twitter
    For Quick Alerts
    ALLOW NOTIFICATIONS  
    For Daily Alerts

    ಜೋಗಿ ಚಿತ್ರಕ್ಕೆ 16 ವರ್ಷದ ಸಂಭ್ರಮ: ಪ್ರೇಮ್-ಶಿವಣ್ಣ ಕಾಂಬಿನೇಷನ್‌ನಲ್ಲಿ ಬಂದ ಈ ಸಿನಿಮಾದ ದಾಖಲೆಗಳೇನು?

    |

    ಜೋಗಿ ಅಂದಾಕ್ಷಣ ತಾಯಿ-ಮಗನ ಬಾಂಧವ್ಯ, ರೌಡಿಸಂ, ಸೂಪರ್ ಹಿಟ್ ಗೀತೆಗಳು, ಜೋಗಿ ಅಲಿಯಾಸ್ ಮಾದೇಶ, ಬಿಡ್ಡ, ಪಟ್ರೆ, ಕೋಟೆ ಸಿದ್ದ, ಪುಂಗ ಪಾತ್ರಗಳು ಥಟ್ ಅಂತ ನೆನಪಾಗುತ್ತೆ. 16 ವರ್ಷಗಳು ಕಳೆದರು ಈ ಪಾತ್ರಗಳು ಚಿತ್ರರಸಿಕರ ಮನದಲ್ಲಿ ಇನ್ನು ಹಸಿರಾಗೆ ಇದೆ.

    ಇಂದು 16 ವರ್ಷದ ತುಂಬಿದ ಸಂತಸವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ನೆಚ್ಚಿನ ಹೀರೋ ನಟನೆಯ ಸೂಪರ್ ಹಿಟ್ ಸಿನಿಮಾ, ಅನೇಕ ದಾಖಲೆಗಳನ್ನು ಮಾಡಿದ ಸಿನಿಮಾಗೆ 16 ವರ್ಷ ತುಂಬಿದ ಖುಷಿಯನ್ನು ಜಾತ್ರೆಯಂತೆ ಆಚರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೋಗಿ ಸಂಭ್ರಮ ಜೋರಾಗಿದೆ.

    ಶಿವರಾಜ್ ಕುಮಾರ್ ಮತ್ತು ಪ್ರೇಮ್ ಕಾಂಬಿನೇಷನ್ ಕನ್ನಡಿಗರನ್ನು ಮೋಡಿ ಮಾಡಿತ್ತು. ಒಂದು ಕಾಲದಲ್ಲಿ ಕನ್ನಡ ಚಿತ್ರಪ್ರಿಯರನ್ನು ನಿದ್ದೆ ಗೆಡಿಸಿದ್ದ ಸಿನಿಮಾ ಜೋಗಿ. ಅಂದು ಎಲ್ಲಿ ನೋಡಿದ್ರು ಜೋಗಿ ಚಿತ್ರದ್ದೆ ಮಾತು, ಯಾವ ಚಿತ್ರಮಂದಿರಗಳಲ್ಲಿ ನೋಡಿದ್ರು ಜೋಗಿ ಸಿನಿಮಾದೆ ಪೋಸ್ಟರ್ಸ್, ಬ್ಯಾನರ್ಸ್. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಜೋಗಿ ಸಿನಿಮಾ ಬಿಡುಗಡೆಯಾಗಿ 16 ವರ್ಷಗಳನ್ನೇ ಕಳೆದಿದೆ.

    ಇಂಡಸ್ಟ್ರಿಯಲ್ಲಿ ಇಷ್ಟೆಲ್ಲಾ ಅಬ್ಬರ ಮಾಡಿದ್ದ ಜೋಗಿ ಹೆಸರಿನಲ್ಲಿ ಹತ್ತು ಹಲವು ದಾಖಲೆಗಳಿವೆ. ಬಹುಶಃ ಈ ದಾಖಲೆಗಳನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ದಾಖಲೆಗಳ ಬಗ್ಗೆ ಇಲ್ಲದೆ ವಿವರ. ಮುಂದೆ ಓದಿ....

    ಜೋಗಿ ಮಾಡಿದ ಕಲೆಕ್ಷನ್ ಎಷ್ಟು?

    ಜೋಗಿ ಮಾಡಿದ ಕಲೆಕ್ಷನ್ ಎಷ್ಟು?

    16 ವರ್ಷಗಳ ಹಿಂದೆ ಇದೇ ದಿನ (ಆಗಸ್ಟ್ 19) ತೆರೆಕಂಡಿದ್ದ ಜೋಗಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಹುದೊಡ್ಡ ಹಿಟ್ ಆಗಿತ್ತು. ಸ್ವತಃ ನಿರ್ದೇಶಕ ಪ್ರೇಮ್ ಹೇಳುವಂತೆ ಆಗಿನ ಸಮಯದಲ್ಲಿ 22 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಅಂದ್ರೆ, ಇಂದಿನ ಸಮಯಕ್ಕೆ ಅದನ್ನು ಲೆಕ್ಕ ಹಾಕಿದರೆ ಸುಮಾರು 300 ಕೋಟಿ ರೂ. ಗೂ ಅಧಿಕವಾಗಿರಲಿದೆ. ಅಂದ್ಮೇಲೆ ಇಂದಿನ ಚಿತ್ರಗಳು ಮಾಡದ ದಾಖಲೆಯನ್ನು ಜೋಗಿ ಆಗಲೇ ಮಾಡಿ ಬಿಟ್ಟಿತ್ತು.

    16 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಣೆ

    16 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಣೆ

    ಬೆಂಗಳೂರಿನ 16 ಚಿತ್ರಮಂದಿರಗಳಲ್ಲಿ ಜೋಗಿ ಸಿನಿಮಾ ಶತದಿನ ಆಚರಿಸಿಕೊಂಡಿತ್ತು. ಇದು ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ. ಕಪಾಲಿ, ವೀರೇಶ್, ನವರಂಗ್, ಪಿವಿಆರ್ ಫೋರಮ್, ಐನಾಕ್ಸ್ ಗರುಡ, ಸಿದ್ದೇಶ್ವರ, ಲಕ್ಷ್ಮೀ ತಾವರೇಕೆರೆ, ಈಶ್ವರಿ, ವಿನಾಯಕ, ಆದರ್ಶ, ಕೃಷ್ಣ ,ಮೋಹನ್, ಗೋವರ್ಧನ್, ವಜ್ರೇಶ್ವರಿ, ಭಾರತಿ ಚಿತ್ರಮಂದಿರಗಳಲ್ಲಿ ಜೋಗಿ ಶತದಿನೋತ್ಸವ ಆಚರಣೆ ಮಾಡಿತ್ತು. ಜೋಗಿ ಸಿನಿಮಾ ಬಿಟ್ಟರೆ ಬೇರೆ ಯಾವ ಚಿತ್ರವೂ ಸಿಲಿಕಾನ್ ಸಿಟಿಯಲ್ಲಿ 16 ಕೇಂದ್ರದಲ್ಲಿ ಶತದಿನ ಪೂರೈಸಿಲ್ಲ.

    ದಾಖಲೆ ಪ್ರದರ್ಶನ

    ದಾಖಲೆ ಪ್ರದರ್ಶನ

    ಜೋಗಿ 72 ಕೇಂದ್ರಗಳಲ್ಲಿ 25 ದಿನ ಪೂರೈಸಿ, 63 ಕೇಂದ್ರಗಳಲ್ಲಿ 50 ದಿನ ಪೂರೈಸಿ, 54 ಕೇಂದ್ರಗಳಲ್ಲಿ 75 ದಿನ ಪ್ರದರ್ಶನ ಕಂಡು, 45 ಕೇಂದ್ರಗಳಲ್ಲಿ (61ಕ್ಕೂ ಹೆಚ್ಚು ಚಿತ್ರಮಂದಿರ) 100 ದಿನ ಪೂರೈಸಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ವೀರೇಶ್ ಚಿತ್ರಮಂದಿರದಲ್ಲಿ 50 ದಿನದವರೆಗೂ ಹೌಸ್‌ಪುಲ್ ಪ್ರದರ್ಶನ ಕಂಡಿತ್ತು ಎನ್ನುವುದು ವಿಶೇಷ.

    ಆಡಿಯೋ ಕಂಪನಿಯ ಲಾಭ

    ಆಡಿಯೋ ಕಂಪನಿಯ ಲಾಭ

    ಜೋಗಿ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ಸಂಗೀತ ನೀಡಿದ್ದರು. ಅಶ್ವಿನಿ ಆಡಿಯೋ ಕಂಪನಿ ಅವರು ಜೋಗಿ ಚಿತ್ರದ ಹಾಡುಗಳಿಂದ ಸುಮಾರು 4 ಕೋಟಿ ರೂ. ದುಡ್ಡು ಮಾಡಿದರು. ಬಹುಶಃ ಆಗಿನ ಸಮಯಕ್ಕೆ ಆಡಿಯೋ ಕಂಪನಿಯೊಂದು 4 ಕೋಟಿ ರೂ. ಗಳಿಸಿದ್ದು ಅಂದ್ರೆ ಅದು ಜೋಗಿ ಮೂಲಕ ಎಂದು ನಿರ್ದೇಶಕ ಪ್ರೇಮ್ ಹೇಳಿಕೊಂಡಿದ್ದರು.

    English summary
    Shivarajkumar's Jogi Movie Completes 16 Years; Know Interesting Facts about the Prem's movie
    Thursday, August 19, 2021, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X