»   » ಮತ್ತೆ ಶುರುವಾಯ್ತು ಟಗರು ಸಿನಿಮಾ ಕ್ರೇಜ್

ಮತ್ತೆ ಶುರುವಾಯ್ತು ಟಗರು ಸಿನಿಮಾ ಕ್ರೇಜ್

Posted By:
Subscribe to Filmibeat Kannada

ಕಳೆದ ಆರು‌ ತಿಂಗಳಿಂದ ಪ್ರತಿ‌ ಸಿನಿಮಾ ಪ್ರೇಕ್ಷಕನ ಬಾಯಲ್ಲಿ ಕೇಳಿ ಬರುತ್ತಿದ್ದ ಪದ ಟಗರು . ಬಿಡುಗಡೆಗೆ ಮುಂಚೆಯೇ ಸಾಕಷ್ಟು ಕ್ರೇಜ್ ಹುಟ್ಟುಹಾಕಿದ್ದ ಚಿತ್ರ ಬಿಡುಗಡೆಯ ನಂತರವೂ ಅದೇ ಕ್ರೇಜ್ ಅನ್ನು ಮುಂದುವರೆಸಿದೆ. ಅಷ್ಟರ ಮಟ್ಟಿಗೆ ಟಗರು ಸಿನಿಮಾ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದೆ.

ಚಿತ್ರ ಬಿಡುಗಡೆ ಮುಂಚೆ ನಿರೀಕ್ಷೆಗಳನ್ನ ಹುಟ್ಟುಹಾಕುವುದು ಸಾಮಾನ್ಯ ವಿಚಾರ, ಆದರೆ ಅದೇ ಸಿನಿಮಾ ಬಿಡುಗಡೆಯಾದ ನಂತರವು ಪ್ರೇಕ್ಷಕರ ಮುಂದೆ ಅದೇ ಕ್ರೇಜ್ ಉಳಿಸಿಕೊಂಡಿದೆ ಎಂದರೆ ಅಲ್ಲಿಗೆ ಚಿತ್ರ ಸಕ್ಸಸ್ ಆಗಿದೆ ಎಂದರ್ಥ. ಟಗರು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವುದರ ಜೊತೆಯಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ‌ ಪಡೆದುಕೊಂಡಿದೆ.


ಟಗರು ಬಿಡುಗಡೆ ಆಗಿ ನಾಲ್ಕು ದಿನಗಳು ಕಳೆದಿವೆ ಸಿನಿಮಾ ಥಿಯೇಟರ್ ನಲ್ಲಿ ಜನ ತುಂಬಿ ತುಳುಕುತಿದ್ದಾರೆ. ಇತ್ತ ಖಾಸಗಿ ಸಮಾರಂಭಗಳಲ್ಲಿ ಟಗರು ಹಾಡುಗಳು ಕೇಳಿ ಬರುತ್ತಿವೆ. ಬೆಂಗಳೂರಿನಲ್ಲಿ ನಡೆದ ಮದುವೆಯೊಂದರಲ್ಲಿ ಟಗರು ಸಿನಿಮಾದ ಹಾಡಿನದ್ದೆ ಸದ್ದು. ಮದುವೆ ಆರಂಭವಾಗಿ ಮುಗಿಯುವ ತನಕವೂ ಸಂಬಂಧಿಕರು ಸ್ನೇಹಿತರೆಲ್ಲರ ಕಿವಿಗೆ ಬಿದ್ದಿದ್ದು ಟಗರು ಶಿವನ ಗುಣಗಾನ.


shivaraj kumar starrer tagaru movie Craze is high

ಕನ್ನಡ ಸಿನಿಮಾಗಳನ್ನ ನೋಡಲು ಚಿತ್ರಮಂದಿರದತ್ತ ಅಭಿಮಾನಿಗಳು ಬರುವುದು ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ಟಗರು ಚಿತ್ರ ಜನರನ್ನ ಆಕರ್ಷಣೆ ಮಾಡುವುದರಲ್ಲಿ ಗೆದ್ದಿದೆ. ಪ್ರೇಕ್ಷಕರ ನಿರೀಕ್ಷೆಯನ್ನ ನಿಜವಾಗಿಸಿದೆ. ಮೂರು‌ ದಿನಗಳು ಕಳೆದರು ಥಿಯೇಟರ್ ನಲ್ಲಿ‌ ಭರ್ತಿ ಪ್ರದರ್ಶನ ಕಾಣುತ್ತಿದೆ.

English summary
Shivaraj kumar starerr Tagaru movie Craze is high ,Four days have passed since the release of Kannada Tagaru Cinema. The fan is putting the Tagaru film songs in their wedding ceremony

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada