»   » ಗವಿಪುರದ ಗಲ್ಲಿಯಲ್ಲಿ ಟಗರು ಶಿವನ ಸಂಚಾರ

ಗವಿಪುರದ ಗಲ್ಲಿಯಲ್ಲಿ ಟಗರು ಶಿವನ ಸಂಚಾರ

Posted By:
Subscribe to Filmibeat Kannada

ಟಗರು ಸಿನಿಮಾ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನ ಜನರು ಮನಸ್ಸು ಪೂರ್ತಿಯಾಗಿ ಮೆಚ್ಚಿಕೊಂಡಿದ್ದಾರೆ. ಶಿವಣ್ಣನ ಅಭಿನಯ ಡಾಲಿಯ ಆರ್ಭಟ ನಿರ್ದೇಶಕರ ಕೈಚಳಕ ಎಲ್ಲದಕ್ಕೂ ಪ್ರೇಕ್ಷಕ ಜೈಕಾರ ಹಾಕಿದ್ದು ಆಗಿದೆ. ಸಿನಿಮಾವನ್ನ ಪ್ರೀತಿಯಿಂದ ಬರ ಮಾಡಿಕೊಂಡ ಜನರಿಗೆ ನಿರ್ದೇಶಕ ಸೂರಿ ಪತ್ರದ ಮೂಲಕ ಧನ್ಯವಾದ ತಿಳಿಸಿದ್ದರು. ಈಗ ಶಿವಣ್ಣ ಟಗರು ಗೆಲುವಿನ ಸಂಭ್ರಮವನ್ನ ಗವಿಪುರದಲ್ಲಿ ಆಚರಣೆ ಮಾಡಿದ್ದಾರೆ.

ಟಗರು ಸಿನಿಮಾ ಮಹೂರ್ತ ನಡೆದಿದ್ದು ಬಂಡಿ ಮಾಕಳಮ್ಮ ದೇವಸ್ಥಾನದಲ್ಲಿ ಅಷ್ಟೇ ಅಲ್ಲದೆ ಚಿತ್ರದಲ್ಲೂ ಕೆಲ ಸೀನ್ ಗಳನ್ನ ಅಲ್ಲಿಯೇ ಚಿತ್ರೀಕರಿಸಲಾಗಿದೆ. ಸಿನಿಮಾ ಗೆದ್ದ ನಂತರ ಶಿವರಾಜ್ ಕುಮಾರ್ , ಪತ್ನಿ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕ ಕೆ ಪಿ ಶ್ರೀಕಾಂತ್ ಹಾಗೂ ಚಿತ್ರತಂಡ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

Shivaraj Kumar and Geetha Shivarajkumar had dosa at Vidyatrhibhavan hotel.

'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

ಅದಾದ ನಂತರ ಗಾಂಧಿಬಜಾರ್ ನಲ್ಲಿರುವ ವಿದ್ಯಾರ್ಥಿ ಭವನದಲ್ಲಿ ದೋಸೆ ರುಚಿ ನೋಡಿದ್ದಾರೆ ಶಿವರಾಜ್ ಕುಮಾರ್. ಡಾ ರಾಜ್ ಕುಮಾರ್ ಕೂಡ ವಿದ್ಯಾರ್ಥಿ ಭವನಕ್ಕೆ ಆಗಾಗ ಭೇಟಿ ಕೊಟ್ಟು ದೋಸೆಯ ರುಚಿಯನ್ನ ಸವಿಯುತ್ತಿದ್ದರಂತೆ.

Shivaraj Kumar and Geetha Shivarajkumar had dosa at Vidyatrhibhavan hotel.

ಒಟ್ಟಾರೆ ಟಗರು ಸಿನಿಮಾದ ಯಶಸ್ಸನ್ನ ಚಿತ್ರತಂಡ ಆಡಂಬರವಿಲ್ಲದೆ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡುವುದ ಜೊತೆಯಲ್ಲಿ ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತಿದೆ ಚಿತ್ರತಂಡ.

English summary
Kannada actor Shivaraj Kumar visited the 'Bandimakalamma' Devi Temple in Gavipura, Then he went to the 'Vidyarthi Bhavan' Hotel in Gandhinagar and had Masala Dosa meal, Tagaru movie is getting a good response everywhere.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada