»   » 'ಟಗರು' ಕ್ರೇಜ್ ನೋಡಿ ಪೊಗರು ಹೆಚ್ಚಿಸಿಕೊಂಡ ಶಿವಣ್ಣ ಫ್ಯಾನ್ಸ್

'ಟಗರು' ಕ್ರೇಜ್ ನೋಡಿ ಪೊಗರು ಹೆಚ್ಚಿಸಿಕೊಂಡ ಶಿವಣ್ಣ ಫ್ಯಾನ್ಸ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿದೆ. ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರದ ಟೈಟಲ್ ಹಾಗೂ ಸಬ್ ಟೈಟಲ್ ನಿಂದಲೇ ಬಾರಿ ಸುದ್ದಿ ಮಾಡಿರುವ ಸಿನಿಮಾ.

ಕಡ್ಡಿಪುಡಿ ಸಿನಿಮಾದ ನಂತರ ಶಿವಣ್ಣ ದುನಿಯಾ ಸೂರಿ ಡೈರೆಕ್ಷನ್ ನಲ್ಲಿ ಅಭಿನಯಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಶಿವಣ್ಣನ ಅಭಿಮಾನಿ ಆಗಿದ್ದ ಕೆ ಪಿ ಶ್ರೀಕಾಂತ್ ಟಗರು ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.

ಶಿವಣ್ಣನ 'ಟಗರು' ಅಡ್ಡದ 'ಶೇರ್' ಹೇಗಿದ್ದಾನೆ ಅಂತ ನೀವೇ ನೋಡಿ...

ಸಿನಿಮಾ ಸೆಟ್ಟೇರಿದಾಗಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಿರುವ ಟಗರು ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದೆ. ಚಿತ್ರದಲ್ಲಿ ಅಭಿನಯಿಸಿರುವ ಪ್ರತಿ ಕಲಾವಿದರು ತಮ್ಮದೇ ಸ್ಟೈಲ್ ನಲ್ಲಿ ಸುದ್ದಿ ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗುತ್ತಿರುವ ಟಗರು ಚಿತ್ರದ ಕ್ರೇಜ್ ಹೇಗಿದೆ ಅನ್ನೋದನ್ನ ತಿಳ್ಕೋಬೇಕಾದರೆ ಮುಂದೆ ಓದಿ ..

ಫೇಮಸ್ ಆಯ್ತು ಟಗರು ಬ್ಲೇಜರ್

ಟಗರು ಬ್ಲೇಜರ್ ಸದ್ಯ ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ. ಟಗರು ಆಡಿಯೋ ಸಮಾರಂಭಕ್ಕಾಗಿ ಡಿಸೈನರ್ ಅಜಿತ್ ಎನ್ನುವವರು ನಟ ಧನಂಜಯ ಅವರಿಗಾಗಿ ಡಿಸೈನ್ ಮಾಡಿಕೊಟ್ಟಿದ್ದಾರೆ.ಧನಂಜಯ ಟಗರು ಚಿತ್ರದಲ್ಲಿ ಡಾಲಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ 'ಟಗರು' ಬಗ್ಗೆ ಟಾಲಿವುಡ್ ಸ್ಟಾರ್ ನಟನ ಮಾತು

ಲಾಂಗ್ ಹಿಡಿದಿರೋ ಫೋಟೋ ವೈರಲ್

ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಲಾಂಗ್ ಹಿಡಿದಿರೋ ಫೋಟೋ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಶಿವರಾಜ್ ಕುಮಾರ್ ಫೋಟೋ ಜೊತೆಗೆ ಸಚ್ಚಿನ್ ಕ್ರಿಕೆಟ್ ಬ್ಯಾಟ್ ಹಿಡಿದಿರೋ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

ಟಗರು ಆಡಿಯೋ ಸೂಪರ್ ಹಿಟ್

ಹೊಸ ವರ್ಷದ ಆರಂಭವಾಗುವ ಮುನ್ನವೇ ರಿಲೀಸ್ ಮಾಡಿರುವ ಟಗರು ಸಿನಿಮಾದ ಹಾಡುಗಳು ಹಿಟ್ ಆಗಿದೆ. ಪಾರ್ಟಿ ಮೂಡ್ ನಲ್ಲಿರೋ ಜನರಿಗೆ ಟಗರು ಟೈಟಲ್ ಸಾಂಗ್ ಮತ್ತು ಮೆಂಟಲ್ ಹಾಡುಗಳು ಕ್ರೇಜ್ ಹುಟ್ಟಿಸಿವೆ.

ಮಲ್ಟಿ ಸ್ಟಾರರ್ ಸಿನಿಮಾ ಟಗರು

'ಕೆಂಡಸಂಪಿಗೆ' ಚಿತ್ರದ ನಂತರ ದುನಿಯಾ ಸೂರಿ ನಿರ್ದೇಶನದ ಚಿತ್ರ ಟಗರು. ಶಿವರಾಜ್ ಕುಮಾರ್, ಜಾಕಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ ಮತ್ತು ವಸಿಷ್ಠ ಸಿಂಹ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ.

English summary
Shivaraj Kumar starrer 'Tagaru' movie Craze is high . The film is directed by Duniya Suri, Shivaraj kumar. Manvitha Harish, Bavan, Dhananjaya acting in Tagaru movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X