»   » ಶಿವು ಅಡ್ಡದಲ್ಲಿ ಶಿವಣ್ಣ 'ಭಜರಂಗಿ' ಸೆಂಚುರಿ ಸಂಭ್ರಮ

ಶಿವು ಅಡ್ಡದಲ್ಲಿ ಶಿವಣ್ಣ 'ಭಜರಂಗಿ' ಸೆಂಚುರಿ ಸಂಭ್ರಮ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 105ನೇ ‌ಚಿತ್ರ 'ಭಜರಂಗಿ' ಸೆಂಚುರಿ ಸಂಭ್ರಮ ಇತ್ತೀಚೆಗೆ ಸದ್ದಿಲ್ಲದಂತೆ ನಡೆದಿದೆ. ಶಿವರಾಜ್ ಕುಮಾರ್ ಅವರ ಅಭಿಮಾನಿ ಬಳಗ 'ಶಿವು ಅಡ್ಡ' ಭಜರಂಗಿ ಚಿತ್ರದ ಶತದಿನೋತ್ಸವ ಸಂಭ್ರಮ ಆಚರಿಸಿದೆ.

ಸಾಮಾನ್ಯವಾಗಿ ಚಿತ್ರವೊಂದರ ಸೆಂಚುರಿ, ಆಫ್ ಸೆಂಚುರಿ ಕಾರ್ಯಕ್ರಮಗಳನ್ನು ಚಿತ್ರತಂಡವೇ ಅದ್ದೂರಿಯಾಗಿ ಮಾಡುತ್ತದೆ. ಆದರೆ ಅಭಿಮಾನಿಗಳು ಆ ರೀತಿಯ ಸಂಭ್ರಮ ಮಾಡುವುದು ಬಲು ವಿರಳ. ಶಿವು ಅಡ್ಡ ಅಭಿಮಾನಿಗಳ ಬಳಗ ಭಜರಂಗಿ ಚಿತ್ರತಂಡದ ಎಲ್ಲರನ್ನೂ ಆಹ್ವಾನಿಸಿ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಸಂಭ್ರಮಿಸಿರುವುದು ವಿಶೇಷ. [ಭಜರಂಗಿ ಚಿತ್ರವಿಮರ್ಶೆ]


ಈ ಶತದಿನೋತ್ಸವ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್, ನಟ ನಿರ್ದೇಶಕ ವಿಜಯ್ ರಾಘವೇಂದ್ರ, ಒರಟ ಪ್ರಶಾಂತ್, ವಿನಯ್ ರಾಘವೇಂದ್ರ ರಾಜ್ ಕುಮಾರ್, ಚಿತ್ರದ ನಿರ್ದೇಶಕ ಹರ್ಷ, ನಿರ್ಮಾಪಕ ನಟರಾಜ್ ಗೌಡ, ಹಿರಿಯ ನತಿ ಹರಿಣಿ ಪಾಲ್ಗೊಂಡಿದ್ದರು.

ತಮ್ಮ 52ರ ಹರೆಯದಲ್ಲೂ ಶಿವಣ್ಣನ ಹೊಸ ಹುರುಪು, ಉತ್ಸಾಹವನ್ನು 'ಭಜರಂಗಿ' ಚಿತ್ರದಲ್ಲಿ ಕಾಣಬಹುದು. ಎಲ್ಲೂ ಅವರ ಪಾತ್ರ ಪೇಲವವಾಗಿ ಕಾಣದಂತೆ ನಿರ್ದೇಶಕರು ತೆರೆಯ ಮೇಲೆ ತೋರಿಸಿದ್ದಾರೆ. ಒಟ್ಟಾರೆಯಾಗಿ ಶಿವಣ್ಣ ಅಭಿಮಾನಿಗಳಿಗೆ 'ಜೋಗಿ' ದಿನಗಳನ್ನು ನೆನಪಿಸುತ್ತದೆ ಭಜರಂಗಿ.

ಇನ್ನು ಈ ಚಿತ್ರದಲ್ಲಿ ಶಿವಣ್ಣ ಸಿಕ್ಸ್ ಪ್ಯಾಕ್ ತೋರಿಸಿ ಅಭಿಮಾನಿಗಳ ಶಿಳ್ಳೆ ಗಿಟ್ಟಿಸುತ್ತಾರೆ. ಒಂದು ಮಾಸ್ ಸಿನಿಮಾಗೆ ಏನು ಬೇಕೋ ಅಷ್ಟೂ ಅಂಶಗಳು ಚಿತ್ರದಲ್ಲಿದ್ದು ನೀಟಾಗಿ ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಎ.ಹರ್ಷ. 2014ರಲ್ಲಿ ಶತಕ ಪೂರೈಸಿದ ಮೊದಲ ಚಿತ್ರದ ಎಂಬ ಖ್ಯಾತಿಗೂ ಚಿತ್ರ ಪಾತ್ರವಾಗಿದೆ. (ಏಜೆನ್ಸೀಸ್)

English summary
Recently Shivu Adda, Shivrajkumar fan association, had organised a grand celebration at Hotel Atria to mark the 100 days of 'Bhajarangi' and the artistes and technicians who have worked for the film were felicitated.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada