For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ ಅಳಿಯ'ನಿಗೆ ಶಿವಣ್ಣ ಬಂಪರ್ ಉಡುಗೊರೆ

  By Harshitha
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ಡಾ.ನಿರುಪಮ ಅವರ ವಿವಾಹ ಮಹೋತ್ಸವದ ತಯಾರಿ ಅದ್ದೂರಿಯಾಗಿ ನಡೆಯುತ್ತಿದೆ. ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ಅವರ ಮನೆಯಲ್ಲಿ ಹಬ್ಬದ ಕಳೆ ತುಂಬಿದೆ.

  ಖ್ಯಾತ ನಿರ್ದೇಶಕ ಪಿ.ವಾಸು, ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಪುತ್ರ ಪ್ರಭು ಶಿವಣ್ಣನ ಮನೆಗೆ ಆಗಮಿಸಿದ್ದಾರೆ. ಇದೇ ವೇಳೆ ಭಾವಿ ಅಳಿಯ ಡಾ.ದಿಲೀಪ್ ಅವರಿಗೆ ಶಿವರಾಜ್ ಕುಮಾರ್ ಬಂಪರ್ ಉಡುಗೊರೆ ನೀಡಲು ಸಜ್ಜಾಗಿದ್ದಾರೆ. ['ಅಭಿಮಾನಿ ದೇವರು'ಗಳಿಗೆ ಶಿವಣ್ಣನ ಆದರದ ಆಮಂತ್ರಣ]

  ಅರ್ಧ ಕೋಟಿ ಬೆಲೆಬಾಳುವ ಬಿ.ಎಂ.ಡಬ್ಲ್ಯೂ 3 ಸೀರೀಸ್ ಕಾರ್ ನ ಡಾ.ದಿಲೀಪ್ ಅವರಿಗೆ ಉಡುಗೊರೆಯಾಗಿ ಶಿವಣ್ಣ ನೀಡಲಿದ್ದಾರೆ. ಈಗಾಗಲೇ ಕಡು ನೀಲಿ ಬಣ್ಣದ ಬಿ.ಎಂ.ಡಬ್ಲ್ಯೂ 3 ಸೀರೀಸ್ ಕಾರ್ ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿಯಿರುವ ಶಿವಣ್ಣನ ಮನೆ ಮುಂದೆ ನಿಂತಿದೆ. [ಮಗಳ ಮದುವೆಗೆ ಶಿವಣ್ಣ ಭರ್ಜರಿ ಶಾಪಿಂಗ್.!]

  ಕಾರಿಗಾಗಿ ಸ್ಪೆಷಲ್ ಫ್ಲವರ್ ಡೆಕೊರೇಷನ್ ಮಾಡಿಸಲಾಗಿದ್ದು, ಅದರಲ್ಲಿ ಶಿವಣ್ಣ ಒಂದು ರೌಂಡ್ ಹಾಕಿ ಬಂದಿದ್ದಾರೆ. ಶಿವಣ್ಣ ಮತ್ತು ಕಾರ್ ಗೆ ಮಂಗಳಮುಖಿಯರು ದೃಷ್ಟಿ ತೆಗೆದಿದ್ದಾರೆ.

  ಇಂದು ಸಂಜೆ ಅರಮನೆ ಮೈದಾನದಲ್ಲಿ ವರಪೂಜೆ ಕಾರ್ಯಕ್ರಮ ನಡೆಯಲಿದ್ದು, 3 ಗಂಟೆ ಸುಮಾರಿಗೆ ಶಿವಣ್ಣ ಕುಟುಂಬ ಮನೆಯಿಂದ ತೆರಳಲಿದೆ. ನಾಳೆ (ಆಗಸ್ಟ್ 31) ರಂದು ಡಾ.ನಿರುಪಮ-ಡಾ.ದಿಲೀಪ್ ವಿವಾಹ ಮಹೋತ್ಸವ ನೆರವೇರಲಿದೆ.

  English summary
  Kannada Actor Shivarajkumar has gifted BMW Car for his Son-in-law Dr.Dileep. Shivarajkumar's Daughter Dr.Nirupama is getting married to Dr.Dileep on August 31st, in Palace Grounds, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X