twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಅವರನ್ನು ನಮ್ಮ ಕುಟುಂಬ ಪ್ರೀತಿಯಿಂದ ಕಂಡಿದೆ, ಸ್ಮಾರಕ ಆಗಿದ್ದು ಮನಸ್ಸಿಗೆ ಖುಷಿ ತಂದಿದೆ: ಶಿವಣ್ಣ

    |

    ಚಂದನವನದ ಮೇರುನಟರಲ್ಲಿ ಓರ್ವರಾದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಆಗಬೇಕೆಂಬುದು ಪ್ರತಿಯೊಬ್ಬ ವಿಷ್ಣುವರ್ಧನ್ ಅಭಿಮಾನಿಯ ಹಾಗೂ ಕನ್ನಡ ಸಿನಿ ರಸಿಕನ ಬಹುದಿನಗಳ ಆಸೆಯಾಗಿತ್ತು. ಬೆಂಗಳೂರಿನಲ್ಲಿ ಸ್ಮಾರಕ ಯಾವಾಗ ನಿರ್ಮಾಣವಾಗುತ್ತೆ ಎಂದು ಕಾಯುತ್ತಿದ್ದ ವಿಷ್ಣುವರ್ಧನ್ ಅಭಿಮಾನಿಗಳಿಗೆ ಈಗ ಮೈಸೂರಿನಲ್ಲಿ ಸ್ಮಾರಕವಾಗಿರುವುದು ನೆಮ್ಮದಿ ತಂದಿದೆ.

    ಮೈಸೂರಿನ ಎಚ್ ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಇಂದು ( ಜನವರಿ 29 ) ಈ ಸ್ಮಾರಕ ಲೋಕಾರ್ಪಣೆಯಾಗಿದೆ. ಈ ಮೂಲಕ ವಿಷ್ಣುವರ್ಧನ್ ನಿಧನ ಹೊಂದಿ ಹದಿಮೂರು ವರ್ಷಗಳ ಬಳಿಕ ಸ್ಮಾರಕ ಸಿದ್ಧವಾಗಿ ಲೋಕಾರ್ಪಣೆಗೊಳ್ಳುತ್ತಿದ್ದು, ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಸ್ಟಾರ್ ನಟರೂ ಸಹ ಈ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

    ಹದಿಮೂರು ವರ್ಷದ ಬಳಿಕ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ! ವಿಶೇಷತೆಗಳೇನು?ಹದಿಮೂರು ವರ್ಷದ ಬಳಿಕ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ! ವಿಶೇಷತೆಗಳೇನು?

    ಕನ್ನಡ ಚಲನಚಿತ್ರರಂಗದ ಸ್ಟಾರ್ ನಟ ಹಾಗೂ ವಿಷ್ಣುವರ್ಧನ್ ಅವರ ಕಟ್ಟಾ ಹಿಂಬಾಲಕನಾದ ಕಿಚ್ಚ ಸುದೀಪ್ ಮುಂಜಾನೆ ಈ ಕುರಿತು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಚಂದನವನದ ಸ್ಟಾರ್ ನಟ ಶಿವ ರಾಜ್‌ಕುಮಾರ್ ಸೇರಿದಂತೆ ಇನ್ನೂ ಹಲವಾರು ನಟರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡಂತೆ ಬರೆದುಕೊಂಡಿದ್ದಾರೆ.

    ಹದಿಮೂರು ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಸ್ಮಾರಕ ಆಗಿದ್ದರ ಬಗ್ಗೆ ಶಿವಣ್ಣ ಪೋಸ್ಟ್

    ಹದಿಮೂರು ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಸ್ಮಾರಕ ಆಗಿದ್ದರ ಬಗ್ಗೆ ಶಿವಣ್ಣ ಪೋಸ್ಟ್

    ವಿಷ್ಣುವರ್ಧನ್ ಸ್ಮಾರಕದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ ವಿಷ್ಣುವರ್ಧನ್ ಜತೆಗಿನ ತಮ್ಮ ಫೋಟೊವನ್ನು ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ: "13 ವರ್ಷಗಳ ಸುಧೀರ್ಘ ಕಾಯುವಿಕೆಯ ನಂತರ ಮೈಸೂರಿನಲ್ಲಿ ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ.! ಸ್ಮಾರಕ ನಿರ್ಮಾಣಕ್ಕೆ ಕಾರಣರಾದ ವಿಷ್ಣು ಕುಟುಂಬಕ್ಕೆ ,ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು., ವಿಷ್ಣುವರ್ಧನ್ ಹಾಗೂ ನಮ್ಮ ಕುಟುಂಬದ ಬಾಂಧವ್ಯ ಮತ್ತು ಒಡನಾಟ ಬಹಳಷ್ಟಿವೆ. ವಿಷ್ಣುವರ್ಧನ್ ನಮ್ಮ ತಂದೆ ಡಾ.ರಾಜ್ ಅವರನ್ನು ಬಹಳಷ್ಟು ಪ್ರೀತಿ ಗೌರವ ಅಭಿಮಾನದಿಂದ ಕಾಣುತ್ತಿದ್ದರು. ಅಪ್ಪಾಜಿ ಹಾಗೂ ನಮ್ಮ ಕುಟುಂಬ ಕೂಡ ವಿಷ್ಣು ಅವರನ್ನು ತುಂಬು ಪ್ರೀತಿಯಿಂದ ಕಂಡಿದ್ದೇವೆ.! ವಿಷ್ಣುವರ್ಧನ್ ಅವರ ಅಭಿಮಾನಿಗಳ ಕೋರಿಕೆ ಕೊನೆಗೂ ಸ್ಮಾರಕ ರೂಪದಲ್ಲಿ ಈಡೇರುತ್ತಿರುವ ವಿಷಯ ನನಗೆ ಹಾಗೂ ನಮ್ಮ ಚಿತ್ರರಂಗಕ್ಕೆ ಬಹಳ ಹೆಮ್ಮೆಯ ವಿಷಯ - ನಿಮ್ಮ ಶಿವಣ್ಣ"

    ಕಿಚ್ಚ ಸುದೀಪ್ ಪೋಸ್ಟ್

    ಕಿಚ್ಚ ಸುದೀಪ್ ಪೋಸ್ಟ್

    ಇನ್ನು ಕಿಚ್ಚ ಸುದೀಪ್ ವಿಷ್ಣುವರ್ಧನ್ ಅವರ ಫೋಟೊವೊಂದನ್ನು ಅಪ್‌ಲೋಡ್ ಮಾಡಿ ""ಕಾಯುತ್ತಿದ್ದರು ಕರುನಾಡ ಜನತೆ ಇಂತಹದ್ದೊಂದು ಅದ್ಭುತ ಕ್ಷಣಕ್ಕೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ, ಒಳ್ಳೆಯದೇ ಆಗುತ್ತಿದೆ. ಯಜಮಾನ್ರ ಸ್ಮಾರಕ ಲೋಕಾರ್ಪಣೆ ಸಮಾರಂಭಕ್ಕೆ ಶುಭಕೋರುತ್ತೇನೆ - ಕಿಚ್ಚ ಸುದೀಪ್" ಎಂದು ಬರೆದುಕೊಂಡು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಹನ್ನೊಂದು ಕೋಟಿ ವೆಚ್ಚದ ಸ್ಮಾರಕ

    ಹನ್ನೊಂದು ಕೋಟಿ ವೆಚ್ಚದ ಸ್ಮಾರಕ

    ಇನ್ನು ಹಾಲಾಳು ಗ್ರಾಮದ ಬಳಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕ ನಿರ್ಮಾಣಕ್ಕೆ ಸುಮಾರು 11 ಕೋಟಿ ರುಪಾಯಿ ಹಣ ಖರ್ಚು ಮಾಡಲಾಗಿದೆ. ಬೆಂಗಳೂರಿನ ಎಂ9 ಕಂಪೆನಿಯ ನಿಶ್ಚಲ್ ವಿಷ್ಣು ಸ್ಮಾರಕಕ್ಕೆ ರೂಪುರೇಷೆ ಸಿದ್ಧಪಡಿಸಿದ್ದರು. ಸೆಪ್ಟೆಂಬರ್ 15, 2020ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಇದೀಗ ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ.

    English summary
    Shivarajkumar expressed his happiness for Vishnuvardhan memorial inauguration . Read on
    Sunday, January 29, 2023, 15:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X