»   » 551ನೇ ಬಾರಿ ರೀ ರಿಲೀಸ್ ಆಗುತ್ತಿದೆ ಬ್ಲಾಕ್ ಬಸ್ಟರ್ 'ಓಂ'

551ನೇ ಬಾರಿ ರೀ ರಿಲೀಸ್ ಆಗುತ್ತಿದೆ ಬ್ಲಾಕ್ ಬಸ್ಟರ್ 'ಓಂ'

Posted By:
Subscribe to Filmibeat Kannada

ಎಂಬತ್ತು ವರ್ಷಗಳ ಕನ್ನಡ ಸಿನಿಮಾ ಇತಿಹಾಸದಲ್ಲಿ, ಎಷ್ಟು ಬಾರಿ ನೋಡಿದರೂ, ಮತ್ತೆ ಮತ್ತೆ ನೋಡಬೇಕು ಎನ್ನುವಂತಹ ಬೋರಾಗದೇ ಇರುವ ಸಿನಿಮಾಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಳುವ ಸಿನಿಮಾ ಬಹುಶಃ 'ಓಂ' ಮಾತ್ರ.

'ಓಂ' ಚಿತ್ರ ಬಿಡುಗಡೆಯಾಗಿ ಇಪತ್ತು ವರ್ಷಗಳು ಕಳೆದಿವೆ. ಈಗಲೂ 'ಓಂ' ಸಿನಿಮಾ ರಿಲೀಸ್ ಆದ್ರೆ, ಜನ ಮುಗಿಬಿದ್ದು ವೀಕ್ಷಿಸುತ್ತಾರೆ. ಪ್ರತಿ ಬಾರಿ 'ಓಂ' ಬಿಡುಗಡೆಯಾದಾಗಲೂ ಕಲೆಕ್ಷನ್ ನಲ್ಲಿ ಬಾಕ್ಸ್ ಆಫೀಸ್ ಚಿಂದಿ ಚಿಂದಿ ಆಗುತ್ತೆ.

Shivarajkumar's Blockbuster Om has created new record

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರೇಮ ನಟನೆಯ 'ಓಂ' ಚಿತ್ರ ಇದೀಗ ಸ್ಯಾಂಡಲ್ ವುಡ್ ಹಿಸ್ಟ್ರಿಯಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. [ಶಿವಣ್ಣನ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ]

ಸದ್ಯದಲ್ಲೇ, ಅಂದ್ರೆ ಮಾರ್ಚ್ 12ನೇ ತಾರೀಖು 'ಓಂ' ಸಿನಿಮಾ ಬೆಂಗಳೂರಿನ ಮೂವೀಲ್ಯಾಂಡ್ ಸೇರಿದಂತೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಕಳೆದ 20 ವರ್ಷಗಳಲ್ಲಿ 'ಓಂ' ಸಿನಿಮಾ ರೀ ರಿಲೀಸ್ ಆಗುತ್ತಿರುವುದು ಇದು ಬರೋಬ್ಬರಿ 551ನೇ ಬಾರಿ...!!

Shivarajkumar's Blockbuster Om has created new record

ಹೌದು, ಸ್ಯಾಂಡಲ್ ವುಡ್ ನಲ್ಲಿ ಸುನಾಮಿ ಎಬ್ಬಿಸಿದ 'ಓಂ' ಸಿನಿಮಾ ಮಾಡಿರುವ ಹೊಸ ದಾಖಲೆ ಅಂದ್ರೆ ಇದೆ. ಇಲ್ಲಿಯವರೆಗೂ, ಕನ್ನಡದ ಯಾವ ಚಿತ್ರವೂ 550 ಬಾರಿ ರೀ ರಿಲೀಸ್ ಆಗಿಲ್ಲ. ಕನ್ನಡ ಮಾತ್ರ ಯಾಕೆ, ಪರಭಾಷೆಯ ಯಾವ ಚಿತ್ರಗಳೂ ಈಪಾಟಿ ರಿಲೀಸ್ ಆಗಿರುವ ಉದಾಹರಣೆಗಳು ಕೇಳಿಲ್ಲ. [ಬಾಕ್ಸ್ ಆಫೀಸಲ್ಲಿ ಶಿವಣ್ಣ 'ಓಂ' ಭರ್ಜರಿ ಓಪನಿಂಗ್]

19/05/1995 ರಂದು 'ಓಂ' ಸಿನಿಮಾ ಬಿಡುಗಡೆ ಆಗಿತ್ತು. ಗಾಂಧಿನಗರ ಪಂಡಿತರ ಲೆಕ್ಕಾಚಾರದ ಪ್ರಕಾರ ಅಂದಿನಿಂದ ಕರ್ನಾಟಕದಾದ್ಯಂತ 400 ಥಿಯೇಟರ್ ಗಳಲ್ಲಿ 550 ಬಾರಿ 'ಓಂ' ರೀ ರಿಲೀಸ್ ಆಗಿದೆ. 551 ರ ಸುವರ್ಣ ಪ್ರದರ್ಶನಕ್ಕೆ ಇದೇ ಮಾರ್ಚ್ 12 ಸಾಕ್ಷಿಯಾಗಲಿದೆ.

Shivarajkumar's Blockbuster Om has created new record

ಈ ದಾಖಲೆ ಹಿಂದೆಯೂ ಒಂದು ರೋಚಕ ಕಥೆ ಇದೆ. ಕರ್ನಾಟಕದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ 'ಓಂ' ಚಿತ್ರದ ಪರ್ಮನೆಂಟ್ ಕಾಪಿ ಇದೆ. ಥಿಯೇಟರ್ ಗಳಲ್ಲಿ ಲಾಭ ಕಡಿಮೆ ಆದಾಗ, ವಿತರಕರು ಕೊಂಚ ಕಷ್ಟದಲ್ಲಿದ್ದಾಗ, ಅವರೆಲ್ಲರಿಗೂ ಆಪತ್ಭಾಂಧವ ಈ 'ಓಂ' ಸಿನಿಮಾ. [ಡಿಟಿಎಸ್ ನಲ್ಲಿ ಶಿವಣ್ಣ ಮಚ್ಚು ಹಿಡಿದ ಮೊದಲ ಚಿತ್ರ ಓಂ]

ಹೀಗಾಗಿ, ಕಲೆಕ್ಷನ್ ಇಲ್ಲದ ಚಿತ್ರವನ್ನ ಎತ್ತಂಗಡಿ ಮಾಡಿದಾಗಲ್ಲೆಲ್ಲಾ, 'ಓಂ' ಸಿನಿಮಾ ರೀ ರಿಲೀಸ್ ಆಗುತ್ತಲೆ ಇರುತ್ತದೆ. ಹಳೇ ಕಾಪಿಗೆ ಈಗ 5.1 ಡಿಜಿಟಲ್ ಸರೌಂಡ್ ಸೌಂಡ್ ಫಾರ್ಮ್ಯಾಟ್ ಟಚ್ ಕೊಟ್ಟಿರುವ 'ಓಂ' ಸಿನಿಮಾ ಮತ್ತೊಮ್ಮೆ ತೆರೆಗೆ ಅಪ್ಪಳಿಸುತ್ತಿದೆ. ಅಚ್ಚ ಹೊಸ ಕಾಪಿಯ 'ಓಂ' ಚಿತ್ರವನ್ನ ಕಣ್ತುಂಬಿಕೊಳ್ಳೋಕೆ ಈಗಲೇ ಟಿಕೆಟ್ ಕಾಯ್ದಿರಿಸಿರಿ. ಅದಕ್ಕೂ ಮುನ್ನ ಇದೀಗ ರಿಲೀಸ್ ಆಗಿರುವ 'ಓಂ' ಚಿತ್ರದ ಹೊಚ್ಚ ಹೊಸ ಟ್ರೇಲರ್ ನೋಡಿ....

<iframe width="600" height="450" src="https://www.youtube.com/embed/A_J8CZ8gXcg" frameborder="0" allowfullscreen></iframe>
English summary
Hattrick Hero Shivarajkumar's Blockbuster movie OM is all set to re-release on March 12th. According to the reports, this will be 551st time that OM is hitting Screens since 20 years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada