ಧನ್ ತಂಡಕ್ಕೆ ಶಿವಣ್ಣ ಕ್ಯಾಪ್ಟನ್.!

''ನನ್ನನ್ನ ವಿಷ್ಣುವರ್ಧನ್ ತಂಡಕ್ಕೆ ಕ್ಯಾಪ್ಟನ್ ಮಾಡಿ'' ಅಂತ ಖುದ್ದು ಶಿವಣ್ಣ, ನಿರ್ದೇಶಕ ಶೇಷಾದ್ರಿ ಹಾಗೂ ಎಂ.ಎಸ್.ರಮೇಶ್ ಬಳಿ ಕೇಳಿಕೊಂಡಿದ್ದಾರಂತೆ.

ನಿರ್ದೇಶಕರಿಗೆ ಫುಲ್ ಖುಷ್.!

ಅಷ್ಟಕ್ಕೂ, ನಿರ್ದೇಶಕ ಶೇಷಾದ್ರಿ ಹಾಗೂ ಎಂ.ಎಸ್.ರಮೇಶ್ ಅವರ ಆಸೆಯೂ ಇದೇ ಆಗಿತ್ತು. ಆದ್ರೆ, ಶಿವಣ್ಣ ಬಳಿ ಈ ಪ್ರಸ್ತಾಪ ಇಡುವುದು ಹೇಗೆ ಅಂತ ಇಬ್ಬರೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಅಷ್ಟರೊಳಗೆ, ಶಿವಣ್ಣ ಬಾಯಲ್ಲೇ ಈ ಮಾತು ಬಂದಿದ್ದು ಕೇಳಿ ಇಬ್ಬರೂ ಫುಲ್ ಖುಷ್ ಆಗಿದ್ದಾರೆ.

ಶಿವಣ್ಣ ನಿರ್ಣಯ ಸ್ವಾಗತಾರ್ಹ.!

ಶಿವಣ್ಣ ತೆಗೆದುಕೊಂಡಿರುವ ಈ ನಿರ್ಣಯ, ಡಾ.ರಾಜ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳಿಗೆ ಖುಷಿ ನೀಡುವುದರಲ್ಲಿ ಸಂದೇಹವೇ ಇಲ್ಲ.

ಸ್ನೇಹಲೋಕದಲ್ಲಿ ಭಾಗಿ.!

ವಿಷ್ಣುವರ್ಧನ್ ಕುಟುಂಬ ನಡೆಸುವ 'ಸ್ನೇಹಲೋಕ' ಕ್ರಿಕೆಟ್ ಟೂರ್ನಿಯಲ್ಲೂ ಶಿವರಾಜ್ ಕುಮಾರ್ ಈ ಹಿಂದೆ ಭಾಗಿಯಾಗಿದ್ದರು.

ತಂಡಗಳು ಇಂತಿವೆ

'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್'ನಲ್ಲಿ ಎಂಟು ತಂಡಗಳಿವೆ:

'ರಾಜ್ ಕುಮಾರ್' ತಂಡಕ್ಕೆ ಪುನೀತ್ ರಾಜ್ ಕುಮಾರ್ ನಾಯಕ

'ವಿಷ್ಣುವರ್ಧನ್' ತಂಡಕ್ಕೆ ಶಿವರಾಜ್ ಕುಮಾರ್ ಕ್ಯಾಪ್ಟನ್

'ಸುಧೀರ್' ತಂಡವನ್ನು ಶ್ರೀನಗರ ಕಿಟ್ಟಿ ಮುನ್ನಡೆಸಲಿದ್ದಾರೆ

'ಪ್ರಭಾಕರ್' ತಂಡಕ್ಕೆ ದುನಿಯಾ ವಿಜಯ್

'ತೂಗುದೀಪ ಶ್ರೀನಿವಾಸ್' ತಂಡಕ್ಕೆ ದರ್ಶನ್

'ಶಕ್ತಿ ಪ್ರಸಾದ್' ತಂಡಕ್ಕೆ ಅರ್ಜುನ್ ಸರ್ಜಾ

'ವಜ್ರಮುನಿ' ತಂಡಕ್ಕೆ ರಮೇಶ್

'ಶಂಕರ್ ನಾಗ್' ತಂಡಕ್ಕೆ ಉಪೇಂದ್ರ ಸಾರಥ್ಯ ವಹಿಸಿಕೊಂಡಿದ್ದಾರೆ.

ಟೂರ್ನಿ ಶುರು ಯಾವಾಗ?

ಜೂನ್ ಅಥವಾ ಜುಲೈ ತಿಂಗಳಿನಲ್ಲಿ 'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್'ಗೆ ಚಾಲನೆ ಸಿಗಲಿದೆ.

ಆಟ ನಡೆಯುವುದು ಎಲ್ಲಿ?

'ಕರ್ನಾಟಕ ಸೂಪರ್ ಸ್ಟಾರ್ ಕ್ರಿಕೆಟ್ ಲೀಗ್' ಟೂರ್ನಿಯ ಆರಂಭದ ಆಟಗಳು ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ.

English summary
Karnataka Film Directors Association is all set to launch Karnataka Superstar Cricket League, and Kannada Actor Shiva Rajkumar has decided to lead Vishnuvardhan team. Read the article for more details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada