For Quick Alerts
  ALLOW NOTIFICATIONS  
  For Daily Alerts

  ವೇದ ಸಕ್ಸಸ್: ಈ ಚಿತ್ರಮಂದಿರಗಳಿಗೆ ಈ ದಿನದಂದು ಭೇಟಿ ನೀಡಲಿದ್ದಾರೆ ಶಿವಣ್ಣ

  |

  ವೇದ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸದೇ ಬಿಡುಗಡೆಯಾದ ಬಳಿಕ ಪ್ರೇಕ್ಷಕರನ್ನು ಕಾಡುತ್ತಿರುವ ಚಿತ್ರ. ಚಿತ್ರ ವೀಕ್ಷಿಸಿದವರು ಶಿವ ರಾಜ್‌ಕುಮಾರ್ ರೀತಿಯ ಕಲಾವಿದನನ್ನು ಇಟ್ಟುಕೊಂಡು ಒಂದೊಳ್ಳೆ ಚಿತ್ರವನ್ನು ಹಲವು ದಿನಗಳ ಬಳಿಕ ಮಾಡಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 125ನೇ ಚಿತ್ರ ಎಂಬ ಮೈಲಿಗಲ್ಲಿಗೆ ತಕ್ಕಂತೆ ಎ ಹರ್ಷ ಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

  ಒಂದೊಳ್ಳೆ ಸಂದೇಶವಿರುವ ವೇದ ಚಿತ್ರವನ್ನು ಹೆಚ್ಚಾಗಿ ಫ್ಯಾಮಿಲಿ ಹಾಗೂ ಮಹಿಳಾ ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಚಿತ್ರಮಂದಿರಗಳತ್ತ ಹೆಜ್ಜೆ ಹಾಕಿದ್ದಾರೆ. ಹೀಗೆ ನಿರೀಕ್ಷೆಗೂ ಮೀರಿದ ಗೆಲುವನ್ನು ಕಂಡಿರುವ ವೇದ ಚಿತ್ರತಂಡದ ಸಕ್ಸಸ್ ಖುಷಿಯನ್ನು ಅಭಿಮಾನಿ ದೇವರುಗಳ ಜತೆ ಹಂಚಿಕೊಳ್ಳಲು ನಟ ಶಿವ ರಾಜ್‌ಕುಮಾರ್ ರಾಜ್ಯದ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.

  ಭಾನುವಾರ ( ಡಿಸೆಂಬರ್ 25 ) ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿ, ಪ್ರಸನ್ನ, ವೀರೇಶ್ ಹಾಗೂ ಒರಾಯನ್ ಪಿವಿಆರ್‌ಗೆ ಭೇಟಿ ನೀಡಿದ್ದ ಶಿವ ರಾಜ್‌ಕುಮಾರ್ ಇಂದು ( ಡಿಸೆಂಬರ್ 26 ) ಮೈಸೂರಿಗೆ ಭೇಟಿ ನೀಡಿದ್ದಾರೆ. ಇನ್ನು ಡಿಸೆಂಬರ್ 27ರಂದು ಚಾಮರಾಜನಗರ, ಟಿ ನರಸಿಪುರ, ಗುಂಡ್ಲುಪೇಟೆ ಹಾಗೂ ಹುಣಸೂರು ನಗರಗಳ ಚಿತ್ರಮಂದಿರಗಳಿಗೆ ಶಿವ ರಾಜ್‌ಕುಮಾರ್ ಭೇಟಿ ನೀಡಲಿದ್ದಾರೆ.

  ಇನ್ನುಳಿದಂತೆ ಡಿಸೆಂಬರ್ 28ರ ಬುಧವಾರದಂದು ಕೊಳ್ಳೇಗಾಲ, ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ರಾಮನಗರದ ಚಿತ್ರಮಂದಿರಗಳಿಗೆ ಶಿವ ರಾಜ್‌ಕುಮಾರ್ ಆಗಮಿಸಲಿದ್ದಾರೆ. ಸದ್ಯಕ್ಕೆ ಇಷ್ಟು ಮಾಹಿತಿಯನ್ನು ಮಾತ್ರ ವೇದ ಚಿತ್ರದ ನಿರ್ಮಾಣ ಸಂಸ್ಥೆ ಗೀತಾ ಪಿಕ್ಚರ್ಸ್ ಹಂಚಿಕೊಂಡಿದ್ದು, ಉತ್ತರ ಕರ್ನಾಟಕ ಭಾಗದ ಚಿತ್ರಮಂದಿರಗಳ ಮಾಹಿತಿಯನ್ನು ಶೀಘ್ರದಲ್ಲಿಯೇ ಹಂಚಿಕೊಳ್ಳಲಿದ್ದಾರೆ.

  English summary
  Shiva Rajkumar visiting MMCH theatres as Vedha movie getting success talk. Read on
  Monday, December 26, 2022, 19:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X