For Quick Alerts
  ALLOW NOTIFICATIONS  
  For Daily Alerts

  ನನ್ನ ಮುಂದಿನ ಸಿನಿಮಾಗೆ ನೀವು ಹಾಡಲು ಕಾಯುತ್ತಿದೀನಿ: ಎಸ್ ಪಿ ಬಿ ಕುರಿತು ಶಿವಣ್ಣ ಭಾವುಕ ಮಾತು

  |

  ಲೆಜೆಂಡರಿ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಎಸ್ ಪಿ ಬಿ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡು ಬಂದಿಲ್ಲ ಎಂದು ಪುತ್ರ ಎಸ್ ಪಿ ಚರಣ್ ಭಾವುಕರಾಗಿ ಕಣ್ಣೀರಾಕಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿ ಎಸ್ ಪಿ ಬಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಇನ್ನೂ ಕ್ರಿಟಿಕಲ್ ಆಗಿದೆ ಎಂದು ತಿಳಿದ್ದಾರೆ. ಎಸ್ ಪಿ ಬಿ ಆರೋಗ್ಯಕ್ಕಾಗಿ ಆಗಸ್ಟ್ 20 ಸಂಜೆ 6 ಗಂಟೆಗೆ ವಿಶ್ವದಾದ್ಯಂತ ಪ್ರಾರ್ಥನೆ ಸಲ್ಲಿಸಲಾಯಿತು. ಕೋಟ್ಯಾಂತರ ಅಭಿಮಾನಿಗಳು ಖ್ಯಾತ ಗಾಯಕ ಶೀಘ್ರದಲ್ಲಿಯೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಮುಂದೆ ಓದಿ..

  ಅಪ್ಪನ ಆರೋಗ್ಯದಲ್ಲಿ ಚೇತರಿಕೆಯಿಲ್ಲ: ಕಣ್ಣೀರಿಟ್ಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪುತ್ರಅಪ್ಪನ ಆರೋಗ್ಯದಲ್ಲಿ ಚೇತರಿಕೆಯಿಲ್ಲ: ಕಣ್ಣೀರಿಟ್ಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪುತ್ರ

  ಎಸ್ ಪಿ ಬಿ ಬಗ್ಗೆ ಶಿವರಾಜ್ ಕಮಾರ್ ಮಾತು

  ಎಸ್ ಪಿ ಬಿ ಬಗ್ಗೆ ಶಿವರಾಜ್ ಕಮಾರ್ ಮಾತು

  ಕನ್ನಡದ ನಟ ಶಿವರಾಜ್ ಕುಮಾರ್ ಸಹ ಎಸ್ ಪಿ ಬಿ ಬೇಗ ಗುಮುಖರಾಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಅಲ್ಲದೆ ಮುಂದಿನ ಸಿನಿಮಾಗೆ ಹಾಡುವುದನ್ನು ಕಾಯುತ್ತಿರುವುದಾಗಿ ಹೇಳಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಆನಂದ್ ನಿಂದ ಸಾಕಷ್ಟು ಸಿನಿಮಾಗಳಿಗೆ ಎಸ್ ಪಿ ಬಿ ಧ್ವನಿಯಾಗಿದ್ದಾರೆ.

  ಮುಂದಿನ ಚಿತ್ರಕ್ಕೆ ಹಾಡುವುದನ್ನು ಕಾಯುತ್ತಿದ್ದೀನಿ

  ಮುಂದಿನ ಚಿತ್ರಕ್ಕೆ ಹಾಡುವುದನ್ನು ಕಾಯುತ್ತಿದ್ದೀನಿ

  ಎಸ್ ಪಿ ಬಿ ಬಗ್ಗೆ ಶಿವಣ್ಣ "ನನ್ನ ಮೊದಲ ಸಿನಿಮಾದಿಂದ ಹಿಡಿದು ನನ್ನ ಇತರ ಹಲವಾರು ಚಿತ್ರಗಳಿಗೆ ನೀವು ಧ್ವನಿಯನ್ನು ನೀಡಿದ್ದೀರಿ. ಮೊದಲಿನಿಂದಲೂ ನಾನು ನಿಮ್ಮ ದೊಡ್ಡ ಅಭಿಮಾನಿ. ಬೇಗ ಚೇತರಿಸಿಕೊಳ್ಳಬೇಕೆಂದು ಬಯಸುತ್ತೇನೆ ಸರ್. ಎಲ್ಲರ ಚಿತ್ರಕ್ಕೂ ನೀವು ಶೀಘ್ರದಲ್ಲೇ ಹಾಡುತ್ತೀರಿ ಎಂದು ನನಗೆ ತಿಳಿದಿದೆ. ನನ್ನ ಮುಂದಿನ ಚಿತ್ರಕ್ಕಾಗಿ ನೀವು ಹಾಡಲು ಕಾಯುತ್ತಿದ್ದೀನಿ" ಎಂದು ಶಿವರಾಜ್ ಕುಮಾರ್ ಭಾವುಕ ಟ್ವೀಟ್ ಮಾಡಿದ್ದಾರೆ.

  ಎಸ್ ಪಿ ಬಾಲಸುಬ್ರಹ್ಮಣ್ಯಂ ಅರೋಗ್ಯ ಸ್ಥಿತಿ ಗಂಭೀರ: ಅಂತರಾಷ್ಟ್ರೀಯ ತಜ್ಞರಿಂದ ಚಿಕಿತ್ಸೆಎಸ್ ಪಿ ಬಾಲಸುಬ್ರಹ್ಮಣ್ಯಂ ಅರೋಗ್ಯ ಸ್ಥಿತಿ ಗಂಭೀರ: ಅಂತರಾಷ್ಟ್ರೀಯ ತಜ್ಞರಿಂದ ಚಿಕಿತ್ಸೆ

  ಅಂತರಾಷ್ಟ್ರೀಯ ತಜ್ಞರಿಂದ ಚಿಕಿತ್ಸೆ

  ಅಂತರಾಷ್ಟ್ರೀಯ ತಜ್ಞರಿಂದ ಚಿಕಿತ್ಸೆ

  ಎಸ್ ಪಿ ಬಿ ಚಿಕಿತ್ಸೆಗೆ ಅಂತರಾಷ್ಟ್ರೀಯ ವೈದ್ಯಕೀಯ ತಜ್ಞರ ಸಲಹೆ ಪಡೆದುಕೊಂಡಿರುವುದಾಗಿ ಎಂಜಿಎಂ ಆಸ್ಪತ್ರೆ ತಿಳಿಸಿದೆ. ಇನ್ನೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ರ ಚರಣ್ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಕಣ್ಣೀರಿಟ್ಟಿದ್ದಾರೆ. ಅಪ್ಪನ ಆರೋಗ್ಯ ಯಥಾಸ್ಥಿತಿಯಲ್ಲಿ ಮುಂದುವರೆದಿದೆ ಎಂದು ಹೇಳಿರುವ ಚರಣ್, "ಹೀಗೆಯೇ ಪ್ರಾರ್ಥಿಸುತ್ತಿರಿ, ಪ್ರಾರ್ಥನೆ ದೇವರಿಗೆ ತಲುಪಿಯೇ ತೀರುತ್ತದೆ. ದೇವರು ಕರುಣಾಳು ಅವನು ಅಪ್ಪನನ್ನು ನಮ್ಮೊಂದಿಗೆ ಇರುವಂತೆ ಮಾಡುತ್ತಾನೆ" ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

  'ಎಸ್‌ಪಿಬಿ ಬೇಗ ಹಾಡುವಂತಾಗಲಿ....' ಮಂಗಳಮುಖಿಯರು ಪ್ರಾರ್ಥನೆ'ಎಸ್‌ಪಿಬಿ ಬೇಗ ಹಾಡುವಂತಾಗಲಿ....' ಮಂಗಳಮುಖಿಯರು ಪ್ರಾರ್ಥನೆ

  ಆಗಸ್ಟ್ ಮೊದಲ ವಾರದಲ್ಲಿ ಆಸ್ಪತ್ರೆಗೆ ದಾಖಲು

  ಆಗಸ್ಟ್ ಮೊದಲ ವಾರದಲ್ಲಿ ಆಸ್ಪತ್ರೆಗೆ ದಾಖಲು

  ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನಲೆ ಎಸ್ ಪಿ ಬಿ ಆಗಸ್ಟ್ ಮೊದಲ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಪರಿಣಾಮ ಅವರನ್ನು ತೀವ್ರ ನಿಗಾಘಟಕಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಆರೋಗ್ಯ ಸ್ಥಿತಿ ಕಂಡು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

  English summary
  Shivaraj Kumar heartfelt message to SP Balasubrahmanyam. He says Waiting for you to sing for my next film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X