For Quick Alerts
  ALLOW NOTIFICATIONS  
  For Daily Alerts

  ಶಿವರಾಜ್‌ಕುಮಾರ್, ಪ್ರಭುದೇವ ಸಿನಿಮಾ ಟೈಟಲ್ ಜೂನ್ 9ಕ್ಕೆ ಲಾಂಚ್!

  |

  ನಟ ಶಿವರಾಜ್ ಕುಮರ್ ಮತ್ತು ಪ್ರಭುದೇವ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇದೆ. ಈ ಸುದ್ದಿಯನ್ನು ಇತ್ತೀಚೆಗಷ್ಟೇ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಖಚಿತ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದರು.

  ನಟ ಶಿವರಾಜ್‌ಕುಮಾರ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿ ಬಂದಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾದಲ್ಲಿ ಹಳೆ ಕಾಲದ ಕಥೆ ಹೊಂದಿದೆ ಎನ್ನುವುದು ಕೂಡ ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ.

  ಶಿರಸಿ ಸಹಸ್ರಲಿಂಗ ದೇವಸ್ಥಾನದಲ್ಲಿ ಪತ್ನಿ ಜೊತೆಗೆ ಶಿವರಾಜ್ ಕುಮಾರ್!ಶಿರಸಿ ಸಹಸ್ರಲಿಂಗ ದೇವಸ್ಥಾನದಲ್ಲಿ ಪತ್ನಿ ಜೊತೆಗೆ ಶಿವರಾಜ್ ಕುಮಾರ್!

  ಸದ್ಯ ಚಿತ್ರದ ಬಗ್ಗೆ ಮತ್ತೊಂದು ಸಿಹಿ ಸಮಾಚಾರ ಹೊರ ಬಿದ್ದಿದ್ದೆ. ಯೋಗರಾಜ್‌ ಭಟ್ ಹಾಗೂ ಶಿವಣ್ಣ ಕಾಂಬಿನೇಷನ್‌ನ ಸಿನಿಮಾ ಸದ್ಯದಲ್ಲೇ ಲಾಂಚ್ ಆಗಲಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಶೂಟಿಂಗ್ ಆರಂಭಿಸಲು ಸಿನಿಮಾ ತಂಡ ಸಜ್ಜಾಗಿದೆ. ಸಿನಿಮಾ ಲಾಂಚ್ ಯಾವಾಗ ಎನ್ನುವ ಬಗ್ಗೆ ಮುಂದೆ ಓದಿ..

  ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭುದೇವ, ಶಿವಣ್ಣ

  ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭುದೇವ, ಶಿವಣ್ಣ

  ಸದ್ಯಕ್ಕಂತೂ ಯಾವುದೇ ದೊಡ್ಡ ಸಿನಿಮಾ ಸೆಟ್ಟೇರಿದರೂ ಅದು ಪ್ಯಾನ್ ಇಂಡಿಯಾ ಆಗುತ್ತಾ ಎನ್ನುವ ಬಗ್ಗೆ ಪ್ರಶ್ನೆ ಮೂಡುತ್ತದೆ. ಅಂತೆಯೇ ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎನ್ನುವುದನ್ನು ಭಟ್ಟರು ಈ ಹಿಂದೆ ಫಿಲ್ಮಿ ಬೀಟ್‌ಗೆ ಖಚಿತ ಪಡಿಸಿದ್ದಾರೆ. "ಈ ಚಿತ್ರಕ್ಕಾಗಿ ದೊಡ್ಡ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ. ಇದೊಂದು ಹೈ ಓಲ್ಟೇಜ್ ಆ್ಯಕ್ಷನ್ ಡ್ರಾಮಾ ಆಗಿರಲಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾನೇ ಆಗಿದೆ. ಸದ್ಯದಲ್ಲೇ ಚಿತ್ರ ಮತ್ತು ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ." ಎಂದು ಹೇಳಿದ್ದರು.

  ಅಜ್ಜಿ ಮನೆಗೆ ಶಿವಣ್ಣ ಭೇಟಿ, ಹಳೆ ನೆನಪುಗಳ ಮೆಲುಕುಅಜ್ಜಿ ಮನೆಗೆ ಶಿವಣ್ಣ ಭೇಟಿ, ಹಳೆ ನೆನಪುಗಳ ಮೆಲುಕು

  ಜೂನ್ 9ಕ್ಕೆ ಸಿನಿಮಾ ಲಾಂಚ್!

  ಜೂನ್ 9ಕ್ಕೆ ಸಿನಿಮಾ ಲಾಂಚ್!

  ಈ ಸಿನಿಮಾ ಸೆಟ್ಟೇರಲು ಮುಹೂರ್ತ ನಿಗದಿ ಆಗಿದೆ. ಸಿನಿಮಾ ಲಾಂಚ್ ಮಾಡಲು ದಿನಾಂಕ ಕೂಡ ಫಿಕ್ಸ್ ಆಗಿದೆ. ಇದೇ ಜೂನ್ 9ರಂದು ಸಿನಿಮಾ ಸೆಟ್ಟೇರಲಿದ್ದು, ಜೊತೆಗೆ ಸಿನಿಮಾದ ಟೈಟಲ್ ಕೂಡ ಅಂದೇ ರಿವೀಲ್ ಆಗಲಿದೆ. ಈ ಸಿನಿಮಾದ ಕಥೆ ಮತ್ತು ಟೈಟಲ್ ಹೇಗೆ ವಿಭಿನ್ನವಾಗಿ ಭಟ್ಟರು ಪ್ಲ್ಯಾನ್ ಮಾಡಿದ್ದಾರೆ ಎನ್ನುವುದನ್ನು ನೋಡಬೇಕಿದೆ.

  ಶಿವಣ್ಣ ಪ್ರಭುದೇವ ಪಾತ್ರದ ಮೇಲೆ ನಿರೀಕ್ಷೆ!

  ಶಿವಣ್ಣ ಪ್ರಭುದೇವ ಪಾತ್ರದ ಮೇಲೆ ನಿರೀಕ್ಷೆ!

  ಇನ್ನು ಈ ಸಿನಿಮಾ ಶುರುವಾಗುತ್ತದೆ ಎಂದಾಗಲೇ ಸಿನಿಮಾದ ಮೇಲಿನ ಕುತೂಹಲ ಹೆಚ್ಚಾಗಿತ್ತು. ಶಿವರಾಜ್ ಕುಮಾರ್ ಪಾತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟುಕೊಂಡಿದೆ. ಜೊತೆಗೆ ಪ್ರಭುದೇವ ಕೂಡ ಹಲವು ವರ್ಷದ ನಂತರ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಅವರ ಪಾತ್ರವನ್ನು ಭಟ್ಟರು ಹೇಗೆ ಕಟ್ಟಿ ಕೊಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇನ್ನು ಇದು ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್‌ರ ಮೊದಲ ಕಾಂಬಿನೇಷನ್ ಸಿನಿಮಾ.

  ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?

  ರಾಕ್‌ಲೈನ್ ವೆಂಕಟೇಶ್ ನಿರ್ಮಾಣ!

  ರಾಕ್‌ಲೈನ್ ವೆಂಕಟೇಶ್ ನಿರ್ಮಾಣ!

  ಈ ಸಿನಿಮಾವನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದರ ಜೊತೆಗೆ ಈ ಸಿನಿಮಾದಲ್ಲಿ ದೊಡ್ಡ, ದೊಡ್ಡ ಕಲಾವಿದರು ಇದ್ದಾರೆ. ಹಾಗಾಗಿ ಈ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ಅದ್ಧೂರಿಯಾಗಿ ತಯಾರಾಗಲಿದೆ.

  English summary
  Shivarajkumar, Prabhudheva's Pan India Film Title Launch On June 9, Know More
  Wednesday, June 1, 2022, 15:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X