For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ - ಹರ್ಷ ಕಾಂಬಿನೇಶನ್‌ನ ವೇದಾ ಚಿತ್ರದ ಚಿತ್ರೀಕರಣ ಮುಕ್ತಾಯ; ಬಿಡುಗಡೆ ಯಾವಾಗ?

  |

  ಭಜರಂಗಿ, ವಜ್ರಕಾಯ ಹಾಗೂ ಭಜರಂಗಿ 2 ಚಿತ್ರಗಳ ಬಳಿಕ ಶಿವರಾಜ್‌ಕುಮಾರ್ ಹಾಗೂ ಎ ಹರ್ಷ ನಾಲ್ಕನೇ ಬಾರಿಗೆ ಒಂದಾಗಿದ್ದು ವೇದಾ ಎಂಬ ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಶಿವರಾಜ್‌ಕುಮಾರ್ ಅವರನ್ನು ಪ್ರತೀ ಚಿತ್ರದಲ್ಲೂ ವಿಭಿನ್ನ ಲುಕ್‌ನಲ್ಲಿ ತೋರಿಸಿರುವ ಎ ಹರ್ಷ ಈ ವೇದಾ ಚಿತ್ರದಲ್ಲಿಯೂ ತುಂಬಾ ವಿಭಿನ್ನವಾಗಿ ತೋರಿಸಲಿದ್ದಾರೆ ಎಂಬುದು ಚಿತ್ರದ ಪೋಸ್ಟರ್ ನೋಡಿದರೆ ತಿಳಿದುಬರಲಿದೆ.

  ಇನ್ನು ಫೆಬ್ರವರಿ ತಿಂಗಳಿನಲ್ಲಿ ಆರಂಭಗೊಂಡಿದ್ದ ವೇದಾ ಚಿತ್ರದ ಚಿತ್ರೀಕರಣ ನಿನ್ನೆ ( ನವೆಂಬರ್ 4 ) ಮುಕ್ತಾಯಗೊಂಡಿದೆ. ಚಿತ್ರೀಕರಣದ ಸ್ಥಳದಲ್ಲಿ ವಿಶೇಷ ಪೂಜೆ ಮಾಡುವುದರ ಮೂಲಕ ಚಿತ್ರೀಕರಣವನ್ನು ಚಿತ್ರತಂಡ ಮುಕ್ತಾಯಗೊಳಿಸಿದ್ದು, ಈ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ ಹಾಗೂ ಈ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

  ಇನ್ನು ಈ ಚಿತ್ರದ ಹಲವಾರು ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿದ್ದು ಶಿವರಾಜ್‌ಕುಮಾರ್ ಮತ್ತೊಮ್ಮೆ ಲಾಂಗ್ ಹಿಡಿದು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಹಿಳಾ ಪಾತ್ರಗಳ ಸಂಖ್ಯೆ ಹಾಗೂ ಪ್ರಾಮುಖ್ಯತೆ ಹೆಚ್ಚಿರಲಿದೆ ಎಂಬುದನ್ನೂ ಸಹ ಇತ್ತೀಚೆಗಷ್ಟೆ ಬಿಡುಗಡೆಗೊಂಡ ಪೋಸ್ಟರ್ ಒಂದನ್ನು ಗಮನಿಸಿದರೆ ತಿಳಿಯಬಹುದಾಗಿದೆ.

  ವೇದಾ ಚಿತ್ರಕ್ಕೆ ಜೀ ಸ್ಟುಡಿಯೋಸ್ ಹಾಗೂ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಒಡೆತನದ ಗೀತಾ ಪಿಕ್ಚರ್ಸ್ ಬಂಡವಾಳ ಹೂಡಿವೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಇನ್ನು ವೇದಾ ಚಿತ್ರದ ಕತೆ 1960ರ ಸಮಯದ್ದಾಗಿದ್ದು, ಎ ಹರ್ಷಾ ಇದು ರಣ ಬೇಟೆಗಾರನ ರಕ್ತ ಸಿಕ್ತ ಅಧ್ಯಾಯ ಎಂದು ತಿಳಿಸಿ ಕುತೂಹಲ ಹೆಚ್ಚಾಗುವಂತೆ ಮಾಡಿದ್ದರು. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸಿರುವ ವೇದಾ ಚಿತ್ರ ಡಿಸೆಂಬರ್ 23ರಂದು ತೆರೆಗೆ ಅಪ್ಪಳಿಸಲಿದೆ.

  English summary
  Shivarajkumar and A Harsha's Vedha shooting completed and movie schedule to relese on December 23
  Saturday, November 5, 2022, 9:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X