For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಇನ್ ಸಿಕ್ಸ್ ಪ್ಯಾಕ್: ಚಿತ್ರರಂಗ ಉಘೇ.. ಉಘೇ..

  By *ಚಂದ್ರಿಕಾ ಪಾರ್ಥಿಭನ್
  |

  ನೀವು ಈವರೆಗೆ ತೆರೆಯ ಮೇಲೆ ನೋಡಿದ ಶಿವರಾಜ್ ಕುಮಾರ್ ಬೇರೆಯೇ ಮುಂದಿನ ಬಾರಿ ನೋಡುವ ಶಿವಣ್ಣನ ಲುಕ್ಕೇ ಬೇರೆ. ಶಿವಣ್ಣನ ಈ ಹೊಸ ಅವತಾರ ನೋಡಿ ಸಿನಿ ಪ್ರೇಕ್ಷಕರು ಆಘಾತಕ್ಕೆ ಒಳಗಾಗುವುದಂತೂ ಪಕ್ಕಾ ಮಿಸ್ಸಿಲ್ಲ.

  ಯಾಕಪ್ಪಾ ಈಗ ಈ ವಿಷಯ ಅಂದರೆ ಈ ಐವತ್ತರ ವಯಸ್ಸಿನಲ್ಲೂ ಚಿರಯುವಕನ ಹಾಗೆ, ಇತರ ಕಲಾವಿದರೂ ನಾಚಿಸುವಂತ ಡಾನ್ಸ್ ಮಾಡಿ, ತಾನು ಯಾವ ಯುವ ನಾಯಕ ನಟರಿಗೂ ಕಡಿಮೆ ಇಲ್ಲ ಅನ್ನೋತರ ಮತ್ತೊಮ್ಮೆ ಮಗುದೊಮ್ಮೆ ಸಾಬೀತು ಮಾಡೋಕೆ ಹೊರಟಿದ್ದಾರೆ ಶಿವಣ್ಣ.

  ಇತ್ತೀಚೆಗಷ್ಟೇ ಶಿವಣ್ಣ ಸಿಕ್ಸ್ ಪ್ಯಾಕಿನಲ್ಲಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಹರ್ಷ ನಿರ್ದೇಶನದ ಭಜರಂಗಿ ಚಿತ್ರದಲ್ಲಿ ಶಿವಣ್ಣ ಆ ಸುದ್ದಿಯನ್ನು ನಿಜ ಮಾಡಿದ್ದಾರೆ.

  ಕಷ್ಟಪಟ್ಟು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿಕ್ಸ್ ಪ್ಯಾಕ್ ಮಾಡ್ತೀರೋ ದೃಶ್ಯಗಳು ಯೂಟ್ಯೂಬ್ ನಲ್ಲಿ ಲಭ್ಯವಾಗಿದೆ. ಶಿವಣ್ಣನ ಈ ಸಿಕ್ಸ್ ಪ್ಯಾಕ್ ಎಫರ್ಟಿಗೆ ಕನ್ನಡ ಚಿತ್ರೋದ್ಯಮ ಉಘೇ ಉಘೇ ಎಂದಿದೆ.

  ಶಿವಣ್ಣನ ಸಿಕ್ಸ್ ಪ್ಯಾಕ್ ಬಗ್ಗೆ ಸ್ಯಾಂಡಲ್ ವುಡ್ ತಾರೆಯರು ಏನಂದರು? ಸ್ಲೈಡಿನಲ್ಲಿ ನೋಡಿ..

  ರಮೇಶ್ ಅರವಿಂದ್, ದುನಿಯಾ ವಿಜಯ್

  ರಮೇಶ್ ಅರವಿಂದ್, ದುನಿಯಾ ವಿಜಯ್

  ರಮೇಶ್: ವೆರಿ ನೈಸ್ ಶಿವಣ್ಣ ವೆರಿ ನೈಸಿ, ಆಲ್ ದಿ ಬೆಸ್ಟ್

  ವಿಜಿ: ಶಿವಣ್ಣನಿಗೆ ಶಿವಣ್ಣನೇ ಸಾಟಿ, ಹ್ಯಾಟ್ಸಾಫ್ ಟು ಯು ಶಿವಣ್ಣ

  ನಿವೇದಿತಾ

  ನಿವೇದಿತಾ

  ಅಪ್ಪ ಈ ನಿರ್ಧಾರ ತೆಗೆದು ಕೊಂಡಾಗ ತುಂಬಾ ಭಯವಾಯಿತು. ಅವರ ಆರೋಗ್ಯದ ಬಗ್ಗೆ ಚಿಂತೆನೂ ಆಯಿತು. ಈಗ ಎಲ್ಲಾ ಓಕೆ. ಅಂಡಮಾನ್ ಚಿತ್ರದಲ್ಲಿ ಅಪ್ಪನ ಜೊತೆ ನಟಿಸಿದ್ದೇನೆ. (ನಿವೇದಿತಾ ಶಿವಣ್ಣನ ಎರಡನೇ ಮಗಳು)

  ಗೀತಾ ಶಿವರಾಜ್ ಕುಮಾರ್

  ಗೀತಾ ಶಿವರಾಜ್ ಕುಮಾರ್

  ನನ್ನ ಪತಿ ಯಾವಾಗಲೂ ಆಶಾದಾಯಕರು. ಜನರ ಪ್ರೀತಿಯನ್ನು ಸ್ಪೂರ್ಥಿಯಾಗಿ ತೆಗೆದು ಕೊಂಡು ತಮ್ಮ ಆರೋಗ್ಯದ ಬಗ್ಗೆ ಸದಾ ಗಮನ ಹರಿಸುತ್ತಾರೆ.

  ನಿರ್ದೇಶಕ ಹರ್ಷಾ

  ನಿರ್ದೇಶಕ ಹರ್ಷಾ

  ಶಿವಣ್ಣನ ಅಭಿಮಾನಿಗಳು ಶಿವಣ್ಣ ಸಿಕ್ಸ್ ಪ್ಯಾಕಿನಲ್ಲಿ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೌದು, ನಾವು ಪೋಸ್ಟರ್ಗಳಲ್ಲಿ ಶಿವಣ್ಣನ ಸಿಕ್ಸ್ ಪ್ಯಾಕ್ ಬಹಿರಂಗ ಪಡಿಸುವುದಿಲ್ಲ.

  ಬಿಗ್ ಬಾಸ್ ವಿಜಯ್ ರಾಘವೇಂದ್ರ

  ಬಿಗ್ ಬಾಸ್ ವಿಜಯ್ ರಾಘವೇಂದ್ರ

  ನಾನು ತಿಳಿದಿರುವ ಪ್ರಕಾರ ಶಿವಣ್ಣ ಇದುವರೆಗೂ ತನ್ನ ತೂಕದ ಬಗ್ಗೆ ಯಾವುದೇ ತರಬೇತಿಗೆ ಹೋಗಲಿಲ್ಲ. ಭಜರಂಗಿ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆ ಅವರಿಗೆ ಶುಭವಾಗಲಿ.

  ನಟ ನೆನಪಿರಲಿ ಪ್ರೇಮ್

  ನಟ ನೆನಪಿರಲಿ ಪ್ರೇಮ್

  ಶಿವಣ್ಣ ಮೊದಲು ಸಿಕ್ಸ್ ಪ್ಯಾಕ್ ಮಾಡುತ್ತಾರೆ ಎಂದಾಗ ಭಯವಾಯಿತು. ಅವರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇತ್ತು. ಆದರೆ ಶಿವಣ್ಣ ಖಂಡಿತಾ ಮಾಡೇ ಮಾಡ್ತಾರೆ, ಅವರಿಗೆ ಆಲ್ ದಿ ಬೆಸ್ಟ್.

  ಪುನೀತ್ ರಾಜಕುಮಾರ್

  ಪುನೀತ್ ರಾಜಕುಮಾರ್

  ನಾನು ಶಿವಣ್ಣನ ಹೊಸ ಅವತಾರವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ. ಶಿವಣ್ಣ ಆಲ್ ದಿ ಬೆಸ್ಟ್.

  ನಟ ಅಜಯ್

  ನಟ ಅಜಯ್

  ನನಗೆ ಗೊತ್ತಿರುವ ಪ್ರಕಾರ ಶಿವಣ್ಣನ ಎಡಗೈ ಮೂಳೆ ಮುರಿದಿತ್ತು. ಅದಕ್ಕೆ ಅವರು ಶಸ್ತ್ರ ಚಿಕಿತ್ಸೆ ಮಾಡಿಸ್ಕೋತ್ತಾ ಇದ್ದಾರೆ. ಅದನ್ನು ಯಾವುದನ್ನೂ ಲೆಕ್ಕಿಸದೇ ಶಿವಣ್ಣ ಸಿಕ್ಸ್ ಪ್ಯಾಕ್ ಮಾಡ್ತಾ ಇದ್ದಾರೆ. ಶಿವಣ್ಣನಿಗೆ ಗುಡ್ ಲಕ್.

  ರಾಗಿಣಿ ದ್ವಿವೇದಿ

  ರಾಗಿಣಿ ದ್ವಿವೇದಿ

  ದೇವರೇ ಈ ವಯಸ್ಸಲ್ಲೂ ಸಿಕ್ಸ್ ಪ್ಯಾಕ್ ಮಾಡ್ತಾ ಇರೋ ಶಿವಣ್ಣನಿಗೆ ಶುಭವಾಗಲಿ. ಆಲ್ ದಿ ಬೆಸ್ಟ್.

  English summary
  Hatrick Hero Shivaraj Kumar in six pack action in his upcoming movie "Bhajarangi". Sandalwood stars reaction on his six pack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X