For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ 35ನೇ ವರ್ಷದ ಸಂಭ್ರಮ: ಫೆಬ್ರವರಿ 21ಕ್ಕೆ 'ಎಸ್‌ಪಿಎಲ್' ಕ್ರಿಕೆಟ್ ಹಬ್ಬ

  |

  ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಕ್ರಿಕೆಟ್ ಹಬ್ಬ ಶುರುವಾಗುತ್ತಿದೆ. ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ ನಡೆದಿತ್ತು. ಈಗ ಶಿವರಾಜ್ ಕುಮಾರ್ ಪ್ರೀಮಿಯರ್ ಲೀಗ್ ಆರಂಭವಾಗುತ್ತಿದೆ.

  ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 35 ವರ್ಷ ಪೂರೈಸಿದ ಹಿನ್ನೆಲೆ ಶಿವಣ್ಣ ಅಭಿಮಾನಿಗಳೆಲ್ಲ ಸೇರಿ ಎಸ್‌ಪಿಎಲ್ ಹೆಸರಿನಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಿದ್ದಾರೆ.

  'ರೈತರಿಗೆ ನಮ್ಮ ಬೆಂಬಲ ಸದಾ ಇರುತ್ತೆ': ಹೋರಾಟಕ್ಕೆ ಶಿವರಾಜ್ ಕುಮಾರ್ ಬೆಂಬಲ

  ಫೆಬ್ರವರಿ 20 ಹಾಗೂ 21 ರಂದು ಎರಡು ದಿನಗಳ ಕಾಲ ಬೆಂಗಳೂರಿನ ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಎಸ್‌ಪಿಎಲ್ ಟೂರ್ನಿ ನಡೆಯಲಿದ್ದು, ಖುದ್ದು ಶಿವರಾಜ್ ಕುಮಾರ್ ಅತಿಥಿಯಾಗಿ ಆಗಮಿಸಲಿದ್ದಾರೆ.

  ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದೆ. ಶಿವಣ್ಣನ ಅಪ್ಪಟ ಅಭಿಮಾನಿಗಳು ಸೇರಿ ಈ ಟೂರ್ನಿ ಆಯೋಜಿಸಿದ್ದು, ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

  ಎಸ್‌ಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಹನ್ನೆರಡು ತಂಡಗಳು ಇಂತಿವೆ....

  ರಾಜ್ ಕುಮಾರ್‌ 'ಡಾಕ್ಟರೇಟ್' ಗೌರವಕ್ಕೆ 45 ವರ್ಷ: ಹೇಗಿತ್ತು ಅಂದಿನ ಸನ್ನಿವೇಶ?

  ಎಸ್‌ಆರ್‌ಕೆ ಅಭಿಮಾನಿ

  ಆರ್ಯನ್ ಅಟ್ಯಾಕರ್ಸ್

  ಅಸುರ ಫೈಟರ್ಸ್

  ಭಜರಂಗಿ ಹಂಟರ್ಸ್

  ಶಿವಸೈನ್ಯ ಸ್ಪಾರ್ಟನ್ಸ್

  ಜೋಗಿ ಚಾಲೆಂಜರ್ಸ್

  ಓಂ ಬ್ರಿಗೇಡಿಯರ್ಸ್

  ಗಾಜನೂರು ಗ್ಲಾಡಿಯೇಟರ್ಸ್

  ಟಗರು ಟೈಟನ್ಸ್

  ರುಸ್ತಮ್ ರೈಮ್ಸ್

  ವಜ್ರಕಾಯ ವಾರಿಯರ್ಸ್

  ಸಂತ ಸ್ಟ್ರೈಕರ್ಸ್

  ಇದಕ್ಕೂ ಮುಂಚೆ ಭಾರತ ತಂಡದ ಮಹಿಳಾ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರು ಎಸ್.ಪಿ.ಎಲ್ (ಶಿವಣ್ಣ ಪ್ರೀಮಿಯರ್ ಲೀಗ್) ಲೋಗೋ ಅನಾವರಣ ಮಾಡಿದ್ದರು.

  English summary
  Hatric hero Shiva Rajkumar completas 35 year in Film industry: Fans association organized SPL cricket Tournament on February 21st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X