»   » ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಸಿನಿಮಾ ಶುರು

ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಸಿನಿಮಾ ಶುರು

Posted By:
Subscribe to Filmibeat Kannada
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ಹೊಸ ಸಿನಿಮಾ ಶುರು |

'ಟಗರು' ಸಿನಿಮಾ ಯಶಸ್ಸಿನಲ್ಲಿರುವ ಶಿವರಾಜ್ ಕುಮಾರ್ ಸದ್ಯ 'ಕವಚ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಾಕಷ್ಟು ವರ್ಷಗಳ ನಂತರ ಶಿವಣ್ಣ ರಿಮೇಕ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಅನೌನ್ಸ್ ಆಗಿರುವ ಸಿನಿಮಾಗಳನ್ನ ಬಿಟ್ಟು‌ ಹ್ಯಾಟ್ರಿಕ್ ಹೀರೋ ಮತ್ಯಾವ ಚಿತ್ರದಲ್ಲಿ ಆಕ್ಟ್ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಅದಕ್ಕೆ ತಕ್ಕಂತೆ ಶಿವಣ್ಣನ ಹೊಸ ಚಿತ್ರ ಅಪ್ಪಾಜಿ ಅವರ ಹುಟ್ಟುಹಬ್ಬದಂದು ಸೆಟ್ಟೇರುತ್ತಿದೆ.

ಸಾಕಷ್ಟು ದಿನಗಳಿಂದ ಸಾಹಸ ನಿರ್ದೇಶಕ ರವಿವರ್ಮಾ ಶಿಣ್ಣನ ಸಿನಿಮಾ‌ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಈಗ ಅದೇ ಸಿನಿಮಾಗೆ ಚಾಲನೆ ಸಿಕ್ತಿದೆ. ಈ ವಿಚಾರವನ್ನ ಖುದ್ದು ರವಿವರ್ಮಾ ಅವರೇ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಶಿವಣ್ಣನ ಜೊತೆ ಇರುವ ಫೋಟೋ ಹಾಕಿರುವ ನಿರ್ದೇಶಕ ರವಿವರ್ಮಾ ಶಿವಣ್ಣನ ಜೊತೆ ಕೆಲಸ ಮಾಡಲು ಕಾತುರನಾಗಿದ್ದೇನೆ. ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಚಿತ್ರ ಮುಹೂರ್ತ ಆಗಲಿದೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ

ಈ‌ ಹಿಂದೆ ಶಿವಣ್ಣ ಹಾಗೂ ರವಿವರ್ಮಾ ಕಾಂಬಿನೇಷನ್ ಸಿನಿಮಾವನ್ನ ಜಯಣ್ಣ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಈಗ ಚಿತ್ರಕ್ಕೆ ಯಾರು ಬಂಡವಾಳ ಹಾಕುತ್ತಾರೆ ಎನ್ನುವ ಸುದ್ದಿ ಮಾತ್ರ ನಿರ್ದೇಶಕ ರವಿವರ್ಮಾ ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ 'ರುಸ್ತುಂ' ಎಂದು ಹೆಸರಿಡಲಾಗಿದೆ. ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿಯೂ ಕೆಲಸ ಮಾಡಿ ಬಂದಿರುವ ರವಿವರ್ಮಾ 'ರುಸ್ತುಂ' ಸಿನಿಮಾಗಾಗಿ ಉತ್ತಮ ಕಥೆಯನ್ನ ಮಾಡಿಕೊಂಡಿದ್ದಾರಂತೆ. ಟೈಟಲ್ ಕೇಳುತ್ತಲೇ ಇದೊಂದು ಉತ್ತಮ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

English summary
Kannada actor Shivaraj Kumar will start his new film on Dr Rajkumar's Birthday. The film is named 'Rustum'. Stunt director Ravivarma will direct the Rustum film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada