Just In
Don't Miss!
- Automobiles
ಸರ್ವೀಸ್ ಸೆಂಟರ್ ಸಿಬ್ಬಂದಿಯಿಂದ ಅಪಘಾತಕ್ಕೀಡಾದ ಫುಟ್ಬಾಲ್ ಆಟಗಾರನ ಕಾರು
- Sports
ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?
- Finance
ಒಂದೇ ಬಾರಿಗೆ ಲಕ್ಷಾಂತರ ಜನರಿಂದ ಬಳಕೆ: ತಾಂತ್ರಿಕ ತೊಂದರೆ ಎದುರಿಸಿದ 'ಸಿಗ್ನಲ್'
- News
ಚಿತ್ರದುರ್ಗ: ಶಾಸಕ ಯತ್ನಾಳ್ ಹೇಳಿಕೆಗೆ ಸಚಿವ ಶ್ರೀರಾಮುಲು ಹೇಳಿದ್ದೇನು?
- Lifestyle
ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳಿನ ಖ್ಯಾತ ನಟನ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್?
ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿರುವ ಶಿವಣ್ಣ ಭಜರಂಗಿ-2 ಸಿನಿಮಾದ ಚಿತ್ರೀಕರಣ ಮುಗಿಸಿ, ಶಿವಪ್ಪ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ನಡುವೆ ಶಿವಣ್ಣ ಕಡೆಯಿಂದ ಬ್ರೇಕಿಂಗ್ ಸುದ್ದಿಯೊಂದು ಕೇಳಿಬರುತ್ತಿದೆ.
ಕರುನಾಡ ಚಕ್ರವರ್ತಿ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳಿನ ಖ್ಯಾತ ನಟನ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಶಿವಣ್ಣ ಇದುವರೆಗೂ ಯಾವುದೇ ತಮಿಳು ಸಿನಿಮಾದಲ್ಲಿ ನಟಿಸಿಲ್ಲ. ಒಂದು ವೇಳೆ ತಮಿಳು ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದೆ ಆದರೆ ಚೊಚ್ಚಲ ಬಾರಿಗೆ ಕಾಲಿವುಡ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅಂದಹಾಗೆ ಶಿವಣ್ಣ ನಟಿಸುತ್ತಿರುವುದು ತಮಿಳು ಸ್ಟಾರ್ ನಟ ಚಿಯಾನ್ ವಿಕ್ರಮ್ ಸಿನಿಮಾದಲ್ಲಿ.
ವಿಷ್ಣು ಪ್ರತಿಮೆ ಧ್ವಂಸ: ಶಿವಣ್ಣನ ಹೆಸರಿಗೆ ಮಸಿ ಬಳಿಯುವವರ ವಿರುದ್ಧ ಸಿಡಿದ ಅಭಿಮಾನಿಗಳು

ಚಿಯಾನ್ ವಿಕ್ರಮ್ ಸಿನಿಮಾದಲ್ಲಿ ಶಿವಣ್ಣ
ಹೌದು, ವಿಕ್ರಮ್ ನಟನೆಯ ಕಾರ್ತಿರ್ ಸುಬ್ಬರಾಜ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಈಗಾಗಲೇ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಮಾತನಾಡಿದ್ದಾರಂತೆ. ಶಿವಣ್ಣ ನಿವಾಸಕ್ಕೆ ಭೇಟಿ ನೀಡಿದ್ದ ಕಾರ್ತಿಕ್ ಚಿತ್ರದ ಬಗ್ಗೆ ವಿವರಿಸಿದ್ದಾರಂತೆ. ಕಥೆ ಕೇಳಿ ಶಿವಣ್ಣ್ ಇಂಪ್ರೆಸ್ ಆಗಿದ್ದಾರೆ ಎನ್ನಲಾಗುತ್ತಿದೆ.
'ಭಜರಂಗಿ-2' ನಂತರ ಹರ್ಷ ಜೊತೆ ಶಿವಣ್ಣನ ಹೊಸ ಚಿತ್ರ, ಟೈಟಲ್ ಫಿಕ್ಸ

ಶಿವಣ್ಣ ಕಡೆಯಿಂದ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದೆ ಚಿತ್ರತಂಡ
ಚಿತ್ರದಲ್ಲಿ ವಿಕ್ರಮ್ ಮತ್ತು ಶಿವಣ್ಣ ಇಬ್ಬರ ಪಾತ್ರಕ್ಕೂ ಸಮಾನವಾದ ಪ್ರಾಮುಖ್ಯತೆ ಇದೆಯಂತೆ. ನಿರೂಪಣೆ ತುಂಬಾ ಅದ್ಭುತವಾಗಿದೆಯಂತೆ. ಆದರೆ ಶಿವಣ್ಣ ಕಡೆಯಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರಂತೆ ನಿರ್ದೇಶಕ ಕಾರ್ತಿಕ್. ಶಿವಣ್ಣ ವಿಕ್ರಮ್ ಜೊತೆ ತಮಿಳು ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎನ್ನುವುದು ಇನ್ನೆರಡು ದಿನಗಳಲ್ಲಿ ಅಧಿಕೃತವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಮಿಳು ನಿರರ್ಗಳವಾಗಿ ಮಾತನಾಡುತ್ತಾರೆ ಶಿವಣ್ಣ
ಅಂದಹಾಗೆ ಶಿವಣ್ಣ ನಿರರ್ಗಳವಾಗಿ ತಮಿಳು ಮಾತನಾಡುತ್ತಾರೆ. ಹಾಗಾಗಿ ತಮಿಳಿನಲ್ಲಿ ನಟಿಸುವುದು ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು. ಆದರೆ ಶಿವಣ್ಣ ಕಡೆಯಿಂದ ಯಾವ ಉತ್ತರ ಹೊರಬೀಳಲಿದೆ ಎನ್ನುವುದನ್ನು ಕಾದು ನೋಡಬೇಕು.
ತೆಲುಗು ಸ್ಟಾರ್ ನಟನ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟನೆ

ತೆಲುಗು ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್
ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೆಲುಗು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ತೆಲುಗಿನ ಸೂಪರ್ ಸ್ಟಾರ್ ನಟ ಬಾಲಕೃಷ್ಣ ನಟನೆಯ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಬೊಯಪೇಟಿ ಶ್ರೀನಿವಾಸ್ ನಿರ್ದೇಶನದ ಮಾಸ್ ಸಿನಿಮಾದಲ್ಲಿ ಬಾಲಕೃಷ್ಣ ನಟಿಸುತ್ತಿದ್ದು, ಅದೇ ಸಿನಿಮಾದಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರಂತೆ ಪುನೀತ್ ರಾಜ್‌ಕುಮಾರ್. ಸಿನಿಮಾದಲ್ಲಿ ಪವರ್ ಫುಲ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.