ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ 'ಭಜರಂಗಿ-2' ಫಸ್ಟ್ ಲುಕ್ ರಿಲೀಸ್

Recommended Video

ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಶಿವಣ್ಣ | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ 'ರುಸ್ತುಂ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ 'ರುಸ್ತುಂ' ಇದೆ ತಿಂಗಳು ತೆರೆಗೆ ಬರುತ್ತಿದೆ. 'ರುಸ್ತುಂ' ರಿಲೀಗೆ ರೆಡಿಯಾಗಿದ್ರೆ ಶಿವರಾಜ್ ಕುಮಾರ್ 'ಆನಂದ್' ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

'ಆನಂದ್' ಸಿನಿಮಾ ಜೊತೆಗೆ ಶಿವಣ್ಣ ಕೈಯಲ್ಲಿ 'ದ್ರೋಣ', 'ಎಸ್ ಆರ್ ಕೆ', ಸೇರಿದಂತೆ ಸಾಲು ಸಾಲು ಸಿನಿಮಾಗಳಿವೆ. ಇದರ ಜೊತೆಗೀಗ ಶಿವಣ್ಣ ಬಹುನಿರೀಕ್ಷೆಯ 'ಭಜರಂಗಿ-2' ಚಿತ್ರದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸೂಪರ್ ಹಿಟ್ 'ಭಜರಂಗಿ' ಚಿತ್ರದ ಪಾರ್ಟ್-2 ಗೆ ಈಗಾಗಲೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.

ಅಭಿಮಾನಿಗಳಿಗೆ ಸಿಹಿ ಸುದ್ದಿ ಅಂದ್ರೆ 'ಭಜರಂಗಿ-2' ಚಿತ್ರದ ಫಸ್ಟ್ ಲುಕ್ ರಿಲೀಸ್ ಗೆ ದಿನಾಂಕ ನಿಗದಿ ಮಾಡಿಕೊಂಡಿದೆ ಚಿತ್ರತಂಡ. ಹೌದು, ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ 'ಭಜರಂಗಿ-2' ಚಿತ್ರದ ಮೊದಲ ಲುಕ್ ನ ದರ್ಶನ ಅಭಿಮಾನಿಗಳಿಗೆ ಆಗಲಿದೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಈಗಾಗಲೆ ಹೇಳಿದ್ದಾರೆ. ಆದ್ರೆ ಅಭಿಮಾನಿಗಳಿಗೆ ಒಂದಿಷ್ಟು ಗಿಫ್ಟ್ ಗಳನ್ನು ನೀಡಿ ರಂಜಿಸಲಿದ್ದಾರೆ.ಮುಂದೆ ಓದಿ..

ಜುಲೈ 12ಕ್ಕೆ ಭಜರಂಗಿ-2 ಫಸ್ಟ್ ಲುಕ್

ಜುಲೈ 12ಕ್ಕೆ ಭಜರಂಗಿ-2 ಫಸ್ಟ್ ಲುಕ್

ಜುಲೈ 12ಕ್ಕೆ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮ ದಿನದಂದು ಬಹುನಿರೀಕ್ಷೆಯ 'ಭಜರಂಗಿ-2 'ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಈ ಮೂಲಕ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡಲಿದ್ದಾರೆ ಶಿವಣ್ಣ. ವಿಶೇಷ ಅಂದ್ರೆ ಇಂದಿನಿಂದ ಚಿತ್ರದ ಚಿತ್ರೀಕರಣ ಕೂಡ ಪ್ರಾರಂಭವಾಗುತ್ತಿದೆ. ಜುಲೈ 4ರ ವರೆಗೆ ಮೊದಲ ಹಂತದ ಚಿತ್ರೀಕರಣ ಮಾಡಿ ಮುಗಿಸಲು ಪ್ಲಾನ್ ಮಾಡಿಕೊಂಡಿದೆ ಚಿತ್ರಂತಂಡ.

ಲಂಡನ್ ನಲ್ಲಿ ಫಸ್ಟ್ ಲುಕ್ ರಿಲೀಸ್

ಲಂಡನ್ ನಲ್ಲಿ ಫಸ್ಟ್ ಲುಕ್ ರಿಲೀಸ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲಂಡನ್ ನಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ. ಯಾಕಂದ್ರೆ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಮಯದಲ್ಲಿ ಲಂಡನ್ ನಲ್ಲಿ ಇರಲಿದ್ದಾರೆ. ಹಾಗಾಗಿ ಅಲ್ಲಿಂದನೆ ಚಿತ್ರದ ಮೊದಲ ಲುಕ್ ರಿಲೀಸ್ ಮಾಡಲಿದ್ದಾರೆ. ಶಿವಣ್ಣ ಲಂಡನ್ ಹೋಗುತ್ತಾರೆ ಎನ್ನುವ ಕಾರಣಕ್ಕೆ ಜುಲೈ 4 ವರೆಗೆ ಮೊದಲ ಹಂತದ ಚಿತ್ರೀಕರಣ ಮಾಡಿ ಮುಗಿಸಲಿದೆ ಚಿತ್ರತಂಡ. ಆನಂತರ ಹ್ಯಾಟ್ರಿಕ್ ಹೀರೋ ಲಂಡನ್ ಗೆ ಹೊರಡಲಿದ್ದಾರೆ.

ಫೋಟೋಶೂಟ್ ಮುಗಿಸಿದ ಚಿತ್ರತಂಡ

ಫೋಟೋಶೂಟ್ ಮುಗಿಸಿದ ಚಿತ್ರತಂಡ

ಈಗಾಗಲೆ ಚಿತ್ರದ ಫೋಟೋಶೂಟ್ ಕೂಡ ಮಾಡಿ ಮುಗಿಸಲಾಗಿದೆ. 'ಭಜರಂಗಿ-2' ಚಿತ್ರದಲ್ಲಿ ಶಿವಣ್ಣ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ಆದ್ರೆ ಶಿವಣ್ಣನ ಲುಕ್ ನೋಡಲೇ ಬೇಕಾದ್ರೆ ಜುಲೈ 12ರ ವರೆಗೂ ಕಾಯಲೆ ಬೇಕು. ವಿಶೇಷ ಅಂದ್ರೆ 'ಭಜರಂಗಿ' ಚಿತ್ರದ ಫಸ್ಟ್ ಲುಕ್ ಕೂಡ ಶಿವಣ್ಣ ಹುಟ್ಟುಹಬ್ಬದ ದಿನವೆ ರಿಲೀಸ್ ಆಗಿತ್ತು.

ಶಿವರಾಜ್ ಕುಮಾರ್ ಗೆ ಭಾವನ ನಾಯಕಿ

ಶಿವರಾಜ್ ಕುಮಾರ್ ಗೆ ಭಾವನ ನಾಯಕಿ

'ಭಜರಂಗಿ-2' ಚಿತ್ರದಲ್ಲಿ ನಾಯಕಿಯಾಗಿ ಭಾವನ ಮೆನನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಹ್ಯಾಟ್ರಿಕ್ ಹೀರೋ ಜೊತೆ 'ಟಗರು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರ ಜೋಡಿಗೆ ಪ್ರೇಕ್ಷಕರು ಕೂಡ ಫಿದಾ ಆಗಿದ್ರು. ಮತ್ತೀಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇರಲಿದೆ. 'ಭಜರಂಗಿ' ಚಿತ್ರಕ್ಕೂ ಅರ್ಜುನ್ ಸಂಗೀತ ಸಂಯೋಜನೆ ಮಾಡಿದ್ದರು. ಉಳಿದಂತೆ ಚಿತ್ರದಲ್ಲಿ ಸಾಕಷ್ಟು ಹೊಸ ಕಲಾವಿದರೆ ಕಾಣಿಸಿಕೊಳ್ಳಲಿದ್ದಾರಂತೆ.

ಎ.ಹರ್ಷ ನಿರ್ದೇಶನ

ಎ.ಹರ್ಷ ನಿರ್ದೇಶನ

ಎ.ಹರ್ಷ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೂರನೆ ಸಿನಿಮಾ ಇದಾಗಿದೆ. ಭಜರಂಗಿ ಮತ್ತು ವಜ್ರಕಾಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಹರ್ಷ ಈಗ ಭಜರಂಗಿ-2 ಮೂಲಕ ಮತ್ತೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬಿನೇಶನ್ ನ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಮೂರನೆ ಬಾರಿ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

More from Filmibeat

English summary
Kannada actor Shivaraj kumar starrer 'Bajrangi-2' film first look will release in Shivaraj kumar Birthday on july 12th. This movie is directed by A Harsha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X