For Quick Alerts
  ALLOW NOTIFICATIONS  
  For Daily Alerts

  ಸೆ. 3ರಿಂದ 'ಕಡ್ಡಿಪುಡಿ'ಗೆ ಲೈಟ್ಸ್ ಕ್ಯಾಮೆರಾ ಆಕ್ಷನ್ ಕಟ್

  By Rajendra
  |

  ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಹಾಗೂ ಮೋಹಕ ತಾರೆ ರಾಧಿಕಾ ಪಂಡಿತ್ ಅಭಿನಯದ 'ಕಡ್ಡಿಪುಡಿ' ಚಿತ್ರದ ಶೂಟಿಂಗ್ ಸೆಪ್ಟೆಂಬರ್ 3ರಿಂದ ಆರಂಭವಾಗುತ್ತಿದೆ. ಸೋಮವಾರದಿಂದ ಬೆಂಗಳೂರಿನ ಎಚ್ಎಂಟಿ ವೃತ್ತದಲ್ಲಿ ಕಡ್ಡಿಪುಡಿ ಶೂಟಿಂಗ್ ಚಾಲನೆ ಪಡೆಯಲಿದೆ.

  ಈ ಭಾಗದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರದ ಉಳಿದ ಕಲಾವಿದರು ಭಾಗವಹಿಸಲಿದ್ದಾರೆ. ಇದಾದ ಬಳಿಕ ಚಿತ್ರೀಕರಣದಲ್ಲಿ ರಾಧಿಕಾ ಪಂಡಿತ್ ಭಾಗವಹಿಸಲಿದ್ದಾರೆ. ಸ್ವಯಂವರ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ದುನಿಯಾ ಸೂರಿ.

  ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮೈಸೂರಿನತ್ತ ತೆರಳಲಿದೆ ಚಿತ್ರತಂಡ. ಈ ಚಿತ್ರದ ಕೆಲವು ಸನ್ನಿವೇಶಗಳನ್ನು ವಾಘಾ ಗಡಿಯಲ್ಲೂ ಚಿತ್ರೀಕರಿಸಿಕೊಳ್ಳಲಾಗುತ್ತದಂತೆ. ಪುನೀತ್ ರಾಜ್ ಕುಮಾರ್ ಅವರ ಜಾಕಿ ಚಿತ್ರದ ಹಾಡುಗಳನ್ನು ಚಿತ್ರೀಕರಿಸಿದ್ದ ನಮೀಬಿಯಾದಲ್ಲಿ ಕಡ್ಡಿಪುಡಿ ಹಾಡುಗಳ ಚಿತ್ರೀಕರಣ ನಡೆಯಲಿದೆ.

  ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಚಿತ್ರಕ್ಕೆ 'ಮುಂಗಾರುಮಳೆ' ಖ್ಯಾತಿಯ ಎಸ್ ಕೃಷ್ಣ ಅವರ ಛಾಯಾಗ್ರಹಣವಿದೆ. ರಂಗಾಯಣ ರಘು, ಅವಿನಾಶ್ ಹಾಗೂ ರೇಣು ಪ್ರಸಾದ್ ಅವರು ಪಾತ್ರವರ್ಗದಲ್ಲಿದ್ದಾರೆ.

  ಒನ್ಸ್ ಎಗೈನ್ ಈ ಚಿತ್ರದಲ್ಲಿ ಶಿವಣ್ಣ ಲಾಂಗು ಹಿಡಿಯುತ್ತಿದ್ದಾರೆ. ರೌಡಿಯಿಸಂ ಚಿತ್ರವಾದರೂ ಸ್ವಲ್ಪ ಭಿನ್ನವಾಗಿರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ದುನಿಯಾ ಸೂರಿ ಅವರ ನಿರ್ದೇಶನದ ಬಗ್ಗೆ ಕುತೂಹಲವೂ ಇದೆ.

  ಚಿತ್ರದಲ್ಲಿ ಶಿವಣ್ಣ ಹೆಸರು ಆನಂದ್ ಅಲಿಯಾಸ್ ಕಡ್ಡಿಪುಡಿ. ಉಮಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಲಿದ್ದಾರೆ. ಕಡ್ಡಿಪುಡಿ ಹೆಸರಿಗೆ ತಕ್ಕಂತೆ ತಂಬಾಕಿನ ಕಿಚ್ ಚಿತ್ರದಲ್ಲೂ ಇರುತ್ತದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕೆ ನೆಗಟೀವ್ ಶೇಡ್ ಇದ್ದರೂ ಸ್ವಾರಸ್ಯಕರವಾಗಿದೆಯಂತೆ.

  ಚಿತ್ರದಲ್ಲಿ ಲಾಂಗು ಮಚ್ಚುಗಳ ಅಬ್ಬರವಿದ್ದರೂ ಪ್ರೀತಿಯ ಸಣ್ಣ ಎಳೆಯೂ ಬಿಚ್ಚಿಕೊಳ್ಳುತ್ತದೆ. ಗೆಳೆತನ, ಪ್ರೀತಿ ಪ್ರೇಮ ಪ್ರಣಯ, ದ್ವೇಷ, ಮದುವೆ ಅಂಶಗಳೂ ಚಿತ್ರದಲ್ಲಿವೆ. ಇಷ್ಟೆಲ್ಲಾ ವಿಶೇಷಗಳ 'ಕಡ್ಡಿಪುಡಿ' ಚಿತ್ರದ ಕತೆಯನ್ನು ಯುವ ಮತ್ತು ಮಧ್ಯ ವಯಸ್ಕರನ್ನು ಗಮನದಲ್ಲಿಟ್ಟುಕೊಂಡು ಹೆಣೆಯಲಾಗಿದೆ ಎನ್ನುತ್ತಾರೆ ಸೂರಿ. (ಒನ್ ಇಂಡಿಯಾ ಸಿನಿ ಡೆಸ್ಕ್)

  English summary
  Hat trick hero Shivarajkumar and Radhika Pandit lead upcoming film Kaddi Pudi shooting starts from 3rd September. This film which is being produced by Swayamvara Chandrau and directing by Duniya Soori.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X