»   » ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ವಿರುದ್ಧ ಹರಿಹಾಯ್ದ ನಾಗೇಂದ್ರ ಶಾನ್

ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ವಿರುದ್ಧ ಹರಿಹಾಯ್ದ ನಾಗೇಂದ್ರ ಶಾನ್

Posted By:
Subscribe to Filmibeat Kannada

ಆಗಸ್ಟ್ 25 ರಿಂದ ಶಿವಮೊಗ್ಗದಲ್ಲಿ ನಡೆಯಲಿರುವ ಭಾರತೀಯ ಪನೋರಮಾ ಚಲನಚಿತ್ರೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ 'ನಾನು ಅವನಲ್ಲ...ಅವಳು' ಚಿತ್ರದ ಪ್ರದರ್ಶನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅವಕಾಶ ಮಾಡಿಕೊಟ್ಟಿಲ್ಲ ಅಂತ ನಿರ್ದೇಶಕ ಬಿ.ಎಸ್.ಲಿಂಗದೇವರು ಅಸಮಾಧಾನ ಹೊರಹಾಕಿದ್ದರು.

ಬಿ.ಎಸ್.ಲಿಂಗದೇವರು ಮಾಡಿದ ಆರೋಪಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸ್ಪಷ್ಟೀಕರಣ ನೀಡಿದ್ದರು. ಅದನ್ನ ನೋಡಿ, ನಟ ನಾಗೇಂದ್ರ ಶಾನ್ ಗರಂ ಆಗಿದ್ದಾರೆ. [ಲಿಂಗದೇವರು ಕೊಟ್ಟ ಏಟಿಗೆ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ತಿರುಗೇಟು]


shivamogga-panorama-controversy-nagendra-shaan-facebook-reaction

ಬಿ.ಎಸ್.ಲಿಂಗದೇವರು ಪರ ಬ್ಯಾಟಿಂಗ್ ಮಾಡಿರುವ ನಾಗೇಂದ್ರ ಶಾನ್, ತಮ್ಮ ಫೇಸ್ ಬುಕ್ ಮೂಲಕ ಅಕಾಡೆಮಿ ಅಧ್ಯಕ್ಷರ ನಡೆಯನ್ನ ಖಂಡಿಸಿದ್ದಾರೆ.ಜೊತೆಗೆ, ''ಹಿಂದೆಲ್ಲಾ ಅಕಾಡೆಮಿ ಮಾಡುವ ಕೆಲಸಗಳಿಗೆ ಬೆಟ್ಟು ಮಾಡಿ ತೋರಿಸುತ್ತಿದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಈಗ ಮಾಡುತ್ತಿರುವುದೇನು?'' ಎಂಬ ಖಡಕ್ ಪ್ರಶ್ನೆ ಕೂಡ ಹಾಕಿದ್ದಾರೆ ನಾಗೇಂದ್ರ ಶಾನ್. [ಪನೋರಮಾ ವಿವಾದ : ಸಿಡಿದೆದ್ದ ನಿರ್ದೇಶಕ ಬಿ.ಎಸ್.ಲಿಂಗದೇವರು!]


shivamogga-panorama-controversy-nagendra-shaan-facebook-reaction

ಇದಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಏನಂತಾರೋ, ನೋಡೋಣ. [ಚಲನಚಿತ್ರ ಅಕಾಡೆಮಿ ನಡೆಗೆ 'ಛೀ! ಅಸಹ್ಯ' ಎಂದ ಬಿ.ಎಸ್.ಲಿಂಗದೇವರು]


English summary
Kannada Actor Nagendra Shaan has taken his Facebook account to support Director B.S.Lingadevaru and criticize Karnataka Chalanachitra Academy President S.V.Rajendra Singh Babu for not selecting Kannada Movie 'Naanu Avanalla..Avalu' for Shivamogga Panorama.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada