For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಅಸ್ವಸ್ಥ : ರಾಘಣ್ಣ, ಪುನೀತ್, ಮಧು ಬಂಗಾರಪ್ಪ ಏನಂತಾರೆ?

  By Harshitha
  |

  ಸದಾ ಉತ್ಸಾಹದ ಚಿಲುಮೆಯಂತಿರುತ್ತಿದ್ದ ನಟ ಶಿವರಾಜ್ ಕುಮಾರ್ ಇಂದು ಅಸ್ವಸ್ಥಗೊಂಡಿದ್ದಾರೆ. ವ್ಯಾಯಾಮ ಮಾಡುತ್ತಿದ್ದ ಸಂದರ್ಭದಲ್ಲಿ ಬಲ ಭುಜ ಭಾಗದಲ್ಲಿ ಅತೀವ ನೋವು ಕಾಣಿಸಿಕೊಂಡ ಕಾರಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಯಲ್ಲಿ ನಟ ಶಿವರಾಜ್ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಣ್ಣನ ಆರೋಗ್ಯ ವಿಚಾರಿಸುವ ಸಲುವಾಗಿ ಸಹೋದರ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸೋದರ ಮಾವ ಚಿನ್ನೇಗೌಡ, ವಿಜಯ್ ರಾಘವೇಂದ್ರ ಸೇರಿದಂತೆ ರಾಜ್ ಕುಮಾರ್ ಕುಟುಂಬದ ಸದಸ್ಯರು ಹಾಗು ಕನ್ನಡ ಚಿತ್ರರಂಗದ ಸ್ಟಾರ್ ನಟರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. [ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?]

  ಶಿವಣ್ಣನ ಆರೋಗ್ಯದ ಬಗ್ಗೆ ಯಾರ್ಯಾರು ಏನು ಹೇಳಿದರು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ಮಧು ಬಂಗಾರಪ್ಪ

  ಮಧು ಬಂಗಾರಪ್ಪ

  ಬೆಳಗ್ಗೆ 8.45ಗೆ ರೈಟ್ ಸೈಡ್ ಪೇನ್ ಅಂತ ಹೇಳಿದ್ದಾರೆ. ನಾನು ನಮ್ಮ ಮನೆಯಲ್ಲಿದ್ದೆ. ಗೀತಕ್ಕ ಫೋನ್ ಮಾಡಿದ್ರು. ತಕ್ಷಣ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ಕರೆದುಕೊಂಡು ಹೋದ್ವಿ. ಅಲ್ಲಿ ECGಯಲ್ಲಿ ಡಿಫರೆನ್ಸ್ ಬಂತು. ಹೀಗಾಗಿ ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಇಲ್ಲಿ ಶಿವಣ್ಣನಿಗೆ ಪರಿಚಯ ಇರುವ ಡಾಕ್ಟರ್ಸ್ ಇದ್ದಾರೆ. ಇಲ್ಲೂ ಆಂಜಿಯೋಗ್ರಾಮ್ ಮಾಡಿದ್ದಾರೆ. ಏನು ತೊಂದರೆ ಇಲ್ಲ. ಎರಡು ದಿನ ರೆಸ್ಟ್ ಹೇಳಿದ್ದಾರೆ. [ಶಿವಣ್ಣನಿಗೆ ಲಘು ಹೃದಯಾಘಾತ : ಅಣ್ಣಾವ್ರ ಮಗನಿಗೆ ಶಸ್ತ್ರಚಿಕಿತ್ಸೆ?]

  ಪುನೀತ್ ರಾಜ್ ಕುಮಾರ್

  ಪುನೀತ್ ರಾಜ್ ಕುಮಾರ್

  ಶಿವಣ್ಣ ಹುಷಾರಾಗಿದ್ದಾರೆ. ಅವರು ಚೆನ್ನಾಗಿದ್ದಾರೆ. ಇವತ್ತು ಸಾಯಂಕಾಲ ಡಿಸ್ಚಾರ್ಜ್ ಆಗ್ತಾರೆ. ದಯವಿಟ್ಟು ರಾಂಗ್ ಇನ್ಫರ್ಮೇಷನ್ ಕೊಡಬೇಡಿ. ಡೋನ್ಟ್ ವರಿ, ಹೀ ಈಸ್ ಕಂಪ್ಲೀಟ್ಲಿ ಫೈನ್. [ನಟ ಶಿವರಾಜ್ ಕುಮಾರ್ ಅಸ್ವಸ್ಥ: ಮಲ್ಯ ಆಸ್ಪತ್ರೆಗೆ ದಾಖಲು]

  ರಾಘವೇಂದ್ರ ರಾಜ್ ಕುಮಾರ್

  ರಾಘವೇಂದ್ರ ರಾಜ್ ಕುಮಾರ್

  ಶಿವಣ್ಣ ಚೆನ್ನಾಗಿದ್ದಾರೆ. ಚೆಸ್ಟ್ ಕಂಜೆಷನ್ ಆಗಿದೆ ಅಷ್ಟೆ. ಏನೂ ಬ್ಲಾಕೇಜ್ ಇಲ್ಲ. ಹಾರ್ಟ್ ಚೆನ್ನಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಆಕ್ಟಿವಿಟೀಸ್ ನಲ್ಲಿ ಪಾಲ್ಗೊಳ್ಳುತ್ತಾರೆ. ಶೂಟಿಂಗ್ ಗೂ ಬರ್ತಾರೆ. ನನಗೂ ಹಾರ್ಟ್ ಪ್ಲಾಬ್ಲಂ ಆಗಿತ್ತು. ಆದ್ರೆ, ಶಿವಣ್ಣನಿಗೆ ಯಾವತ್ತೂ ಹೀಗೆ ಆಗಿಲ್ಲ. ಸ್ವೆಟ್ಟಿಂಗ್ ಜಾಸ್ತಿ ಆಗಿದೆ ವ್ಯಾಯಾಮ ಆಗುವಾಗ. ಸುಳ್ಳು ವದಂತಿ ಹಬ್ಬಿಸಬೇಡಿ. ವಿಶ್ರಾಂತಿ ಇಲ್ಲದ ಕಾರಣ ಹೀಗಾಗಿದೆ. ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ.

  ಲವ್ಲಿ ಸ್ಟಾರ್ ಪ್ರೇಮ್

  ಲವ್ಲಿ ಸ್ಟಾರ್ ಪ್ರೇಮ್

  ಈಗಷ್ಟೆ ಮೀಟ್ ಮಾಡಿ ಬಂದೆ. ಶಿವಣ್ಣ ಚೆನ್ನಾಗಿದ್ದಾರೆ. ಯಾವುದೇ ಬ್ಲಾಕ್ ಆಗಿಲ್ಲ. ದೇವರ ದಯೆಯಿಂದ ಅವರು ಚೆನ್ನಾಗಿದ್ದಾರೆ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗ್ತಾರೆ. ಶಿವಣ್ಣನಿಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ.

  ಚಿನ್ನೇಗೌಡ

  ಚಿನ್ನೇಗೌಡ

  ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಶಿವಣ್ಣನ ಆರೋಗ್ಯ ಚೆನ್ನಾಗಿದೆ. ಅವರಿಗೆ ಯಾವುದೇ ತೊಂದರೆ ಆಗಿಲ್ಲ.

  ಚಿರಂಜೀವಿ ಸರ್ಜಾ

  ಚಿರಂಜೀವಿ ಸರ್ಜಾ

  ನಾನು ಶಿವಣ್ಣನನ್ನ ನೋಡೋಕೆ ಆಗ್ಲಿಲ್ಲ. ಗೀತಕ್ಕ ಜೊತೆ ಮಾತನಾಡಿಕೊಂಡು ಬಂದೆ. ನಾಳೆ ಬೆಳಗ್ಗೆ ಡಿಸ್ಚಾರ್ಜ್ ಮಾಡ್ತಾರಂತೆ. ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ.

  English summary
  Kannada Actor Shivarajkumar is admitted to Mallya Hospital today (October 6th). Raghavendra Rajkumar, Puneeth Rajkumar and other stars of Kannada Film Industry who visited the hospital has reacted to the media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X