For Quick Alerts
  ALLOW NOTIFICATIONS  
  For Daily Alerts

  ವಿದೇಶದ ಕಡೆ ಪಯಣ ಬೆಳೆಸಿದ ಕನ್ನಡದ 'ಕವಚ'

  |

  ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅಬ್ಬರಿಸುತ್ತಿವೆ. ಅದರಲ್ಲೂ ರಾಕಿಂಗ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ದೇಶ ವಿದೇಶದಲ್ಲಿ ದೊಡ್ಡ ಮಟ್ಟಕ್ಕೆ ಖ್ಯಾತಿ ಗಳಿಸಿತ್ತು. 'ಕೆಜಿಎಫ್' ಸಿನಿಮಾದ ಹವಾ ಇನ್ನು ಕಮ್ಮಿ ಆಗಿಲ್ಲ ಆದರ ಜೊತೆಗೆಯೇ ಈಗ ಕನ್ನಡದ ಬಹುತೇಕ ಚಿತ್ರಗಳು ವಿದೇಶದಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿವೆ.

  ಸದ್ಯ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕವಚ' ಚಿತ್ರ ವಿದೇಶದ ಕಡೆ ಪಯಣ ಬೆಳೆಸಿದೆ. ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ 'ಕವಚ' ಈಗ ಅಮೇರಿಕಾದಲ್ಲಿ ತೆರೆ ಕಾಣಲು ಸಜ್ಜಾಗಿದೆ. ಏಪ್ರಿಲ್ 12ರಂದು ಅಮೇರಿಕಾದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು ಸುಮಾರು 20ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 'ಕವಚ' ರಾರಾಜಿಸಲಿದೆ.

  'ರುಸ್ತುಂ' ಸಿನಿಮಾದ ಟ್ರೇಲರ್ ನೋಡುವ ಸಮಯ ಬಂತು

  'ಕವಚ' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪ ಮಗಳ ಭಾವನಾತ್ಮಕ ಸಂಬಂಧದ ಬಗ್ಗೆ ಇರುವ 'ಕವಚ' ಕನ್ನಡ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿತ್ತು. ಚಿತ್ರಕ್ಕೆ ಜಿ ವಿ ಆರ್ ವಾಸು ಆಕ್ಷನ್ ಕಟ್ ಹೇಳಿದ್ದಾರೆ.

  ಅಂದ್ಹಾಗೆ ಕನ್ನಡ ಸಿನಿಪ್ರಿಯರ ಮನಗೆದ್ದಿರುವ 'ಕವಚ' ಮಲಯಾಳಂನ 'ಒಪ್ಪಂ' ಸಿನಿಮಾದ ರಿಮೇಕ್. ಮಲಯಾಳಂನಲ್ಲಿ ಅಂಧನ ಪಾತ್ರದಲ್ಲಿ ನಟ ಮೋಹನ್ ಲಾಲ್ ಕಾಣಿಸಿಕೊಂಡಿದ್ದರು. 'ಕವಚ' ಚಿತ್ರದಲ್ಲಿ ಶಿವರಾಜ್ ಕುಮಾರ್ ಅಂಧನ ಪಾತ್ರಕ್ಕೆ ಜೀವ ತುಂಬಿದ್ದಾರೆ.

  English summary
  Kannada actor Hatric Hero Shivaraj Kumar starrer 'Kavacha' movie will release on April 12th in America. Kavacha movie screening on more than 20 screens in America.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X