For Quick Alerts
  ALLOW NOTIFICATIONS  
  For Daily Alerts

  'ವಿಲನ್' ಜೊತೆ ಶಿವಣ್ಣನ ಲಂಡನ್ ಪ್ರಯಾಣ ಯಾವಾಗ?

  By Bharath Kumar
  |

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಹ್ಯಾಟ್ರಿಕ್ ಹೀರೋ ಶಿವಣ್ಣ, ಇಷ್ಟೊತ್ತಿಗಾಲೇ 'ದಿ ವಿಲನ್' ಚಿತ್ರದ ಶೂಟಿಂಗ್ ಗಾಗಿ ಲಂಡನ್ ಗೆ ಹೋಗಬೇಕಿತ್ತು. ಆದ್ರೆ, ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದ ಹಿನ್ನಲೆ 'ದಿ ವಿಲನ್' ಶೂಟಿಂಗ್ ನಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ನಂತರ ಕಿಚ್ಚ ಅಂಡ್ ಟೀಮ್ ಲಂಡನ್ ಬದಲು, ಬ್ಯಾಂಕಾಕ್ ನಲ್ಲಿ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿ ಕರ್ನಾಟಕಕ್ಕೆ ವಾಪಸ್ ಆಗಿದೆ.

  ಈಗ ಶಿವರಾಜ್ ಕುಮಾರ್ ಅವರು 'ದಿ ವಿಲನ್' ಚಿತ್ರದಲ್ಲಿ ಪಾಲ್ಗೊಂಡಿದ್ದು ಈಗ ಲಂಡನ್ ಗೆ ಹಾರಲು ಪ್ರೇಮ್ ಮತ್ತು ತಂಡ ಸಿದ್ದವಾಗಿದೆ. ಲಂಡನ್ ನಲ್ಲಿ 'ದಿ ವಿಲನ್' ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದ್ದು, ಸುದೀಪ್, ಶಿವರಾಜ್ ಕುಮಾರ್ ಮತ್ತು ಆಮಿ ಜಾಕ್ಸನ್ ಭಾಗಿಯಾಗಲಿದ್ದಾರೆ.

  ಈಗಾಗಲೇ 'ದಿ ವಿಲನ್' ಶೂಟಿಂಗ್ ಗೆ ಹಾಜರಾಗಿರುವ ಶಿವಣ್ಣ, ಬೆಳಗಾವಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರಂತೆ. ಜುಲೈ 12 ರಂದು ಸೆಂಚುರಿಸ್ಟಾರ್ ಅವರು ಹುಟ್ಟುಹಬ್ಬವಿದೆ. ಹೀಗಾಗಿ, ಶಿವರಾಜ್ ಕುಮಾರ್ ಬರ್ತ್ ಡೇ ಮುಗಿಸಿ ನೇರವಾಗಿ ಲಂಡನ್ ಗೆ ಹೋಗಲು 'ದಿ ವಿಲನ್' ತಂಡ ಯೋಜನೆ ಹಾಕಿಕೊಂಡಿದೆ.

  ಅಂದ್ಹಾಗೆ, ಜೋಗಿ ಪ್ರೇಮ್ 'ದಿ ವಿಲನ್' ಚಿತ್ರವನ್ನ ನಿರ್ದೇಶನ ಮಾಡಿದ್ದು, ಆಮಿ ಜಾಕ್ಸನ್, ಶ್ರುತಿ ಹರಿಹರನ್, ತೆಲುಗು ನಟ ಶ್ರೀಕಾಂತ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

  English summary
  Shiva Rajkumar will start shooting in London after celebrating his birthday on July 12. The movie directed by Prem has Kichcha Sudeep, Amy Jackson and Sruthi Hariharan in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X