For Quick Alerts
  ALLOW NOTIFICATIONS  
  For Daily Alerts

  ಚಿರು ಸರ್ಜಾಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್

  |
  ಸಿಂಗನ ಬೆಂಬಲಕ್ಕೆ ನಿಂತ ಹ್ಯಾಟ್ರಿಕ್ ಹೀರೋ | FILMIBEAT KANNADA

  ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಿಸುತ್ತಿದೆ. ಒಂದೊಂದೆ ಹಾಡುಗಳ ಮೂಲಕ ಅಬ್ಬರ ಮಾಡುತ್ತಿರುವ ಸಿಂಗ ಚಿತ್ರಕ್ಕೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪವರ್ ಹೆಚ್ಚಿಸಿದ್ದಾರೆ.

  ಹೌದು, ಸಿಂಗ ಚಿತ್ರದ 'ಪುಟ್ಟ ಪುಟ್ಟ ಆಸೆ....' ಹಾಡನ್ನ ಸೆಂಚುರಿ ಸ್ಟಾರ್ ಬಿಡುಗಡೆ ಮಾಡುತ್ತಿದ್ದಾರೆ. ಏಪ್ರಿಲ್ 25 ರಂದು ಸಂಜೆ 5 ಗಂಟೆಗೆ ಚಿರು ಸರ್ಜಾ ಚಿತ್ರದ ಮತ್ತೊಂದು ಹಾಡು ನಿಮ್ಮ ಮುಂದೆ ಬರ್ತಿದೆ.

  ಈಗಾಗಲೇ ಸಿಂಗ ಚಿತ್ರದ ಶಾನೇ ಟಾಪ್ ಆಗವ್ಳೆ ಹಾಡು ದೊಡ್ಡ ಯಶಸ್ಸು ಕಂಡಿದೆ. ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡ್ತಿರುವ ಈ ಹಾಡಿಗೆ ಕನ್ನಡ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಟಿಕ್ ಟಾಕ್ ಆಪ್ ನಲ್ಲೂ ಈ ಹಾಡು ಸಿಕ್ಕಾಪಟ್ಟೆ ಕಮಾಲ್ ಮಾಡ್ತಿದೆ.

  ಪತಿಯ ಸಿನಿಮಾಗೆ ಧ್ವನಿಯಾದ ನಟಿ ಮೇಘನಾ ರಾಜ್

  ಧರ್ಮ ವಿಶ್ ಅವರ ಸಂಗೀತ ನಿರ್ದೇಶನದಲ್ಲಿ ಈ ಹಾಡುಗಳು ಮೂಡಿಬಂದಿದ್ದು, ಶಾನ್ ಟಾಪ್ ಆಗವ್ಳೆ ಹಾಡಿಗೆ ಚೇತನ್ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಇದೀಗ, ಪುಟ್ಟ ಪುಟ್ಟ ಆಸೆ ಎಂಬ ಇನ್ನೊಂದು ಹಾಡು ಬರ್ತಿದ್ದು, ಹಾಡಿನ ಮೇಲೂ ಭರವಸೆ ಮೂಡಿದೆ.

  'ಶಾನೆ ಟಾಪ್ ಆಗಾವ್ಳೆ' ಚಿರಂಜೀವಿ ಸರ್ಜಾ ಹುಡುಗಿ

  ವಿಜಯ್ ಕಿರಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಚಿರಂಜೀವಿ ಸರ್ಜಾಗೆ ಜೋಡಿಯಾಗಿ ಅಧಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹಾಡುಗಳ ಮೂಲಕ ಪ್ರೇಕ್ಷಕರನ್ನ ಸೆಳೆಯುತ್ತಿರುವ ಸಿಂಗ ಆದಷ್ಟೂ ಬೇಗ ತೆರೆಗೆ ಬರಲಿದೆ.

  English summary
  Kannada actor shiva rajkumar to release Putta Putta aase song from singa movie on april 25th evening 5pm. the movie starrer chiranjeevi sarja and adithi prabhudeva in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X