»   » ವಿಷ್ಣು-ರಜನಿಗೆ ಲೇವಡಿ ಮಾಡಿದ ವರ್ಮಾಗೆ ಟಾಂಗ್ ಕೊಟ್ಟ ಶಿವಣ್ಣ

ವಿಷ್ಣು-ರಜನಿಗೆ ಲೇವಡಿ ಮಾಡಿದ ವರ್ಮಾಗೆ ಟಾಂಗ್ ಕೊಟ್ಟ ಶಿವಣ್ಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕಾಂಬಿನೇಷನ್ ನಲ್ಲಿ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಬಂದಾಗ, ಮತ್ತೊಂದು ಸಿನಿಮಾದಲ್ಲಿ ಇವರಿಬ್ಬರು ಒಂದಾಗುತ್ತಾರೆ ಅಂತ ಎಲ್ಲರೂ ಮಾತನಾಡಿಕೊಂಡರು.

ಆದರೆ ಆ ಸಂಗತಿ ಕೊಂಚ ದಿನಗಳ ಕಾಲ ಚಾಲ್ತಿಯಲ್ಲಿದ್ದು, ತದನಂತರ ಅಲ್ಲಿಗೆ ನಿಂತು ಹೋಯಿತು. ಈ ಬಗ್ಗೆ ಖುದ್ದು ಶಿವಣ್ಣ ಅವರನ್ನು ಕೇಳಿದರೆ, 'ನಾವಿಬ್ಬರು ಒಟ್ಟಿಗೆ ಮತ್ತೆ ಯಾವಾಗ ಸಿನಿಮಾ ಮಾಡ್ತೀವೋ ಗೊತ್ತಿಲ್ಲ'.

'ಆದರೆ ರಾಮ್ ಗೋಪಾಲ್ ವರ್ಮಾ ಅವರು ಸುಖಾ-ಸುಮ್ಮನೆ ವಿವಾದ ಮಾಡುವುದನ್ನು ಮೊದಲು ನಿಲ್ಲಿಸಲಿ' ಎಂದು ಖಾರವಾಗಿ ನುಡಿದಿದ್ದಾರೆ.[ಕಿಚ್ಚನನ್ನು ಹೊಗಳುವ ಭರಾಟೆಯಲ್ಲಿ ಲೆಜೆಂಡ್ ನಟರನ್ನು ಗೇಲಿ ಮಾಡಿದ ವರ್ಮಾ]

"ನಾನು ಮತ್ತು ರಾಮ್ ಗೋಪಾಲ್ ವರ್ಮಾ ಒಟ್ಟಾಗಿ ಇನ್ನೊಂದು ಸಿನಿಮಾ ಮಾಡಬೇಕು ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿತ್ತು'.

'ಆದರೆ ಸಿನಿಮಾ ಯಾವಾಗ ಆಗುತ್ತೋ ಗೊತ್ತಿಲ್ಲ. ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಅವರು, ಬೇರೆಯವರಿಗೆ ಕಾಮೆಂಟ್ ಮಾಡುತ್ತಾ, ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವುದರಲ್ಲಿ ಬಿಜಿ ಇದ್ದಾರೆ" ಎಂದು ಶಿವಣ್ಣ ಅವರು ಕೊಂಚ ಕೋಪ ಮಿಶ್ರಿತ ಧ್ವನಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿವಣ್ಣ ಯಾಕೆ ಹೀಗಂದ್ರು, ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.....

ಲೆಜೆಂಡ್ ನಟರಿಗೆ ಹಾಗಂದಿದ್ದು ಸರಿಯಲ್ಲ

"ಚಿತ್ರರಂಗದ ಲೆಜೆಂಡ್ ನಟರಾದ ವಿಷ್ಣುವರ್ಧನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಬಾಯಿಗೆ ಬಂದಂತೆ ವರ್ಮಾ ಅವರು ಮಾಡಿದ ಕಾಮೆಂಟ್ ನಿಜಕ್ಕೂ ಸರಿಯಲ್ಲ. ಅವರು ಹಾಗೆಲ್ಲಾ ಹೇಳಬಾರದಿತ್ತು, ಅದು ತಪ್ಪು" ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ವರ್ಮಾ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.[ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ]

ಹಗುರವಾಗಿ ಮಾತನಾಡಬಾರದು

"ಯಾವುದೇ ದೊಡ್ಡ ವ್ಯಕ್ತಿಯ ಬಗ್ಗೆ ಹಾಗೆಲ್ಲಾ ಹಗುರವಾಗಿ ಮಾತನಾಡಬಾರದು. ಅವರು ಆ ಸ್ಥಾನಕ್ಕೆ ಬರಲು ಎಷ್ಟು ಕಷ್ಟಪಟ್ಟಿರುತ್ತಾರೆ ಅನ್ನೋದು ಅವರಿಗಷ್ಟೇ ಗೊತ್ತಿರುತ್ತೆ. ಅಂತಹ ಮಹಾನ್ ನಟರ ಬಗ್ಗೆ ಮನಸ್ಸಿಗೆ ತೋಚಿದಂತೆ ಮಾತನಾಡೋದು, ಇನ್ನೊಬ್ಬರ ಜೊತೆ ಹೋಲಿಕೆ ಮಾಡೋದು ಸರಿಯಲ್ಲ" ಎಂದು ಶಿವಣ್ಣ ಅವರು ಪ್ರಣಮ್ ದೇವರಾಜ್ ಅವರ ಚೊಚ್ಚಲ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡುತ್ತಾ, ಆರ್.ಜಿ.ವಿಗೆ ಟಾಂಗ್ ಕೊಟ್ಟಿದ್ದಾರೆ.[ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]

ಕಷ್ಟಪಟ್ಟು ಮೇಲೆ ಬಂದವರು

"ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತುಂಬಾ ಕಷ್ಟಪಟ್ಟು ಮೇಲೆ ಬಂದವರು. ಅಂತದ್ರಲ್ಲಿ ಇದೀಗ ಪಾಪ್ಯುಲರ್ ಆದ ತಕ್ಷಣ ಹೀಗೆಲ್ಲಾ ಸಿಕ್ಕಾಪಟ್ಟೆ ವಿವಾದ ಮಾಡಿ ಸುದ್ದಿ ಮಾಡೋದು ಸರಿಯಾದ ಮಾರ್ಗವಲ್ಲ" ಎಂದು ಶಿವಣ್ಣ ಅವರು ಕೊಂಚ ಬೇಸರದಿಂದ ನುಡಿದಿದ್ದಾರೆ.

ಬೇಸರಗೊಂಡ ಶಿವಣ್ಣ

ಒಟ್ನಲ್ಲಿ ವರ್ಮಾ ಅವರ ಇಂತಹ ಹೇಳಿಕೆಗಳಿಂದ ಶಿವಣ್ಣ ಅವರು ಬಹಳ ಬೇಸರಗೊಂಡಿದ್ದು, 'ಮೊದಲು ಅವರು ಕಾಂಟ್ರವರ್ಸಿ ಮಾಡುವುದನ್ನು ನಿಲ್ಲಿಸಲಿ ಆಮೇಲೆ ನಾವಿಬ್ಬರೂ ಮತ್ತೊಮ್ಮೆ ಒಟ್ಟಿಗೆ ಸಿನಿಮಾ ಮಾಡ್ತೀವಿ' ಎಂದು ಶಿವರಾಜ್ ಕುಮಾರ್ ಅವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ.

ನಟನೆಯಲ್ಲಿ ವಿಷ್ಣು ಎಳಸು ಎಂದಿದ್ದ ವರ್ಮಾ

ಸುದೀಪ್ ಅವರ 'ಕೋಟಿಗೊಬ್ಬ ಸಿನಿಮಾ ನೋಡಿ ವರ್ಮಾ ಅವರು, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರಿಗೆ ನಟನೆಯಲ್ಲಿ ಎಳಸು ಎಂದಿದ್ದಲ್ಲದೆ, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಸುದೀಪ್ ಅವರನ್ನು ಹೋಲಿಸಿ ವರ್ಮಾ ಅವರು ಟ್ವೀಟ್ ಮಾಡಿ ರಾದ್ಧಾಂತ ಮಾಡಿದ್ದರು.

English summary
Kannada Actor Shivarajakumar says he his very much unhappy about Director Ram Gopal Verma's remarks on Dr Vishnuvardhan and Tamil Actor Rajinikanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada