»   » ರೈತರ ಜೊತೆ ಹೋರಾಟಕ್ಕೆ ಮುಂದಾದ ಶಿವರಾಜ್ ಕುಮಾರ್ ಹಾಗೂ ಯಶ್

ರೈತರ ಜೊತೆ ಹೋರಾಟಕ್ಕೆ ಮುಂದಾದ ಶಿವರಾಜ್ ಕುಮಾರ್ ಹಾಗೂ ಯಶ್

Posted By:
Subscribe to Filmibeat Kannada

ಮಹದಾಯಿ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗಾಗಿ ನ್ಯಾಯ ಕೊಡಿ ಎಂದು ರೈತರು ,ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಛೇರಿ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ.

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!

ನಾಡು-ನುಡಿ-ಜಲ ವಿಚಾರ ಬಂದಾಗ ಹಿಂದಿನಿಂದಲೂ ಅನ್ನದಾತರ ಪರವಾಗಿ ನಿಲ್ಲುವ ಕನ್ನಡ ಸಿನಿಮಾರಂಗ ಕಳೆದ ಎರಡು ದಿನಗಳಿಂದ ರೈತರ ಜೊತೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

Shivarajkumar and Rocking star Yash will be part of Mahadevi protest today(dec.27).

ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಸೇರಿದಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಿನ್ನೆಯ ಪ್ರತಿಭಟನೆಯಲ್ಲಿ ಪಾಳ್ಗೊಳ್ಳುವ ಮೂಲಕ ರೈತರ ಕಷ್ಟದಲ್ಲಿ ನಾವು ಕೂಡ ಭಾಗಿ ಎಂದಿದ್ದಾರೆ. ಇತ್ತ ಚಿತ್ರರಂಗದ ವತಿಯಿಂದ ಶಿವರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ವಾಣಿಜ್ಯಮಂಡಳಿಯಲ್ಲಿ ಸಭೆ ನಡೆಸಿ ರೈತರ ಹೋರಾಟದ ಬಗ್ಗೆ ಸಿನಿಮಾರಂಗ ಹೇಗೆ ಭಾಗಿ ಆಗಬೇಕು ಎಂದು ನಿರ್ಧರಿಸಲಿದ್ದಾರೆ.

Shivarajkumar and Rocking star Yash will be part of Mahadevi protest today(dec.27).

ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ರೈತರ ಹೋರಾಟಕ್ಕೆ ನಾವು ಸದಾ ಸಿದ್ದವಾಗಿದ್ದೇವೆ ಎಂದು ಟ್ವಿಟ್ ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿ ಮುಂದಿನ ನಿರ್ಣಯಗಳನ್ನ ತೆಗೆದುಕೊಳ್ಳಲಿದ್ದಾರೆ.

Shivarajkumar and Rocking star Yash will be part of Mahadevi protest today(dec.27).
English summary
Kannada actor Shivarajkumar and Rocking star Yash will be part of Mahadevi protest today(dec.27). The meeting is scheduled to be held on the karnataka film chamber of commerce on farmers .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X