Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅದೆಲ್ಲಾ ನಮಗೆ ಬೇಡ: ದರ್ಶನ್ vs ಪುನೀತ್ ಫ್ಯಾನ್ ವಾರ್ ಬಗೆಗಿನ ಪ್ರಶ್ನೆಗೆ ಕೋಪಗೊಂಡ ಶಿವಣ್ಣ!
ಚಂದನವನದಲ್ಲಿ ಫ್ಯಾನ್ ವಾರ್ ಎಂಬುದು ಈ ಹಿಂದಿನಿಂದಲೂ ಸಹ ಇರುವ ಕೆಟ್ಟ ಹವ್ಯಾಸ. ತಮ್ಮ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆಯವ ಅಭಿಮಾನಿಗಳು ತಮ್ಮ ನಟನಿಗೆ ಬೆಂಬಲ ಸೂಚಿಸುವುದು ಮಾತ್ರವಲ್ಲದೇ ಅದೇ ನಕಲಿ ಖಾತೆಗಳನ್ನು ಉಪಯೋಗಿಸಿಕೊಂಡು ಇತರೆ ನಟರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಹೀಯಾಳಿಸುವ ಕೆಟ್ಟ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ.
ಒಬ್ಬರನ್ನು ನೋಡಿ ಮತ್ತೊಬ್ಬರೂ ಸಹ ಈ ಕೆಟ್ಟ ಮಾರ್ಗವನ್ನು ಅನುಸರಿಸುತ್ತಿದ್ದು ಫ್ಯಾನ್ ವಾರ್ ಅತಿರೇಕ ತಲುಪಿದೆ. ಇನ್ನು ಈ ಫ್ಯಾನ್ ವಾರ್ ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಿರದೇ ಹೊರಗೂ ಕೂಡ ಪಸರಿಸಿದೆ. ಬೇರೆ ನಟರ ಕಾರ್ಯಕ್ರಮಗಳಿಗೆ ಹೋಗಿ ತಮ್ಮ ನಟನಿಗೆ ಜೈಕಾರ ಕೂಗುವುದು, ಬೇರೆ ನಟರ ಚಿತ್ರಗಳ ಚಿತ್ರೀಕರಣದ ಸ್ಥಳಗಳಿಗೆ ಹೋಗಿ ಅಲ್ಲಿಯೂ ತಮ್ಮ ನಟನಿಗೆ ಜೈಕಾರ ಕೂಗುವ ಮೂಲಕ ಕ್ರೇಜ್ ತೋರಿಸಲು ಹೋಗಿ ಇತರೆ ನಟರ ಫ್ಯಾನ್ಸ್ ಕೆರಳಿದಂತಹ ಘಟನೆಗಳು ಈ ಹಿಂದೆ ನಡೆದಿವೆ.
ಅದೇ ರೀತಿ ಸದ್ಯ ಹೊಸಪೇಟೆ ವಿಷಯವಾಗಿ ಫ್ಯಾನ್ ವಾರ್ ತಾರಕ್ಕೇರಿದ್ದು, ಭಾರೀ ಚರ್ಚಾಸ್ಪದ ವಿಷಯವಾಗಿದೆ. ನಟ ದರ್ಶನ್ ನಟನೆಯ ಕ್ರಾಂತಿ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಹೊಸಪೇಟೆಗೆ ಬರುತ್ತೇವೆಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಲು ಆರಂಭಿಸಿದ ದರ್ಶನ್ ಅಭಿಮಾನಿಗಳು ಈ ಹಿಂದೆ ದರ್ಶನ್ ಅಪ್ಪು ಕುರಿತಾಗಿ ನೀಡಿದ್ದ ಹೇಳಿಕೆಯಿಂದ ಕೋಪಕ್ಕೀಡಾಗಿ ಕ್ರಾಂತಿ ಚಿತ್ರವನ್ನು ಹೊಸಪೇಟೆಯಲ್ಲಿ ಬ್ಯಾನ್ ಮಾಡುತ್ತೇವೆ ಎಂದಿದ್ದ ಅಪ್ಪು ಅಭಿಮಾನಿಗಳನ್ನು ಕಿಚಾಯಿಸಲು ಆರಂಭಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬ್ಯಾನ್ ಮಾಡುತ್ತೇವೆ ಎಂದಿದ್ರಲ್ಲ, ನಿಮ್ಮ ಊರಿಗೆ ಬಾಸ್ ಬರುತ್ತಿದ್ದಾರೆ ಏನ್ ಮಾಡ್ಕೊತಿರೋ ಮಾಡಿಕೊಳ್ಳಿ ಎಂದು ಪ್ರಚೋದಿಸಿದ್ದರು. ಪರಿಣಾಮ ಕ್ರಾಂತಿ ಚಿತ್ರದ ಆಡಿಯೋ ಬಿಡುಗಡೆ ಜಾಗದಲ್ಲೇ ಪುನೀತ್ ಬ್ಯಾನರ್ ನೆಟ್ಟ ಅಪ್ಪು ಫ್ಯಾನ್ಸ್ ಕ್ರಾಂತಿ ಸ್ಟೇಜ್ ಹತ್ತಿ ಪುನೀತ್ ಫೋಟೊ ಹಿಡಿದು ಕುಣಿದಾಡಿದ್ದರು. ಅಷ್ಟೇ ಅಲ್ಲದೇ ಕ್ರಾಂತಿ ಚಿತ್ರದ ಬ್ಯಾನರ್‌ಗಳನ್ನು ಹರಿದುಹಾಕಿದ್ದರು. ಹೀಗೆ ಹೊಸಪೇಟೆಯಲ್ಲಿ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ಫ್ಯಾನ್ ವಾರ್ ತೀವ್ರಗೊಂಡಿತ್ತು. ಇನ್ನು ಈ ಹಿಂದೆ ಫ್ಯಾನ್ ವಾರ್ ಕುರಿತು ಹಲವಾರು ಬಾರಿ ಪ್ರತಿಕ್ರಿಯಿಸಿರುವ ಶಿವಣ್ಣ ಅವರಿಗೆ ಈ ಪ್ರಸ್ತುತ ನಡೆಯುತ್ತಿರುವ ಫ್ಯಾನ್ ವಾರ್ ಕುರಿತು ಪ್ರಶ್ನೆ ಕೇಳಿದಾಗ ಶಿವಣ್ಣ ಕೋಪ ಹೊರಹಾಕಿದ ಘಟನೆ ನಡೆದಿದೆ.

ಶಿವಣ್ಣ ಹೇಳಿದ್ದಿಷ್ಟು
ಮೈಸೂರಿನಲ್ಲಿ ಘೋಸ್ಟ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದ ಶಿವ ರಾಜ್‌ಕುಮಾರ್ ಡಿಸೆಂಬರ್ 26ರಂದು ಅಲ್ಲಿಯೇ ವೇದ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ ಅವರಿಗೆ ಈಗಿನ ಫ್ಯಾನ್ ವಾರ್ ಕುರಿತು ಏನು ಹೇಳ್ತಿರಾ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ "ಇವಾಗ ಸದ್ಯಕ್ಕೆ ಬೇಡಮ್ಮ ಅದೆಲ್ಲ. ವೇದದ ಬಗ್ಗೆ ಮಾತ್ರ ಮಾತನಾಡೋಣ. ಬೇರೆ ವಿಷಯಗಳ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಸದ್ಯಕ್ಕೆ ವೇದ ಮಾತ್ರ ಸಾಕು ಬೇರೆ ಯಾವುದೂ ಬೇಡ" ಎಂದು ಉತ್ತರಿಸಿ ಫ್ಯಾನ್ ವಾರ್ ಬಗ್ಗೆ ಮಾತನಾಡಲು ತಿರಸ್ಕರಿಸಿದರು.

ಮತ್ತೆ ಹರ್ಷ ಜೊತೆ ಚಿತ್ರ ಮಾಡ್ತೀರ?
ವೇದ ಚಿತ್ರವೂ ಸೇರಿದಂತೆ ಎ ಹರ್ಷ ಜತೆ ಒಟ್ಟು ನಾಲ್ಕು ಚಿತ್ರಗಳನ್ನು ಮಾಡಿರುವ ಶಿವ ರಾಜ್‌ಕುಮಾರ್ ಹರ್ಷ ಜತೆ ಮತ್ತೊಂದು ಚಿತ್ರ ಮಾಡ್ತೀರಾ ಎಂಬ ಪ್ರಶ್ನೆ ಎದುರಾದಾಗ ಒಂದಲ್ಲ ಹತ್ತು, ಇಪ್ಪತ್ತು ಚಿತ್ರ ಮಾಡ್ತೀವಿ, ನಿಮಗೇನು ಹೊಟ್ಟೆಕಿಚ್ಚಾ ಎಂದು ನಗುತ್ತಾ ಉತ್ತರಿಸಿದ ಶಿವಣ್ಣ ಪ್ರಶ್ನೆ ಕೇಳಿದವರ ಕಾಲೆಳೆದರು.

ಶಿವಣ್ಣ ಥಿಯೇಟರ್ ವಿಸಿಟ್
ವೇದ ಸಕ್ಸಸ್ ಆದ ಕಾರಣ ಶಿವ ರಾಜ್‌ಕುಮಾರ್ ನಿನ್ನೆ ( ಡಿಸೆಂಬರ್ 26 ) ಮೈಸೂರಿಗೆ ಭೇಟಿ ನೀಡಿದ್ದರು. ಇಂದು ( ಡಿಸೆಂಬರ್ 27 ) ಚಾಮರಾಜನಗರ, ಟಿ ನರಸಿಪುರ, ಗುಂಡ್ಲುಪೇಟೆ ಹಾಗೂ ಹುಣಸೂರು ನಗರಗಳ ಚಿತ್ರಮಂದಿರಗಳಿಗೆ ಶಿವ ರಾಜ್‌ಕುಮಾರ್ ಭೇಟಿ ನೀಡಲಿದ್ದಾರೆ. ಇನ್ನುಳಿದಂತೆ ಡಿಸೆಂಬರ್ 28ರ ಬುಧವಾರದಂದು ಕೊಳ್ಳೇಗಾಲ, ಮಳವಳ್ಳಿ, ಮದ್ದೂರು, ಮಂಡ್ಯ ಹಾಗೂ ರಾಮನಗರದ ಚಿತ್ರಮಂದಿರಗಳಿಗೆ ಶಿವ ರಾಜ್‌ಕುಮಾರ್ ಆಗಮಿಸಲಿದ್ದಾರೆ.