»   » ಸೆಂಚುರಿ ಸ್ಟಾರ್ ಶಿವಣ್ಣ ಹೊಸ ಚಿತ್ರದ ಹೆಸರು ಭಜರಂಗಿ

ಸೆಂಚುರಿ ಸ್ಟಾರ್ ಶಿವಣ್ಣ ಹೊಸ ಚಿತ್ರದ ಹೆಸರು ಭಜರಂಗಿ

Posted By:
Subscribe to Filmibeat Kannada

'ಶಿವ' ಚಿತ್ರದ ಬಳಿಕ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಈ ಬಾರಿ ಅವರ ಚಿತ್ರಕ್ಕೆ 'ಭಜರಂಗಿ' ಎಂದು ಹೆಸರಿಡಲಾಗಿದೆ. ಸದ್ಯಕ್ಕೆ 'ಕಡ್ಡಿಪುಡಿ'ಯಲ್ಲಿ ಬಿಜಿಯಾಗಿರುವ ಶಿವಣ್ಣ ಈಗ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿರುವುದು ವಿಶೇಷ.

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ಚಿಂಗಾರಿ' (ಚಿತ್ರ ವಿಮರ್ಶೆ ಓದಿ) ಚಿತ್ರದ ಮೂಲಕ ನಿರ್ದೇಶಕರಾಗಿ ಬದಲಾದ ನೃತ್ಯ ನಿರ್ದೇಶಕ ಹರ್ಷಾ. "ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿರುತ್ತದೆ " ಎನ್ನುತ್ತಾರೆ ಹರ್ಷಾ.

"ನಾನು ಶಾಲಾ ಬಾಲಕನಾಗಿದ್ದಾಗಿನಿಂದಲೂ ಶಿವಣ್ಣ ಅವರ ಅಭಿಮಾನಿ. ಅವರಂತೆ ಹೇರ್ ಸ್ಟೈಲ್ ಮಾಡುವುದು, ಡಾನ್ಸ್ ಮಾಡುತ್ತಿದ್ದೆ. ಅವರ ಇತ್ತೀಚಿನ 'ಶಿವ' ಚಿತ್ರಕ್ಕೂ ನೃತ್ಯ ಸಂಯೋಜನೆ ಮಾಡುವ ಅಪೂರ್ವ ಅವಕಾಶ ಸಿಕ್ಕಿತ್ತು. ಈಗ ಅವರ ಚಿತ್ರವನ್ನು ನಿರ್ದೇಶಿಸುತ್ತಿರುವ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ ಎಂದಿದ್ದಾರೆ ಹರ್ಷಾ.

ಶಿವಣ್ಣ ಹಾಗೂ ನಿರ್ಮಾಪಕ ನಟರಾಜ್ ಗೌಡ ಅವರು ಕತೆ ಕೇಳಿದ ಕೂಡಲೆ 'ಭಜರಂಗಿ' ಚಿತ್ರವನ್ನು ಓಕೆ ಮಾಡಿದ್ದಾರೆ. ಹರ್ಷಾ ಅವರನ್ನು ಶಿವಣ್ಣ ಕೇಳಿದ್ದು ಒಂದೇ ಒಂದು ಪ್ರಶ್ನೆಯಂತೆ, ಚಿತ್ರೀಕರಣ ಯಾವಾಗಿಂದ ಶುರುವಚ್ಚಿಕೊಳ್ಳೋಣ ಎಂದು.

2013ರ ಫೆಬ್ರವರಿಯಿಂದ ಶೂಟಿಂಗ್ ಪ್ರಾರಂಭವಾಲಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಸೂಕ್ತ ನಾಯಕಿಗಾಗಿ ಹುಡುಕಾಟ ನಡೆದಿದೆ. ಶಿವಣ್ಣ ಜೊತೆ ಇದುವರೆಗೂ ಅಭಿನಯಿಸದ ತಾರೆಯನ್ನು ಕರೆತರುವ ಬಗ್ಗೆ ಹರ್ಷಾ ಚಿಂತಿಸಿದ್ದಾರೆ. ಖಳನಟನ ಪಾತ್ರಕ್ಕೆ ಬಡಾ ಸ್ಟಾರ್ ಒಬ್ಬರನ್ನು ಕರೆತರುವುದಾಗಿಯೂ ವಿವರ ನೀಡಿದ್ದಾರೆ.

'ಭಜರಂಗಿ' ಚಿತ್ರಕ್ಕೆ ಸ್ಟಿಲ್ಸ್ ಅಥವಾ ಪೋಸ್ಟರ್ಸ್ ಮೂಲಕವಲ್ಲದೆ ಕ್ಯಾರಿಕೇಚರ್ ಗಳ (ವ್ಯಂಗ್ಯ ಚಿತ್ರಗಳು) ಮೂಲಕ ವಿಭಿನ್ನ ಪ್ರಚಾರ ನೀಡಲಾಗುತ್ತದಂತೆ. ನವೆಂಬರ್ ಡಿಸೆಂಬರ್ ವೇಳೆಗೆ ಚಿತ್ರದ ಕ್ಯಾರಿಕೇಚರ್ ಗಳು ಸಿದ್ಧವಾಗಲಿವೆ ಎಂದಿದ್ದಾರೆ ಹರ್ಷಾ. (ಏಜೆನ್ಸೀಸ್)

English summary
Hat Trick Hero Century Star Shivarajkumar's new film titled as Bhajarange. choreographer turned director Harsha is the director of the film. The film, that goes on floors in February 2013. The cast and crew yet to be finalised.
Please Wait while comments are loading...