»   » 'ಟಗರು' ಜೊತೆಗೆ ನಾಳೆ ಫೀಲ್ಡ್ ಗೆ ಇಳಿಯಲಿದೆ ಮೂರು ಕನ್ನಡ ಚಿತ್ರಗಳು

'ಟಗರು' ಜೊತೆಗೆ ನಾಳೆ ಫೀಲ್ಡ್ ಗೆ ಇಳಿಯಲಿದೆ ಮೂರು ಕನ್ನಡ ಚಿತ್ರಗಳು

Posted By:
Subscribe to Filmibeat Kannada

ನಾಳೆ 'ಟಗರು' ಡೇ. ಇಷ್ಟು ದಿನದಿಂದ ಕಾಯುತ್ತಿರುವ ಶಿವಣ್ಣ ಅಭಿಮಾನಿಗಳ ಆಸೆ ನಿಜ ಆಗುವ ದಿನ. ಶಿವಣ್ಣನ 'ಟಗರು' ಸಿನಿಮಾದ ಹವಾ ಸಿಕ್ಕಾಪಟ್ಟೆ ಜೋರಾಗಿದೆ. ನಾಳೆ ಬೆಳ್ಳಗೆ 6 ಗಂಟೆಗೆ ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನ ಶುರು ಆಗಲಿದೆ.

ನಾಳೆ 'ಟಗರು' ಸಿನಿಮಾ ಬಿಡುಗಡೆ ಆಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ 'ಟಗರು' ಜೊತೆಗೆ ಯಾವ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವ ನಿರೀಕ್ಷೆ ಎಲ್ಲರಿಗೂ ಇರುತ್ತದೆ. ಅಂದಹಾಗೆ, ನಾಳೆ 'ಟಗರು' ಜೊತೆಗೆ ಕನ್ನಡದ ಮೂರು ಇತರ ಸಿನಿಮಾಗಳು ಬಿಡುಗಡೆಯಾಗುತ್ತಿದೆ.

Tagaru first day first show celebration at Urvasi | Filmibeat Kannada

'ರಂಗಿಬಿರಂಗಿ', 'ರಂಕಲ್ ರಾಟೆ', ಮತ್ತು 'ಹೆಂಡತಿ ಊರಿಗೆ ಹೋದಾಗ' ಎಂಬ ಸಿನಿಮಾಗಳು ಸಹ ನಾಳೆ ತೆರೆಗೆ ಬರಲಿದೆ. ನಾಳೆ ಎಲ್ಲರೂ 'ಟಗರು' ಫಿವರ್ ನಲ್ಲಿ ಇದ್ದು, ಈ ಚಿತ್ರಗಳ ಕತೆ ಏನು ಎಂಬುದು ಒಂದು ಪ್ರಶ್ನೆ ಆಗಿದೆ. ಆದರು ಆ ಸಿನಿಮಾಗಳು ಜನರಿಗೆ ಇಷ್ಟ ಓಡುತ್ತದೆ.

Shiva Rajkumar's Tagaru movie will be releasing tomorrow

ಅಂದಹಾಗೆ, 'ಟಗರು' ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಮಾನ್ವಿತಾ ಹರೀಶ್, ಭಾವನ ಚಿತ್ರದ ನಾಯಕಿಯರಾಗಿದ್ದಾರೆ. ವಸಿಷ್ಟ ಮತ್ತು ಧನಂಜಯ್ ಪಾತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

English summary
Kannada actor Shiva Rajkumar's 'Tagaru' movie will be releasing tomorrow. The movie is directed by Duniya Suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada