»   » 'ಅಭಿಮಾನಿ ದೇವರು'ಗಳಿಗೆ ಶಿವಣ್ಣನ ಆದರದ ಆಮಂತ್ರಣ

'ಅಭಿಮಾನಿ ದೇವರು'ಗಳಿಗೆ ಶಿವಣ್ಣನ ಆದರದ ಆಮಂತ್ರಣ

Posted By:
Subscribe to Filmibeat Kannada

ಅಣ್ಣಾವ್ರ ಮುದ್ದಿನ ಮೊಮ್ಮಗಳು, ಡಾ.ಶಿವರಾಜ್ ಕುಮಾರ್ ಸುಪುತ್ರಿ ನಿರುಪಮಾ ವಿವಾಹ ಮಹೋತ್ಸವಕ್ಕೆ ಇನ್ನು ಮೂರು ದಿನಗಳು ಬಾಕಿ. ಆಗಸ್ಟ್ 30-31 ರಂದು ಅರಮನೆ ಮೈದಾನದಲ್ಲಿ ಡಾ.ನಿರುಪಮಾ, ಡಾ.ದಿಲೀಪ್ ಅವರ ಕೈಹಿಡಿಯಲಿದ್ದಾರೆ.

ವಧು-ವರರನ್ನ ಆಶೀರ್ವದಿಸುವುದಕ್ಕೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನ ದೊಡ್ಡ ದೊಡ್ಡ ಕಲಾವಿದರಿಗೆ ಆತ್ಮೀಯ ಆಮಂತ್ರಣ ನೀಡಲಾಗಿದೆ.

nirupama marriage

ಬಿಗ್ ಬಿ ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜಿನಿಕಾಂತ್, ಸಕಲಕಲಾವಲ್ಲಭ ಕಮಲ್ ಹಾಸನ್ ಸೇರಿದಂತೆ ಭಾರತೀಯ ಚಿತ್ರರಂಗದ ಅತಿರಥ ಮಹಾರಥರೇ ಶಿವಣ್ಣನ ಮಗಳ ಮದುವೆಗೆ ಆಗಮಿಸುವ ನಿರೀಕ್ಷೆ ಇದೆ. [ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ!]

ಇಂತಿಪ್ಪ ದೊಡ್ಡ ದೊಡ್ಡ ಕಲಾವಿದರ ಜೊತೆ ನೀವೂ ಸಹ ದೊಡ್ಮನೆ ಮೊಮ್ಮಗಳ ಮದುವೆಗೆ ಹೋಗಿ ಆಶೀರ್ವಾದ ಮಾಡಿ ಬರಬಹುದು. ಅಂತಹ ಸದಾವಕಾಶವನ್ನ ಡಾ.ಶಿವರಾಜ್ ಕುಮಾರ್ ಮತ್ತು ಅವರ ಆಪ್ತ ಕೆ.ಪಿ.ಶ್ರೀಕಾಂತ್ ಒದಗಿಸಿದ್ದಾರೆ.

shivarajkumar

ಯಾವುದೇ ರೀತಿಯ ಪಾಸ್ ಇಲ್ಲದೆ ಎಲ್ಲಾ 'ಅಭಿಮಾನಿ ದೇವರುಗಳು' ಅರಮನೆ ಮೈದಾನದಲ್ಲಿ ನಡೆಯುವ ಶಿವಣ್ಣನ ಮುದ್ದಿನ ಮಗಳ ವಿವಾಹಕ್ಕೆ ತೆರಳಬಹುದು. [ಶಿವರಾಜ್ ಕುಮಾರ್ ಮಗಳ ಮದುವೆ ಸಿದ್ಧತೆ ಚಿತ್ರಗಳು]

ಹಾಗಾದ್ರೆ, ಇನ್ಯಾಕೆ ತಡ. ಇಂದ್ರ ಲೋಕವೇ ಧರೆಗಿಳಿದಂತೆ ವೈಭೋಗದಿಂದ ನಡೆಯಲಿರುವ ವಿವಾಹ ಮಹೋತ್ಸವಕ್ಕೆ ನೀವು ಸಾಕ್ಷಿಯಾಗೋಕೆ ತಯಾರಾಗಿ.

    English summary
    Kannada Actor Shivarajkumar has invited all his fans for his daughter's marriage. No pass or Invitation is required for the people to enter the Marriage Hall.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada