For Quick Alerts
  ALLOW NOTIFICATIONS  
  For Daily Alerts

  ಚಿತ್ರ ಬಿಡುಗಡೆ ಮುಂಚೆಯೇ ಥಿಯೇಟರ್ ಮುಂದೆ ಶಿವಣ್ಣನ ಕಟೌಟ್

  By Pavithra
  |

  ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ಕೌತುಕವನ್ನ ಹುಟ್ಟುಹಾಕಿರುವ ಹ್ಯಾಟ್ರಿಕ್ ಹೀರೋ ಅಭಿನಯದ ಟಗರು ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ದಿನದಿಂದ ದಿನಕ್ಕೆ ಚಿತ್ರದ ಬಗ್ಗೆ ನಿರೀಕ್ಷೆಯ ಮಟ್ಟ ಹೆಚ್ಚಾಗುತ್ತಲೇ ಇದೆ.

  ಬಿಡುಗಡೆ ಆಗಿರುವ ಟೀಸರ್ ಮತ್ತು ಹಾಡುಗಳು ಈಗಾಗಲೇ ಹಿಟ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಟಗರು ಸಿನಿಮಾ ಬಿಡುಗಡೆಗೆ ಮುಂಚೆಯೇ ಟಗರು2 ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ.

  ಇವೆಲ್ಲವುದರ ಮಧ್ಯೆ ಸಿನಿಮಾ ಬಿಡುಗಡೆ ದಿನಾಂಕ ನಿಗಧಿಯಾಗುವ ಮುನ್ನವೇ ಚಿತ್ರಮಂದಿರಗಳ ಮುಂದೆ ಸಂಭ್ರಮಾಚರಣೆ ಶುರುವಾಗಿದೆ. ಹೇಗಿದೆ ಟಗರು ಸಿನಿಮಾ ಕ್ರೇಜ್? ಎಷ್ಟು ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆಗಳಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ.

  ಟಗರು ಚಿತ್ರಕ್ಕೆ ಹೆಚ್ಚಾಯ್ತು ನಿರೀಕ್ಷೆ

  ಟಗರು ಚಿತ್ರಕ್ಕೆ ಹೆಚ್ಚಾಯ್ತು ನಿರೀಕ್ಷೆ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬಿಡುಗಡೆ ಆಗಲಿರುವ ಟಗರು ಸಿನಿಮಾಗೆ ನಿರೀಕ್ಷೆಗಳು ಹೆಚ್ಚಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯ ಚಿತ್ರರಂಗದಲ್ಲೂ ಟಗರು ಸಿನಿಮಾಗೆ ಭಾರಿ ಬೇಡಿಕೆ ಬಂದಿದೆ.

  ಬಿಡುಗಡೆಗೂ ಮುನ್ನವೇ ಕಟೌಟ್

  ಬಿಡುಗಡೆಗೂ ಮುನ್ನವೇ ಕಟೌಟ್

  ಸಿನಿಮಾಗಳ ಬಿಡುಗಡೆಯ ದಿನಾಂಕ ನಿಗಧಿ ಆದ ನಂತರ ಚಿತ್ರಮಂದಿರಗಳ ಮುಂದೆ ಕಟೌಟ್ ಗಳು ನಿಲ್ಲುವುದು ಸಾಮಾನ್ಯ. ಆದರೆ ಟಗರು ಸಿನಿಮಾ ಇನ್ನೂ ಸೆನ್ಸಾರ್ ಹಂತದಲ್ಲಿರುವಾಗಲೇ ಥಿಯೇಟರ್ ಗಳ ಮುಂದೆ ಕಟೌಟ್ ನಿಲ್ಲಿಸಲು ಶುರು ಮಾಡಿದ್ದಾರೆ ಅಭಿಮಾನಿಗಳು.

  ಊರ್ವಶಿ ಚಿತ್ರಮಂದಿರದಲ್ಲಿ ಸಂಭ್ರಮ

  ಊರ್ವಶಿ ಚಿತ್ರಮಂದಿರದಲ್ಲಿ ಸಂಭ್ರಮ

  ಟಗರು ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿಲ್ಲ. ಆದರೆ ಅಭಿಮಾನಿಗಳು ಫೆಬ್ರವರಿ ಎರಡನೇ ವಾರದಲ್ಲಿ ಚಿತ್ರ ರಿಲೀಸ್ ಆಗುತ್ತದೆ ಎಂದು ಈಗಾಗಲೇ ಊರ್ವಶಿ ಚಿತ್ರಮಂದಿರ ಮುಂದೆ ಕಟೌಟ್ ಮತ್ತು ಪೋಸ್ಟರ್ ಗಳನ್ನ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ.

  ಅದ್ಧೂರಿ ಮೇಕಿಂಗ್ ಸಿನಿಮಾ ಟಗರು

  ಅದ್ಧೂರಿ ಮೇಕಿಂಗ್ ಸಿನಿಮಾ ಟಗರು

  ಟಗರು ಅದ್ದೂರಿ ಮೇಕಿಂಗ್ ಮತ್ತು ಬಹು ತಾರಾಗಣವಿರುವ ಚಿತ್ರ. ಶಿವರಾಜ್ ಕುಮಾರ್, ಭಾವನಾ, ಮಾನ್ವಿತಾ ಹರೀಶ್, ಧನಂಜಯ ಹಾಗೂ ವಶಿಷ್ಠ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೆ ಪಿ ಶ್ರೀಕಾಂತ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಕಡ್ಡಿಪುಡಿ ಸಿನಿಮಾ ನಂತರ ದುನಿಯಾ ಸೂರಿ ಮತ್ತೆ ಶಿವರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡಿದ್ದಾರೆ.

  English summary
  Kannada actor Shivaraj kumar cutout was Built up before Shivaraj kumar's film Tagaru was released. Shivaraj kumar Cutout Built Fans in front of Urvashi theater Banglore

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X